ಬಿಜೆಪಿ-ಜೆಡಿಯು ಜಟಾಪಟಿ: 6 ಮಂದಿಗೆ ಗಾಯ

ಪಾಟ್ನಾ: ಬಿಜೆಪಿ ಸಚಿವರನ್ನು ವಜಾ ಮಾಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕ್ರಮವನ್ನು ಖಂಡಿಸಿ ಇಂದು ಬಿಹಾರ್ ಬಂದ್ಗೆ ಬಿಜೆಪಿ ಕರೆ ನೀಡಿದ್ದು, ಬಂದ್ ವೇಳೆ ಬಿಜೆಪಿ ಹಾಗೂ ಜೆಡಿಯು ಕಾರ್ಯಕರ್ತರ ನಡುವೆ ನಡೆದ ಮಾರಾಮಾರಿಯಲ್ಲಿ 6 ಮಂದಿಗೆ ತೀವ್ರ ಗಾಯಗಳಾಗಿವೆ.
ಬಿಜೆಪಿ ಸಚಿವರನ್ನು ವಜಾ ಮಾಡಿರುವ ನಿತೀಶ್ ಕುಮಾರ್ ಅವರು ಬಿಜೆಪಿಗೆ ನಂಬಿಕೆದ್ರೋಹ ಎಸಗಿದ್ದಾರೆ ಎಂದು ಆರೋಪಿಸರುವ ಬಿಜೆಪಿ ಕಾರ್ಯಕರ್ತರು, ಜೆಡಿಯು ಕ್ರಮವನ್ನು ಖಂಡಿಸಿ ರಸ್ತೆಗಳಿದು ಪ್ರತಿಭಟಿಸುತ್ತಿದ್ದಾರೆ. ಪ್ರತಿಭಟನೆಯನ್ನು ತಡೆಯಲು ಮುಂದಾದ ಜೆಡಿಯು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಿಕಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದ ಎರಡು ಬಣಗಳು ಕಬ್ಬಿಣ ಸಲಾಕೆ ಹಾಗೂ ಬಿದಿರು ಬಂಬುಗಳಿಂದ ಬಡಿದಾಡಿಕೊಂಡಿದ್ದು, ಘಟನೆಯಲ್ಲಿ 6 ಮಂದಿಗೆ ತೀವ್ರ ಗಾಯಗಳಾಗಿವೆ.
ರಾಜ್ಯದ ಪ್ರಮುಖ ರೇಲ್ವೆ ನಿಲ್ದಾಣಗಳಿಗೆ ದಾಳಿ ಇಟ್ಟಿರುವ ಪ್ರತಿಭಟನಾಕಾರರು ಹಲವು ರೈಲುಗಳನ್ನು ಬಲವಂತವಾಗಿ ತಡೆಹಿಡಿದಿದ್ದು, ಬಂದ್ಗೆ ಬೆಂಬಲಿಸುವಂತೆ ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೀಡುಬಿಟ್ಟಿರುವ ಪ್ರತಿಭಟನಾಕಾರರು ರಸ್ತೆ ಸಂಚಾರವನ್ನು ಬಂದ್ ಮಾಡಿರುವುದರಿಂದ ಸವಾರರು ಪರದಾಡುವಂತ ಪರಿಸ್ಥಿತಿ ಉಲ್ಬಣವಾಗಿದೆ.
ಬಿಜೆಪಿ ಹಾಗೂ ಜೆಡಿಯು ಕಾರ್ಯಕರ್ತರ ನಡುವಣ ಸಂಘರ್ಷದಲ್ಲಿ ಜೆಡಿಯು ಪಕ್ಷದ ವಕ್ತಾರ ರಾಜೀವ್ ರಂಜನ್ ಸೇರಿ, ಪಕ್ಷದ ಇತರ ಮೂವರು ನಾಯಕರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜೆಡಿಯು ಕ್ರಮವನ್ನು ಖಂಡಿಸಿರುವ ಬಿಜೆಪಿ ಇಂದು 'ವಿಶ್ವಾಸಗಾತ್ ದಿನ' ಎಂದು ಘೋಷಣೆ ಮಾಡಿದ್ದು, ಜೆಡಿಯುನ ವಿರುದ್ಧ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸುತ್ತಿದೆ.
ಎನ್ಡಿಎದೊಂದಿಗಿನ ಮೈತ್ರಿ ಮುರಿದಕೊಂಡ ನಂತರ ತಮ್ಮ ಸಂಪುಟದ ಬಿಜೆಪಿ ಸಚಿವರನ್ನು ವಜಾಗೊಳಿಸಿದ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಕ್ರಮವನ್ನು ಖಂಡಿಸಿ ಬಿಜೆಪಿ ಇಂದು ಬಿಹಾರ್ ಬಂದ್ಗೆ ಕರೆ ನೀಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


