ಈಗಿನ ಸುದ್ದಿ

ಹಿಮಾಚಲ ಸಿಎಂ ಸೇರಿ 12 ಪ್ರವಾಸಿಗರ ರಕ್ಷಣೆ

ಹಿಮಾಚಲ ಸಿಎಂ ಸೇರಿ 12 ಪ್ರವಾಸಿಗರ ರಕ್ಷಣೆ
Published On :

ಸಿಮ್ಲಾ: ಉತ್ತರ ಭಾರತದಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತ ಸಂಭವಿಸಿದ್ದರಿಂದ ಗಡಿಪ್ರದೇಶ ಕಿನ್ನೌರ್‌ನಲ್ಲಿ ಅಪಾಯಕ್ಕೆ ಸಿಕ್ಕಿಹಾಕಿಕೊಂಡಿದ್ದ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಸೇರಿದಂತೆ 12 ಪ್ರವಾಸಿಗರನ್ನು ರಕ್ಷಣಾ ಸಿಬ್ಬಂದಿ ಮಂಗಳವಾರ ರಕ್ಷಿಸಿದ್ದಾರೆ.

ಲೋಕಸಭೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವೀರಭದ್ರ ಸಿಂಗ್ ಅವರು ಕಿನ್ನೌರ್ ಬುಡಕಟ್ಟು ಪ್ರದೇಶದಲ್ಲಿ ಸತತ 60 ಗಂಟೆಗಳ ಕಾಲ ಸಿಲುಕಿಕೊಂಡಿದ್ದರು. ಇಂದು ಮುಂಜಾನೆ ನಡೆದ ರಕ್ಷಣಾ ಕಾರ್ಯದಲ್ಲಿ ಸಿಎಂ ಸೇರಿ 12 ಮಂದಿ ಪ್ರವಾಸಿಗರನ್ನು ಹೆಲಿಕಾಫ್ಟರ್ ಮೂಲಕ ರಕ್ಷಿಸಲಾಗಿದೆ.

ಮಂಗಳವಾರ ಹಿಮಾಚಲದಲ್ಲಿ ಮಳೆ ನಿಂತಿದ್ದು, ವಾತಾವರಣ ತಿಳಿಗೊಂಡಿದ್ದರಿಂದ ರಕ್ಷಣಾ ಕಾರ್ಯದಲ್ಲಿ ತೊಡಗಿದ ರಕ್ಷಣಾ ಸಿಬ್ಬಂದಿಗಳು ಸಿಎಂ ಹಾಗೂ ಇತರ 11 ಮಂದಿ ವಯೋವೃದ್ದರನ್ನು ರಕ್ಷಿಸಿ, ಹೆಲಿಕಾಫ್ಟರ್ ಮೂಲಕ ಅವರನ್ನು ರಾಮಪುರಕ್ಕೆ ಕರೆತರಲಾಯಿತು ಎಂದು ರಾಜ್ಯ ಕಾರ್ಯದರ್ಶಿ ಭರತ್ ಕೇರಾ ಅವರು ತಿಳಿಸಿದ್ದಾರೆ.

ಕಿನ್ನೌರ್‌ನ ಸುತ್ತಮುತ್ತಲು ಸುಮಾರು 1700 ಮಂದಿ ಪ್ರವಾಸಿಗರು ಸಿಲುಕಿಕೊಂಡಿರುವುದಾಗಿ ತಿಳಿದುಬಂದಿದೆ. ಹೀಗಾಗಿ ಪ್ರವಾಸಿಗರನ್ನು ರಕ್ಷಿಸುವ ಕಾರ್ಯದಲ್ಲಿ ಸಿಬ್ಬಂದಿ ತೊಡಗಿಕೊಂಡಿದ್ದು, ಮೊದಲಿಗೆ ವಯೋವೃದ್ದರು, ಮಹಿಳೆಯರು ಹಾಗೂ ಮಕ್ಕಳನ್ನು ರಕ್ಷಿಸಲಾಗುವುದು. ಪ್ರವಾಸಿಗರ ರಕ್ಷಣೆಗಾಗಿ ಹೆಲಿಕಾಫ್ಟರ್‌ಗಳನ್ನು ಬಳಸಲಾಗುತ್ತಿದೆ ಎಂದರು.  

ಹಿಮಾಚಲಪ್ರದೇಶದಲ್ಲೂ ಮುಂಗಾರು ಮಳೆ ಭಾರಿ ಹಾನಿ ಉಂಟುಮಾಡಿದೆ. ಗಡಿಪ್ರದೇಶದ ಕಿನ್ನೌರ್ ಜಿಲ್ಲೆಯ ಸಾಂಗ್ಲಾ ತೆರಳಿದ್ದ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅಲ್ಲೇ ಉಳಿಯುವಂತಾಗಿತ್ತು. ಮಂಡಿ ಲೋಕಸಭೆ ಉಪಚುನಾವಣೆ ಪ್ರಚಾರಕ್ಕೆ ತೆರಳಿದ್ದ ವೇಳೆ ಭಾರಿ ಮಳೆ ಸುರಿದದ್ದರಿಂದ ಸಾಂಗ್ಲಾ ಕಣಿವೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿಕೊಂಡು ಹೋಗಿದ್ದರಿಂದ ಅವರು ಅಲ್ಲಿಯೇ ಉಳಿಯುವಂತಾಗಿತ್ತು.  ಮುಖ್ಯಮಂತ್ರಿ ಸೇರಿ  700 ಮಂದಿ ಹಾಗೂ ಹಿಮಾಚಲ ಪ್ರದೇಶದ ಇತರೆಡೆ ಪ್ರವಾಹ, ಭೂಕುಸಿತದಿಂದಾಗಿ 1000 ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಮಳೆಸಂಬಂಧಿ ದುರಂತದಲ್ಲಿ 10 ಮಂದಿ ಅಸುನೀಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.