ಈಗಿನ ಸುದ್ದಿ

10,000 ಸಾವು ಅಂದಾಜು ಮಾತ್ರ: ಉತ್ತರಾಖಂಡ ಸಿಎಂ

10,000 ಸಾವು ಅಂದಾಜು ಮಾತ್ರ: ಉತ್ತರಾಖಂಡ ಸಿಎಂ
Published On :

ನವದೆಹಲಿ: ಉತ್ತರಾಖಂಡ ಪ್ರವಾಹಕ್ಕೆ ತುತ್ತಾದವರ ಸಂಖ್ಯೆ 10,000 ಇರಬಹುದು ಎಂದು ಅಂದಾಜಿಸಲಾಗಿದೆ ಹೊರತು ದೃಢಪಡಿಸಿಲ್ಲ ಎಂದು ಉತ್ತರಾಖಂಡದ ಮುಖ್ಯಮಂತ್ರಿ ವಿಜಯ್ ಬಹುಗುಣ ಅವರು ಭಾನುವಾರ ಹೇಳಿದ್ದಾರೆ.

ಉತ್ತರಾಖಂಡದಲ್ಲಿ ಪ್ರವಾಹ ಪೀಡಿತಕ್ಕೆ ಸಿಲುಕಿ ಅನೇಕ ಜನರು ಕಾಣೆಯಾಗಿದ್ದು, ಮೃತಪಟ್ಟವರ ಸಂಖ್ಯೆ ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಆದರೆ ದೊರೆತಿರುವ ಮೃತದೇಹಗಳನ್ನು ಅಧಿಕಾರಿಗಳು ಮರು ಎಣಿಕೆ ಮಾಡಿದಾಗ 10,000 ಎಂದು ತಿಳಿದು ಬರುತ್ತಿದೆ ಇದು ಕೇವಲ ಅಂದಾಜು ಮಾತ್ರ ಎಂದು ಅವರು ತಿಳಿಸಿದ್ದಾರೆ.

ಘಟನೆಯಲ್ಲಿ ಇನ್ನೂ ಹೆಚ್ಚಿನ ಸಂತ್ರಸ್ತರು ಕಾಣೆಯಾಗಿದ್ದು, ಅವರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲವಾದ್ದರಿಂದ ಮೃತಪಟ್ಟವರ ಸಂಖ್ಯೆಯನ್ನು ದೃಢಪಡಿಸಲಾಗುವುದಿಲ್ಲ ಎಂದು ಅವರು ಸ್ಫಷ್ಟಪಡಿಸಿದ್ದಾರೆ.

ಪ್ರವಾಹಕ್ಕೆ ಸಿಕ್ಕಿ ಅನೇಕರು ಕೊಚ್ಚಿ ಹೋಗಿದ್ದು, ನೂರಾರು ಮೃತದೇಹಗಳು ಮಣ್ಣಲ್ಲಿ ಹೂತಿ ಹೋಗಿವೆ. ಇದರಿಂದ ಮೃತಪಟ್ಟವರ ಸಂಖ್ಯೆ ನಿಖರವಾಗಿ ಹೇಳಲು ಸಾಧ್ಯವಿಲ್ಲ.

ಈಗಾಗಲೇ ಸಂತ್ರಸ್ತರನ್ನು ರಕ್ಷಿಸಲಾಗಿದ್ದು, ಕಾಣೆಯಾದವರ ಬಗ್ಗೆ ಕಾರ್ಯಚರಣೆ ಕೈಗೊಳ್ಳಲಾಗಿದೆ ಎಂದು ವಿಜಯ್ ಬಹುಗುಣ ಹೇಳಿದ್ದಾರೆ.

ಕಾಣೆಯಾದವರ ಮಾಹಿತಿ ಮತ್ತು ಭಾವಚಿತ್ರವನ್ನು ರಾಜ್ಯ ಸರ್ಕಾರದ ಜಾಲತಾಣದಲ್ಲಿ ಹಾಕಲಾಗಿದ್ದು, ಅಧಿಕಾರಿಗಳಿಗೆ ಅವರನ್ನು ಗುರುತಿಸುವಲ್ಲಿ ಸಹಾಯವಾಗಬಹುದು ಎಂದ ಅವರು, ಈವರೆಗೆ 1,04,687 ಜನರನ್ನು ರಕ್ಷಿಸಲಾಗಿದೆ. 1,237 ಜನರು ರಾಜ್ಯದ ವಿವಿಧ ಪ್ರದೇಶಗಳಲ್ಲಿ ಬೀಡೂರಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.