ಈಗಿನ ಸುದ್ದಿ

ಜೆಡಿಯು-ಬಿಜೆಪಿ ಬಿಕ್ಕಟ್ಟು,ನಿತೀಶ್ ನಿವಾಸದಲ್ಲಿ ತುರ್ತು ಸಭೆ

ಜೆಡಿಯು-ಬಿಜೆಪಿ ಬಿಕ್ಕಟ್ಟು,ನಿತೀಶ್  ನಿವಾಸದಲ್ಲಿ ತುರ್ತು ಸಭೆ
Published On :

ಪಾಟ್ನಾ: ಬಿಹಾರದಲ್ಲಿ ಜೆಡಿಯುಗೆ ನೀಡಿರುವ ಬೆಂಬಲವನ್ನು ಬಿಜೆಪಿ ಹಿಂಪಡೆಯುವ ಸೂಚನೆ ನೀಡಿದ್ದರಿಂದ, ಭಾನುವಾರ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತುರ್ತು ಸಚಿವ ಸಂಪುಟ ಸಭೆ ಕರೆದಿದ್ದಾರೆ.

ಪಾಟ್ನಾದ ನಿತೀಶ್ ಕುಮಾರ್ ಅವರ ನಿವಾಸದಲ್ಲಿ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಬಿಜೆಪಿಯ ಮೈತ್ರಿ ಸಂಬಂಧ ಚರ್ಚೆಗಳು ನಡೆಯಲಿವೆ. ಸಭೆಯ ನಂತರ ಜೆಡಿಯು ಹಾಗೂ ಬಿಜೆಪಿಯ ಮೈತ್ರಿಯನ್ನು ಮುಂದುವರೆಸಬೇಕೆ, ಇಲ್ಲವೆ ಎಂಬ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಲಿದೆ.

ನಿತೀಶ್ ಕುಮಾರ್ ಅವರು ಕರೆದಿರುವ ತುರ್ತು ಸಚಿವ ಸಂಪುಟ ಸಭೆಗೆ ಉದ್ದೇಶ ಪೂರ್ವಕವಾಗಿ ಸಭೆಯಿಂದ ದೂರ ಉಳಿಯಲು ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಸೇರಿದಂತೆ ಬಿಜೆಪಿಯ 11 ಸಚಿವರು ನಿರ್ಧರಿಸಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

ಎನ್‌ಡಿಎ ಮೈತ್ರಿಕೂಟದಿಂದ ಹೊರ ಬರುವುದಾಗಿ ಜೆಡಿಯು ನಿರ್ಧರಿಸಿದ್ದು, ಆ ಸಂಬಂಧ ಇಂದು ತನ್ನ ಅಂತಿಮ ನಿರ್ಧಾರ ಪ್ರಕಟಿಸಲಿತ್ತು. ಇದರಿಂದ ಬಿಹಾರದಲ್ಲಿ ಸರ್ಕಾರ ನಡೆಸಲು ಜೆಡಿಯುಗೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯುವುದಾಗಿ ಬಿಜೆಪಿ  ಶನಿವಾರ ಎಚ್ಚರಿಕೆ ನೀಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.