ಚೀನಾದ ರಕ್ಷಣಾ ವ್ಯವಸ್ಥೆಯ ಬದಲಾವಣೆಯನ್ನು ಭಾರತ ಗಮನಿಸುತ್ತಿದೆ: ಆಂಟನಿ

ನವದೆಹಲಿ: ಚೀನಾ ತನ್ನ ರಕ್ಷಣಾ ವ್ಯವಸ್ಥೆಯನ್ನು ಉನ್ನತೀಕರಣ ಗೊಳಿಸುತ್ತಿರುವುದನ್ನು ಭಾರತ ಗಮನಿಸುತ್ತಿದೆ ಎಂದು ರಕ್ಷಣಾ ಸಚಿವ ಎಕೆ ಆಂಟನಿ ಹೇಳಿದ್ದಾರೆ.
ಇಂದು ನವದೆಹಲಿಯಲ್ಲಿ ಮಾತನಾಡಿದ ಸಚಿವ ಆಂಟನಿ, 'ಇಂಡೋ-ಚೀನಾ ಗಡಿಯಲ್ಲಿನ ಪ್ರತಿಯೊಂದು ಬದಲಾವಣೆಗಳನ್ನು ಭಾರತ ಗಮನಿಸುತ್ತಿದೆ. ಚೀನಾ ತನ್ನ ಸೈನಿಕ ವ್ಯವಸ್ಥೆಯನ್ನು ಮತ್ತು ರಕ್ಷಣಾ ವ್ಯವಸ್ಥೆಯನ್ನು ಆಧುನೀಕರಿಸಿರುವುದೂ ಸಹ ಭಾರತಕ್ಕೆ ತಿಳಿದಿದೆ' ಎಂದು ಅವರು ಹೇಳಿದರು.
'ಭಾರತ ತನ್ನ ಪ್ರಜೆಗಳ ರಕ್ಷಣೆಯಲ್ಲಿ ಮತ್ತು ದೇಶದ ಸಾರ್ವಭೌಮತ್ವದ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಹೀಗಾಗಿ ಚೀನಾದ ಬೆಳವಣಿಗೆಯನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ. ಚೀನಾ ತನ್ನ ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಿಕೊಂಡಿರುವುದು, ಗಡಿಯಲ್ಲಿ ಸೈನಿಕ ವ್ಯವಸ್ಥೆಯನ್ನು ಆಧುನೀಕರಣಗೊಳಿಸಿರುವುದರಿಂದ ಭಾರತದ ಪ್ರಜೆಗಳು ಆತಂಕಪಡುವ ಅಗತ್ಯವಿಲ್ಲ. ಭಾರತದ ರಕ್ಷಣಾ ವ್ಯವಸ್ಥೆ ಬಲಿಷ್ಟವಾಗಿದ್ದು, ಗಡಿಯಲ್ಲಿನ ಎಂತಹುದೇ ಪರಿಸ್ಥಿತಿಯನ್ನು ಎದುರಿಸಲು ಭಾರತ ಸನ್ನಧವಾಗಿದೆ ಎಂದು ಆಂಟನಿ ತಿಳಿಸಿದರು.
ಇಂಡೋ-ಚೀನಿ ಗಡಿಯಲ್ಲಿ ಚೀನಾ ತನ್ನ ಗಡಿಯಲ್ಲಿ ಅತ್ಯಾಧುನಿಕ ಯುದ್ಧ ಶಸ್ತ್ರಾಸ್ತ್ರಗಳನ್ನು ಸೈನಿಕರಿಗೆ ಪೂರೈಸುತ್ತಿದೆ. ಅಲ್ಲದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಖರೀದಿ ಮಾಡಲಾದ ಮತ್ತು ದೇಶೀಯವಾಗಿ ನಿರ್ಮಿಸಿದ ಅತ್ಯಾಧುನಿಕ ಆಯುಧಗಳನ್ನು ಚೀನಾ ಸೈನಿಕರಿಗೆ ರವಾನಿಸುವ ಮೂಲಕ ಭಾರತವನ್ನು ಕಂಗೆಡಿಸಲು ಚೀನಾ ಯತ್ನಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


