ಉತ್ತರಾಖಂಡ: ಸಾವಿನ ಸಂಖ್ಯೆ 822 ಏರಿಕೆ

ಡೆಹ್ರಾಡೂನ್: ಉತ್ತರಾಖಂಡನಲ್ಲಿ ಸಂಭವಿಸಿದ ಜಲಪ್ರಳಯ ಹಾಗೂ ಭೂಕುಸಿತದಲ್ಲಿ ಸುಮಾರು 822 ಮಂದಿ ಮೃತರಾಗಿದ್ದು, ಇನ್ನೂ 8 ಸಾವಿರ ಮಂದಿ ಬೆಟ್ಟಗುಡ್ಡಗಳನ್ನೇ ಆಶ್ರಯಿಸಿದ್ದಾರೆ. ಅಲ್ಲದೆ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿ ಉಂಟಾಗಿದೆ ಎಂದು ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ.
ಪ್ರವಾಹದಲ್ಲಿ ಕೊಚ್ಚಿ ಹೋಗಿರುವವರ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ಇಂದು ಸಹ ಮುಂದುವರೆದಿದೆ. ಪವಿತ್ರ ಧಾರ್ಮಿಕ ಸ್ಥಳ ಕೇದಾರ್‌ನಾಥ್‌ದಲ್ಲಿ ಸೋಮವಾರ ಸಿಕ್ಕಿರುವ 127 ಮೃತದೇಹಗಳು ಸೇರಿ ಒಟ್ಟು 142 ಮಂದಿಯ ಕಳೇಬರಹಗಳನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದು, ಇದರೊಂದಿಗೆ ಪ್ರವಾಹಕ್ಕೆ ಸಿಕ್ಕು ಮೃತಪಟ್ಟಿರುವವರ ಸಂಖ್ಯೆ 822ಕ್ಕೆ ಏರಿದೆ.
ಸೋಮವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜೋಶಿಮಠದಲ್ಲಿ ರಕ್ಷಣಾ ಪರಿಹಾರ ಕಾರ್ಯ ಸ್ಥಗಿತಗೊಂಡಿದೆ. ಅತಿಯಾದ ಮಳೆಯಿಂದಾಗಿ ತೆಹ್ರಿ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ತಾಯಿ ಮಗ ಅಸುನಿಗಿದ್ದಾರೆ. ಅಲ್ಲದೆ ದೇವ್‌ಪ್ರಯಾಗ್ ಹಾಗೂ ರುದ್ರಪ್ರಯಾಗ್‌ನಲ್ಲು ಭೂಕುಸಿತ ಸಂಭವಿಸಿದೆ.
ಮಳೆಯಲ್ಲೂ ಸಹ ಇಂದು ನಡೆದ ರಕ್ಷಣಾ ಕಾರ್ಯಚರಣೆಯಲ್ಲಿ, ನಾಲ್ಕು ಹೆಲಿಕಾಫ್ಟರ್ ಮೂಲಕ ಬದರಿನಾಥದಲ್ಲಿ ಒಟ್ಟು 60 ಮಂದಿಯನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದೆ. ಅಲ್ಲದೆ ಇನ್ನು 8 ಸಾವಿರ ನಿರಾಶ್ರಿತರು ಬೆಟ್ಟಗುಡ್ಡಗಳಲ್ಲೆ ಉಳಿದಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರತಿಕೂಲ ಹವಾಮಾನದಿಂದಾಗಿ ಮಂಗಳವಾರ ಮಧ್ಯಾಹ್ನದ ನಂತರ ಹೆಲಿಕಾಫ್ಟರ್‌ಗಳು ಕಾರ್ಯಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದು, ಕೇವಲ ಭೂಮಾರ್ಗದ ಮೂಲಕವಷ್ಟೇ ರಕ್ಷಣಾ ಕಾರ್ಯ ನಡೆಯುತ್ತಿದೆ. ಆದರೆ ಇದೀಗ ಸುರಿಯುತ್ತಿರುವ ಮಳೆಯಿಂದಾಗಿ ಬದರಿನಾಥ, ರುದ್ರಪ್ರಯಾಗ್ ಸೇರಿದಂತೆ ಹಲವಡೆ ಸಂಭವಿಸಿದ ಭೂಕುಸಿತದಿಂದಾಗಿ ರಸ್ತೆ ಹಾಗೂ ಕಾಲ್ದಾರಿ ಮೂಲಕ ನಡೆಯುತ್ತಿದ್ದ ರಕ್ಷಣೆ ಹಾಗೂ ಪರಿಹಾರ ಕಾರ್ಯಕ್ಕೂ ಅಡ್ಡಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


