ರಕ್ಷಣಾ ಕಾರ್ಯ ಮುಗಿಯುವವರೆಗೂ ವಿಶ್ರಮಿಸಲ್ಲ: ಐಎಎಫ್ ಮುಖ್ಯಸ್ಥ

ಗೌಚರ್: ಪ್ರವಾಹ ಸಂತ್ರಸ್ತರ ರಕ್ಷಣಾ ಕಾರ್ಯ ಮುಗಿಯುವವರೆಗೂ ನಮ್ಮ ಅಧಿಕಾರಿಗಳು ವಿಶ್ರಾಂತಿ ಪಡೆಯುವುದಿಲ್ಲ ಎಂದು ಭಾರತೀಯ ವಾಯು ಪಡೆ(ಐಎಎಫ್) ಮುಖ್ಯಸ್ಥ ಎನ್‌ಎಕೆ ಬ್ರೌನ್ ಅವರು ಬುಧವಾರ ಹೇಳಿದ್ದಾರೆ.
ಪ್ರವಾಹ ಸಂತ್ರಸ್ತರನ್ನು ಹೊತ್ತು ಬರುತ್ತಿದ್ದ ರಕ್ಷಣಾ ಪಡೆಯ ಹೆಲಿಕಾಪ್ಟರ್ ಎಂಐ17 ವಿ5 ಪತನವಾದ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬ್ರೌನ್, ಉತ್ತರಾಖಂಡನ ಪ್ರವಾಹದಲ್ಲಿ ಸಿಲುಕಿರುವ ಪ್ರತಿಯೊಬ್ಬರನ್ನು ರಕ್ಷಿಸುವವರೆಗೆ ನಮ್ಮ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯನ್ನು ನಿಲ್ಲಿಸುವುದಿಲ್ಲ ಮತ್ತು ರಕ್ಷಣಾ ಕಾರ್ಯ ಮುಗಿಯುವವರೆಗೂ ವಿಶ್ರಮಿಸುವುದಿಲ್ಲ ಎಂದರು.
ಇದೇ ವೇಳೆ ನಿನ್ನೆ ಗೌರಿಕುಂಡ್ ಬಳಿ ಪತನಗೊಂಡಿದ್ದ ಎಂಐ 17 ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲ 19 ಸಿಬ್ಬಂದಿಗಳು ಮೃತಪಟ್ಟಿರುವುದಾಗಿ ಐಎಎಫ್ ಮುಖ್ಯಸ್ಥರು ಖಚಿತ ಪಡಿಸಿದರು. ಅಲ್ಲದೆ ಕಾಪ್ಟರ್‌ನ ಕಾಕ್‌ಪಿಟ್‌ನ್ನು ವಶ ತೆಗೆದುಕೊಂಡಿದ್ದು, ಅದರಲ್ಲಿನ ಮಾಹಿತಿಯನ್ನು ಪರಿಶೀಲಿಸುವುದಾಗಿ ತಿಳಿಸಿದರು.
ರಕ್ಷಣಾ ಕಾರ್ಯ ಮತ್ತಷ್ಟು ಚುರುಕುಗೊಳಿಸಲು ಬದ್ರಿನಾಥ್ ಹಾಗೂ ಹರ್ಸಿಲ್‌ಗೆ ಮತ್ತೆ ಎರಡು ಹೆಲಿಕಾಪ್ಟರ್‌ಗಳನ್ನು ಕುಳುಹಿಸಿಕೊಡಲಾಗಿದೆ ಎಂದು ಎನ್‌ಎಕೆ ಬ್ರೌನ್ ಅವರು ಹೇಳಿದರು.
ನಿನ್ನೆ ಮಧ್ಯಾಹ್ನ 12.30ರ ಸುಮಾರಿಗೆ ಕೇದಾರನಾಥದಿಂದ ವಾಪಸ್ ಬರುತ್ತಿದ್ದ ವೇಳೆ ಈ ಕಾಪ್ಟರ್ ಪತನವಾಗಿತ್ತು. ಕಾಪ್ಟರ್‌ನಲ್ಲಿ ಎನ್‌ಡಿಆರ್‌ಎಫ್, ಐಟಿಬಿಪಿ ಐಎಎಫ್ ಸಿಬ್ಬಂದಿ ಇದ್ದರು. ಹೆಲಿಕಾಪ್ಟರ್ ಪತನಕ್ಕೆ ಕೆಟ್ಟ ಹವಾಮಾನ ಹಾಗೂ ಮಂಜು ಮುಸುಕಿದ್ದೇ ಕಾರಣ ಎಂದು ಐಎಎಫ್ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


