ಈಗಿನ ಸುದ್ದಿ

ಇಬ್ಬರ ಮಹಿಳೆಯರ ಮೇಲೆ ಅತ್ಯಾಚಾರ

Published On :

ಗುರ್‌ಗಾಂವ್‌: ಚಲಿಸುತ್ತಿದ್ದ ಕಾರಿನಲ್ಲಿ ಇಬ್ಬರ ಮಹಿಳೆಯರ ಮೇಲೆ ಅತ್ಯಚಾರವೆಸಗಿರುವ ಘಟನೆ ದೆಹಲಿಯ ಗುರ್‌ಗಾಂವ್‌ನ ಸ್ಯಾಟಲೈಟ್ ಪ್ರದೇಶದಲ್ಲಿ ಗುರುವಾರ ನಡೆದಿದೆ.

ರಾತ್ರಿ 1 ರಿಂದ 2 ಗಂಟೆ ಸುಮಾರಿನಲ್ಲಿ ಪಬ್‌ನಿಂದ ಹೊರಬಂದ ಇಬ್ಬರು ಮಹಿಳೆಯರು ಕಾರಿನಲ್ಲಿ ಲಿಫ್ಟ್ ಕೇಳಿದ್ದಾರೆ. ಲಿಫ್ಟ್ ನೀಡುವುದಾಗಿ ಚಾಲಕ ಹೇಳಿದ್ದಾನೆ.

ಕಾರಿನಲ್ಲಿ ಮಹಿಳೆಯರು ಕುಳಿತ ನಂತರ ಮಧ್ಯ ದಾರಿಯಲ್ಲಿ ಕಾರನ್ನು ನಿಲ್ಲಿಸಲಾಯಿತು. ಈ ಸಂದರ್ಭದಲ್ಲಿ ಇಬ್ಬರು ಪುರುಷರು ಕಾರಿನೊಳಗೆ ಬಂದರು. ಇದಕ್ಕೆ ನಾವು ಆಕ್ಷೇಪಿಸಿದಾಗ ಚಾಲಕ ಕಿವಿಗೊಡದೆ ಕಾರನ್ನು ಚಲಾಯಿಸುತ್ತಿದ್ದನು. ಆ ಇಬ್ಬರು ಪುರುಷರು ತಮ್ಮ ಮೇಲೆ ಅತ್ಯಾಚಾರ ವೆಸಗಿ ಪರಾರಿಯಾಗಿದ್ದಾರೆ ಎಂದು ಮಹಿಳೆಯರು ದೂರು ಸಲ್ಲಿಸಿದ್ದಾರೆ.

ಘಟನೆ ನಡೆದ ಎರಡು ಗಂಟೆಗಳ ಬಳಿಕ ಪೊಲೀಸ್ ಠಾಣೆಗೆ ಬಂದ ಮಹಿಳೆಯರು ದೂರು ದಾಖಲಿಸಿದ್ದಾರೆ. ಮಹಿಳೆಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿ ಪ್ರಕಾರ ಅತ್ಯಾಚಾರ ವೆಸಗಿರುವುದು ದೃಢಪಟ್ಟಿದ್ದು, ಮಹಿಳೆಯರಿಗೆ ದೈಹಿಕ ಹಿಂಸೆ ನೀಡಿರುವುದು ತಿಳಿದು ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಹುಡುಕಾಟದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.