ಈಗಿನ ಸುದ್ದಿ

ಡಿಎಸ್‌ಪಿ ಕೊಲೆ: ಯುಪಿ ಸಚಿವ ರಾಜಾಭಯ್ಯಾ ರಾಜಿನಾಮೆ

Published On :

ಲಕ್ನೋ: ಪೊಲೀಸ್ ಅಧಿಕಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸಚಿವ ರಾಜಾಭಯ್ಯಾ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಅಖಿಲೇಶ್ ಯಾದವ್ ಸಂಪುಟದಲ್ಲಿ ನಾಗರಿಕ ಸರಬರಾಜು ಸಚಿವರಾಗಿದ್ದ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜುಭಯ್ಯಾ ಅವರು ತಮ್ಮ ಸ್ಥಾನಕ್ಕೆ ಇಂದು ರಾಜಿನಾಮೆ ನೀಡಿದ್ದಾರೆ.

ಕಳೆದ ಶನಿವಾರ ರಾತ್ರಿ ಉತ್ತರಪ್ರದೇಶದ ಪ್ರತಾಪ್‌ಗಡ ಜಿಲ್ಲೆಯಲ್ಲಿ ನಡೆದ ಘರ್ಷಣೆಯಲ್ಲಿ ಪೊಲೀಸ್ ಅಧಿಕಾರಿ ಜಿಯಾ-ಉಲ್-ಹಕ್ ಸೇರಿದಂತೆ ಮೂವರು ಸಾರ್ವಜನಿಕರು ಸಾವಿಗೀಡಾಗಿದ್ದರು. ಸಂಘರ್ಷದಲ್ಲಿ ರಾಜಾಭಯ್ಯಾ ಅವರ 7ಮಂದಿ ಹಿಂಬಾಲಕರು ಪಾಲ್ಗೊಂಡಿರುವುದನ್ನು ಪೊಲೀಸರು ಸ್ಪಷ್ಟಪಡಿಸಿದ್ದರು. ಈ ಹಿನ್ನಲೆ ಪ್ರತಿಪಕ್ಷಗಳು ರಾಜಾಭಯ್ಯಾ ಅವರ ರಾಜಿನಾಮೆಗೆ ಅಗ್ರಹಿಸಿದ್ದವು.

ಅಲ್ಲದೆ ಈ ಹಿಂದೆ ಪೊಲೀಸ್ ಅಧಿಕಾರಿ ಜಿಯಾ ಉಲ್ ಹಕ್ ಮತ್ತು ರಾಜಾಭಯ್ಯಾ ಅವರ ನಡುವೆ ಪ್ರಕರಣವೊಂದರ ಸಂಬಂಧ ಮಾತಿನ ಚಕಮಕಿ ಕೂಡ ನಡೆದಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಲ್ಲದೆ ಸ್ವತಃ ಪೊಲೀಸ್ ಅಧಿಕಾರಿ ಪತ್ನಿ ಪರ್ವೀನ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ರಾಜಾಭಯ್ಯಾ ಅವರು ತಮ್ಮ ಪತಿಗೆ ಕೊಲೆಬೆದರಿಕೆ ಹಾಕಿದ್ದರು ಎಂದು ಹೇಳಿದ್ದಾರೆ.

ಪೊಲೀಸ್ ಅಧಿಕಾರಿ ಜಿಯಾ-ಉಲ್-ಹಕ್ ಅವರ ಹತ್ಯೆ ಪ್ರಕರಣ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ರಾಜಾಭಯ್ಯಾ ಅವರ ರಾಜಿನಾಮೆಯನ್ನು ಅಖಿಲೇಶ್ ಯಾದವ್ ಅಂಗೀಕರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.