ಈಗಿನ ಸುದ್ದಿ

ಸ್ಫಾಟ್ ಫಿಕ್ಸಿಂಗ್: ಕುಂದ್ರಾ ಪ್ರಕರಣದಿಂದ ಜಾರಿಕೊಂಡ ದೆಹಲಿ ಪೊಲೀಸ್

Published On :

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಸ್ಫಾಟ್ ಫಿಕ್ಸಿಂಗ್ ಪ್ರಕರಣದ ಬೆಟ್ಟಿಂಗ್ ಆರೋಪಿ, ರಾಜಸ್ಥಾನ ರಾಯಲ್ಸ್‌ನ ಮಾಲಿಕರಾದ ರಾಜ್ ಕುಂದ್ರಾ ಅವರನ್ನು ಜೈಪುರ ಪೊಲೀಸರು ವಿಚಾರಣೆಗೊಳಪಡಿಸಬೇಕು ಎಂದು ದೆಹಲಿ ಪೊಲೀಸರು ಶನಿವಾರ ಹೇಳಿದ್ದಾರೆ.

ಇಂದು ಜೈಪುರ ಪೊಲೀಸರಿಗೆ ಪತ್ರ ಬರೆದಿರುವ ದೆಹಲಿ ಪೊಲೀಸರು, ಐಪಿಎಲ್ ಬೆಟ್ಟಿಂಗ್ ಆರೋಪಿ ರಾಜಕುಂದ್ರಾ ಅವರ ವಿರುದ್ಧ ಕ್ರಮಕೈಗೊಳ್ಳಿ. ರಾಜ್‌ಕುಂದ್ರಾ ಅವರು ಜೈಪುರದಲ್ಲಿ ಬೆಟ್ಟಿಂಗ್ ಕಟ್ಟಿದ್ದರಿಂದ ಪ್ರಕರಣದ ವಿಚಾರಣೆಯನ್ನು ಜೈಪುರ ಪೊಲೀಸರೇ ನಡೆಸಬೇಕು ಎಂದು ತಿಳಿಸಿದ್ದಾರೆ.

ಜೈಪುರ ಪೊಲೀಸರಿಗೆ ಕುಂದ್ರಾ ವಿಚಾರಣೆ ನಡೆಸಿ ಎಂದು ಹೇಳಿರುವ ದೆಹಲಿ ಪೊಲೀಸ್ ಪ್ರಕರಣದಿಂದ ನುಣುಚಿಕೊಳ್ಳುವ ಹುನ್ನಾರ ನಡೆಸಿದೆ.

ಐಪಿಎಲ್ ಪಂದ್ಯಾವಳಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣ ನಡೆದ ಹಿನ್ನಲೆಯಲ್ಲಿ ಕ್ರಿಕೆಟ್ ಆಟಗಾರರಾದ ಎಸ್. ಶ್ರೀಶಾಂತ್, ಚಂಡೀಲಾ ಮತ್ತು ಅಂಕೀತ್ ಚವಣ್ ಸೇರಿದಂತೆ ಬುಕ್ಕಿಗಳನ್ನು ಬಂಧಿಸಿದ ನಂತರ, ಪ್ರಕರಣದಲ್ಲಿ ಕುಂದ್ರಾ ಅವರ ಹೆಸರು ಕೇಳಿ ಬಂದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.