ಈಗಿನ ಸುದ್ದಿ

'ಮೋದಿ ಒಬ್ಬ 'ಭಸ್ಮಾಸುರ', ಗುರುವನ್ನೇ ಸುಡುವ ದೂರ್ತ'

Published On :

ನವದೆಹಲಿ: ಗುರು ಸ್ಥಾನದಲ್ಲಿದ್ದು ತನಗೆ ರಾಜಕೀಯ ದೀಕ್ಷೆಕೊಟ್ಟ ಗುರುವನ್ನೇ ಸುಡಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಮುಂದಾಗಿದ್ದು, ಮೋದಿ ಒಬ್ಬ ಭಸ್ಮಾಸುರ ಎಂದು ಕೇಂದ್ರ ಸಚಿವ ಜೈರಾಮ್ ರಮೇಶ್ ಎಂದು ಹೇಳಿದ್ದಾರೆ.

ಬಿಜೆಪಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ, ಪೌರಾಣಿಕ ಕತೆಗಳಲ್ಲಿ ಕಂಡು ಬರುವಂತೆ ಬಿಜೆಪಿಯಲ್ಲೂ ಸಹ ಗದ್ದುಗೆಗಾಗಿ ಹಗ್ಗ ಜಗ್ಗಾಟ ನಡೆಯುತ್ತಿದೆ. ಪೌರಾಣಿಕ ಕತೆಯಲ್ಲಿ ಬರುವ ಭಸ್ಮಾಸುರನು ತನ್ನ ದಾರಿಗೆ ಅಡ್ಡ ಬರುವವರನ್ನು ಸುಡುತ್ತಾ ಸಾಗುತ್ತಾನೆ. ಅದೇ ರೀತಿ ಮೋದಿ ಸಹ ತನಗೆ ರಾಜಿಕೀಯ ಮಜಲುಗಳನ್ನು ಹೇಳಿಕೊಟ್ಟ ಗುರು ಸ್ಥಾನದಲ್ಲಿರುವ ಎಲ್.ಕೆ. ಆಡ್ವಾಣಿ ಅವರನ್ನೆ ಸುಡಲು ಮುಂದಾಗಿದ್ದಾರೆ. ಇದರೊಂದಿಗೆ ಮೋದಿ ತನ್ನ ಹಾದಿಗೆ ಅಡ್ಡ ಬಂದವರು ಯಾರಾದರು ಸರಿ ಅವರನ್ನು ಸುಡದೇ ಬಿಡುವುದಿಲ್ಲ ಎಂದು ಸಾಬೀತು ಪಡಿಸಿದ್ದಾರೆ ಎಂದರು.

ಮುಂದಿನ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಇಬ್ಬರು ಪ್ರಧಾನಿ ಹುದ್ದೆ ಆಕಾಂಕ್ಷಿಗಳಾಗಿದ್ದಾರೆ. ಅದರಲ್ಲಿ ಒಬ್ಬರು ಬಿಜೆಪಿಯ ನರೇಂದ್ರ ಮೋದಿ, ಮತ್ತೊಬ್ಬರು ಕಾಂಗ್ರೆಸ್ನ ರಾಹುಲ್ ಗಾಂಧಿ. ಇವರಿಬ್ಬರ ಸ್ವಭಾವಗಳನ್ನು ನೋಡಿದರೆ ರಾಹುಲ್ ಗಾಂಧಿ ಒಬ್ಬ ಮೌಲ್ಯವರ್ಧಿತ ರಾಜಕೀಯ ನಡೆಸಲು ಮುಂದಾಗಿರುವಂತೆ ಕಾಣುತ್ತಾರೆ. ಅದೇ ವೇಳೆ ಮೋದಿ ಅವರು ಸರ್ವಾಧಿಕಾರ ಧೋರಣೆಯನ್ನು ಪ್ರತಿಪಾದಿಸುತ್ತಿದ್ದಾರೆ ಎಂದು ಸಚಿವರು ಮೋದಿ ವಿರುದ್ದ ಹರಿಹಾಯ್ದರು.

2014 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ ಬೆನ್ನಲ್ಲೇ ಮೋದಿ ಅವರ ವಿರುದ್ಧ ಕಾಂಗ್ರೆಸ್ ತನ್ನ ಒಂದೊಂದೇ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲು ಮುಂದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.