ಈಗಿನ ಸುದ್ದಿ

ಉತ್ತರಾಖಂಡ ದುರಂತ; ಬಿಜೆಪಿ, ಕಾಂಗ್ರೆಸ್ ವಾಕ್ಸಮರ

Published On :

ನವದೆಹಲಿ: ಉತ್ತರಾಖಂಡದಲ್ಲಿ ಸಂಭವಿಸಿದ ಪ್ರಳಯದಿಂದ ಅಸ್ತವ್ಯಸ್ತವಾಗಿದ್ದ ಜನಜೀವನ ಇನ್ನೇನು ಸರಿಯಾಗಿ ಬರುತ್ತಿರುವ ಹೊತ್ತಲ್ಲಿ ಇತ್ತ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ ವಾಕ್ಸಮರ ತಾರಕಕ್ಕೇರಿದೆ.

ಸೋಮವಾರ ಟ್ವೀಟರ್ ಮೂಲಕ ವಾಕ್ಸಮರ ಆರಂಭಿಸಿದ ಉಭಯ ಪಕ್ಷಗಳು ಪರಸ್ಪರ ಟೀಕಾಪ್ರಹಾರ ಮಾಡುವುದರಲ್ಲೇ ತಲ್ಲೀನವಾಗಿವೆ.

ಪ್ರಳಯ ಪೀಡಿತ ಪ್ರದೇಶವಾದ ಉತ್ತರಾಖಂಡಕ್ಕೆ ಭೇಟಿ ನೀಡದಿರುವುದಕ್ಕಾಗಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಮನೀಶ್ ತಿವಾರಿ ಬಿಜೆಪಿ ನಾಯಕರಾದ ಸುಷ್ಮಾ ಸ್ವರಾಜ್ ಮತ್ತು  ಅರುಣ್ ಜೇಟ್ಲಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ವಿಪಕ್ಷ ನಾಯಕರು ಪ್ರಳಯ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿಲ್ಲ, ಅವರ್ಯಾಕೆ ಅಲ್ಲಿಗೆ ಭೇಟಿ ನೀಡಿಲ್ಲ? ಎಂದು ಟ್ವೀಟ್ ಮಾಡುವ ಮೂಲಕ ತಿವಾರಿ ಟ್ವೀಟ್ ಜಟಾಪಟಿಗೆ ನಾಂದಿ ಹಾಡಿದ್ದರು.

ಇದಕ್ಕೆ ರೀಟ್ವೀಟ್ ಮಾಡಿದ  ಸುಷ್ಮಾ ಸ್ವರಾಜ್, ನಮ್ಮ ಭೇಟಿ ಅಲ್ಲಿನ ರಕ್ಷಣಾ ಕಾರ್ಯಾಚರಣೆಯನ್ನು ಬಾಧಿಸಬಹುದು ಎಂದು ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ  ಸಾರ್ವಜನಿಕ ಹೇಳಿಕೆ ನೀಡಿರುವುದರಿಂದಲೇ ನಾವಲ್ಲಿಗೆ ಹೋಗಿಲ್ಲ ಎಂದು ಹೇಳಿದ್ದಾರೆ.

ಆದಾಗ್ಯೂ, ಬಿಜೆಪಿ ನಾಯಕ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮಾತ್ರ ಉತ್ತರಾಖಂಡಕ್ಕೆ ಭೇಟಿ ನೀಡಿದ್ದರು.

ಇತ್ತ ಉತ್ತರಾಖಂಡ ಸರ್ಕಾರವನ್ನು ಟೀಕಿಸಿದ ಸುಷ್ಮಾ, ಈ ವಿಷಯದಲ್ಲಿ ಕೇಂದ್ರ ಸರ್ಕಾರ ಸರಿಯಾದ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

ಅದೇ ವೇಳೆ ದುರದೃಷ್ಟವಶಾತ್, ದೆಹಲಿ ಸರ್ಕಾರವೂ ಉತ್ತಮ ನಾಯಕತ್ವವಿಲ್ಲದೆ ವಿಫಲವಾಗಿದೆ ಎಂದು ಸುಷ್ಮಾ  ಅಭಿಪ್ರಾಯಪಟ್ಟಿದ್ದಾರೆ.

ಏತನ್ಮಧ್ಯೆ, ಬಿಜೆಪಿ ಇದೇ ಮೊದಲಬಾರಿಗೆ ವಿಜಯ ಬಹುಗುಣ ಸರ್ಕಾರ ನಡೆಸಿದ ರಕ್ಷಣಾಕಾರ್ಯದಲ್ಲಿನ ವೈಫಲ್ಯತೆ ಬಗ್ಗೆ ಕಟು ಟೀಕೆ ವ್ಯಕ್ತ ಪಡಿಸಿದೆ.

ವಿಪಕ್ಷದ ಪ್ರಮುಖ ನಾಯಕರು ಕಟುವಾಗಿ ಟೀಕಾಪ್ರಕಾರ ಮಾಡದೇ ಇದ್ದರೂ, ಉತ್ತರಾಖಂಡದ ಪ್ರಳಯವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.