ಈಗಿನ ಸುದ್ದಿ

ಜೈಪುರಕ್ಕೆ ಆಗಮಿಸಿದ ಪಾಕ್ ಪ್ರಧಾನಿಗೆ ಪ್ರತಿಭಟನೆಯ ಬಿಸಿ

ಜೈಪುರಕ್ಕೆ ಆಗಮಿಸಿದ ಪಾಕ್ ಪ್ರಧಾನಿಗೆ ಪ್ರತಿಭಟನೆಯ ಬಿಸಿ
Published On :

ಜೈಪುರ: ಪಾಕಿಸ್ತಾನ ಪ್ರಧಾನಿ ರಾಜಾ ಫರ್ವೇಜ್ ಅಶ್ರಫ್ ಅವರು ಶನಿವಾರ ಬೆಳ್ಳಿಗ್ಗೆ ಜೈಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ಅಶ್ರಫ್ ಅವರು ವಿಶೇಷ ಭದ್ರತೆಯ ನಡುವೆ ಇಂದು ಸೇನಾ ವಿಶೇಷ ವಿಮಾನದಲ್ಲಿ ಜೈಪುರದ ಸಂಗನೀರ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅವರು ಅಜ್ಮೀರ್‌ನಲ್ಲಿರುವ ಖ್ವಾಜಾ ಮೋಯಿನುದ್ದೀನ್ ಚಿಸ್ತಿ ದರ್ಗಾಕ್ಕೆ ಅಶ್ರಫ್ ಭೇಟಿ ನೀಡಿ ಪ್ರರ್ಥನೆ ಸಲ್ಲಿಸಲ್ಲಿದ್ದಾರೆ.

ದರ್ಗಾದ ಪ್ರಧಾನ ಮುಖ್ಯಸ್ಥ ಜೈನುಲ್ ಅಬೇದಿನ್ ಅಲಿ ಖಾನ್ ಅವರು ಅಶ್ರಫ್ ಭೇಟಿಗೆ ವಿರೋಧ ವ್ಯಕ್ತಪಡಿಸಿರುವುದು ಅಧಿಕಾರಿಗಳಲ್ಲಿ ಇರುಸುಮುರುಸು ಉಂಟುಮಾಡಿದೆ. ಅಲ್ಲದೆ ಜೈಪುರದ ವಕೀಲರ ಸಂಘ ಮತ್ತು ಅಜ್ಮೀರ್ ಮಾರುಕಟ್ಟೆ ಅಂಗಡಿ ಮಾಲೀಕರ ಸಂಘ ಪ್ರಧಾನಿ ಅಶ್ರಫ್ ಭೇಟಿಗೆ ವಿರೋಧ ವ್ಯಕ್ತಪಡಿಸಿದ್ದು, ದರ್ಗಾದ ಬಳಿ ಪ್ರತಿಭಟನೆ ನಡೆಸಲು ಮುಂದಾಗಿದೆ.

ಗಡಿಯಲ್ಲಿ ಪಾಕ್ ಸೈನಿಕರಿಂದ ನಡೆದ ದುರ್ವರ್ತನೆ ಕುರಿತಂತೆ ತೀವ್ರ ವಿರೋಧ ವ್ಯಕ್ತಪಡಿಸಿರುವ ವರ್ತಕರ ಸಂಘ ಇಂದು ಮಾರುಕಟ್ಟೆ ಬಂದ್‌ಗೆ ಕರೆ ನೀಡಿದೆ. ಅಲ್ಲದೆ ಪ್ರಧಾನಿ ಅಶ್ರಫ್ ಅವರು ಪಾಕ್ ಸೈನಿಕಿರಿಂದ ಹತ್ಯೆಗೀಡಾದ ಭಾರತೀಯ ಸೈನಿಕರ ಕುಟುಂಬದ ಬಳಿ ಕ್ಷಮೆ ಕೇಳಬೇಕು ಮತ್ತು ಭಾರತೀಯ ಸೈನಿಕರ ತಲೆಯನ್ನು ಅವರ ಕುಟುಂಬಸ್ಥರಿಗೆ ಹಿಂದಿರುಗಿಸಬೇಕೆಂದು ಆಗ್ರಹಿಸಿವೆ.

ಒಟ್ಟಾರೆ ದ್ವಿಪಕ್ಷೀಯ ಮಾತುಕತೆಗಾಗಿ ಇಂದು ಭಾರತಕ್ಕೆ ಆಗಮಿಸಿರುವ ಪಾಕ್ ಪ್ರಧಾನಿ ರಾಜಾ ಫರ್ವೇಜ್ ಅಶ್ರಫ್ ಅವರಿಗೆ ಪ್ರತಿಭಟನೆಯ ಸ್ವಾಗತ ದೊರೆತಿದೆ. ಜೈಪುರಕ್ಕೆ ಆಗಮಿಸಿರುವ ಅಶ್ರಫ್ ಅವರು ಮಧ್ಯಾಹ್ನ ಭಾರತೀಯ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷೀದ್ ಅವರೊಂದಿಗೆ ಉಪಾಹಾರ ಕೂಟದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ನಂತರ ವಿಶ್ವವಿಖ್ಯಾತ ಅಜ್ಮೀರ್ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲ್ಲಿದ್ದಾರೆ. ಪ್ರಾರ್ಥನೆ ನಂತರ ಅಶ್ರಫ್ ಅವರು ಪ್ರಧಾನಿ ಮನಮೋಹನ್ ಸಿಂಗ್ ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಸಿಂಗ್, ಪಾಕಿಸ್ತಾನ ಭಯೋತ್ಪಾದನೆಗೆ ಕಡಿವಾಣ ಹಾಕದ ಹೊರತು ಮಾತುಕತೆಯ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.