ಈಗಿನ ಸುದ್ದಿ

ವೀಸಾವಧಿ ಮುಗಿದ ಭಾರತೀಯರಿಗೆ ಸೌದಿ ತೊರೆಯಲು ಸೂಚನೆ

ವೀಸಾವಧಿ ಮುಗಿದ ಭಾರತೀಯರಿಗೆ ಸೌದಿ ತೊರೆಯಲು ಸೂಚನೆ
Published On :

ದುಬೈ: ವೀಸಾವಧಿ ಮುಗಿದರು ಸೌದಿ ಅರೆಬಿಯಾದಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳೂ ಈ ಕೂಡಲೆ ಈ ದೇಶ ತೊರೆಯುವಂತೆ ಅಲ್ಲಿನ ಭಾರತೀಯ ರಾಯಭಾರಿ ಕಚೇರಿ ಸೋಮವಾರ ಸೂಚಿಸಿದೆ. ಅಲ್ಲದೆ ದೇಶ ತೊರೆಯುವ ಮುನ್ನ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ತುರ್ತು ಪ್ರಮಾಣಪತ್ರ ಪಡೆಯುವಂತೆಯೂ ತಿಳಿಸಿದೆ.

ಸೌದಿಯಲ್ಲಿ ನೆಲೆಸಲು ಭಾರತೀಯರು ತಾವು ಪಡೆದುಕೊಂಡಿದ್ದ ವೀಸಾ ಅವಧಿ ಮುಗಿದಿದ್ದರು, ದೇಶಕ್ಕೆ ಹಿಂತಿರುಗದೆ ಇಲ್ಲೆ ನೆಲೆಸಿರುವ ಪ್ರತಿಯೊಬ್ಬ ಭಾರತೀಯನು ಕಾನೂನು ಕ್ರಮಕ್ಕೆ ಒಳಗಾಗಬೇಕಾಗುತ್ತದೆ. ಇಲ್ಲಿನ ಕಾನೂನಿನನ್ವಯ ಜೈಲು ಶಿಕ್ಷೆ ಸೇರಿದಂತೆ, ದಂಡ ಹಾಗೂ ಗಡಿಪಾರು ಕ್ರಿಯೆಯನ್ನು ಎದುರಿಸಬೇಕಾಗುತ್ತದೆ ಎಂದು ರಾಯಭಾರಿ ಕಚೇರಿ ಎಚ್ಚರಿಸಿದೆ.

ಸೌದಿ ಆಡಳಿತ ಕಚೇರಿ ನೀಡಿರುವ ಹೆಚ್ಚುವರಿ ಗಡುವು ಜುಲೈ 3ರಂದು ಕೊನೆಗೊಳ್ಳುವ ಹಿನ್ನಲೆಯಲ್ಲಿ, ಈ ಕೂಡಲೆ ದೇಶವನ್ನು ತೊರೆಯುವಂತೆ, ಹಾಗೂ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳುವಂತೆ ತನ್ನ ಪ್ರಜೆಗಳಿಗೆ ಭಾರತೀಯ ರಾಯಭಾರಿ ಕಚೇರಿ ಸೂಚಿಸಿದೆ.

ರಾಯಭಾರಿ ಕಚೇರಿಯ ಪ್ರಕಾರ, ಪರದೇಶಗಳಲ್ಲಿ ನೆಲೆಸಲು ಪ್ರತಿಯೊಬ್ಬರಿಗೂ ಇಂತಿಷ್ಟು ದಿನ ನೆಲೆಸುವಂತೆ ಮೊದಲೆ ಸೂಚಿಸಿ ವೀಸಾ ನೀಡಲಾಗಿರುತ್ತದೆ. ಆದರೆ ತಮ್ಮ ವೀಸಾ ಅವಧಿ ಮುಗಿಯುತ್ತಿದ್ದಂತೆ ದೇಶ ತೊರೆಯಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿ ಇಲ್ಲಿಯೇ ನೆಲೆಸಿರುವ ಪ್ರಜೆಗಳು ದೇಶ ತೊರೆಯುವ ಸಂದರ್ಭದಲ್ಲಿ ಅಸಲಿ ಪಾಸ್‌ಪೋರ್ಟ್ ತೋರಿಸಬೇಕಾಗಿರುತ್ತದೆ. ಅವಧಿ ಮುಗಿದ ವೀಸಾ ಬಳಸಿಕೊಂಡು ದೇಶ ತೊರೆಯಲು ಸಾಧ್ಯವಿಲ್ಲ. ಒಂದು ವೇಳೆ ತೊರೆಯಲು ಮುಂದಾದರೆ  ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ಒಂದು ವೇಳೆ ಯಾರಾದರು ತಮ್ಮ ನೌಕರಿಯನ್ನು ಬದಲಿಸಿಕೊಂಡಿದ್ದರೆ ಅಂತಹ ಸಂದರ್ಭದಲ್ಲಿ ವೀಸಾ ಅವಧಿ ವಿಸ್ತರಣೆ ಸಂಬಂಧ ಕೆಲವೊಂದು ಕ್ರಮಗಳನ್ನು ಪಾಲಿಸಬೇಕಾಗುತ್ತದೆ ಎಂದು ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.