ಈಗಿನ ಸುದ್ದಿ

ವಿಜೇಂದರ್ ಸಿಂಗ್ ಪಾತ್ರವಿದೆ ಎಂದೆನಿಸುತ್ತಿಲ್ಲ: ಹೂಡಾ

Published On :

ನವದೆಹಲಿ: ಅಪಾರ ಪ್ರಮಾಣ ಮಾದಕ ವಸ್ತು ಪತ್ತೆ ಪ್ರಕರಣದಲ್ಲಿ ಬಾಕ್ಸರ್ ವಿಜೇಂದರ್ ಸಿಂಗ್ ಪಾತ್ರವಿದೆ ಎಂದು ಅನ್ನಿಸುತ್ತಿಲ್ಲ ಎಂದು ಹರಿಯಾಣ ಮುಖ್ಯಮಂತ್ರಿ ಬಿ.ಎಸ್ ಹೂಡಾ ತಿಳಿಸಿದ್ದಾರೆ.

ಭಾರತ ಕ್ರೀಡಾ ಕ್ಷೇತ್ರವೇ ಬೆಚ್ಚಿ ಬೀಳುವಂತಹ ಪ್ರಕರಣವಾಗಿರುವ ಬಹುಕೋಟಿ ಮೌಲ್ಯದ ಹೆರಾಯಿನ್ ಪತ್ತೆ ಪ್ರಕರಣ ಕುರಿತು ಮೊದಲ ಬಾರಿಗೆ ಹರಿಯಾಣ ಮುಖ್ಯಮಂತ್ರಿ ಬಿ.ಎಸ್ ಹೂಡಾ ಮಾಧ್ಯಮಗಳಿಗೆ ತಮ್ಮ ಪ್ರತಿಕ್ರಿಯ ನೀಡಿದ್ದಾರೆ.

ಜೀರಕ್ ಪುರದಲ್ಲಿ ಪತ್ತೆಯಾದ ಅಪಾರ ಪ್ರಮಾಣದ ಮಾದಕ ವಸ್ತು ಪತ್ತೆ ಪ್ರಕರಣದಲ್ಲಿ ಬಾಕ್ಸರ್ ವಿಜೇಂದರ್ ಸಿಂಗ್ ಪಾತ್ರ ಕಾಣಿಸುತ್ತಿಲ್ಲ. ಕೇವಲ ರಾಮ್ ಸಿಂಗ್ ಅವರ ಹೇಳಿಕೆ ಗಳಿಂದ ಮಾತ್ರ ವಿಜೇಂದರ್ ಅವರನ್ನು ಅನುಮಾನದಿಂದ ನೋಡುವುದು ಸರಿಯಲ್ಲ. ಇದೊಂದು ಗಂಭೀರ ಪ್ರಕರಣವಾಗಿದೆ. ಪ್ರಕರಣ ಸಂಬಂಧ ಪೊಲೀಸರು ಕಲೆ ಹಾಕಿರುವ ಪ್ರಾಥಮಿಕ ಮಾಹಿತಿಯಲ್ಲಿಯೂ ವಿಜೇಂದರ್ ಪಾತ್ರದ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಆದರೂ ತನಿಖೆ ಪ್ರಗತಿಯಲ್ಲಿರುವುದರಿಂದ ಈ ಕುರಿತು ಬಹಿರಂಗವಾಗಿ ಚರ್ಚಿಸುವುದು ಸಮಂಜಸವಲ್ಲ ಎಂದು ಹೂಡಾ ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಕ್ರೀಡಾ ಕ್ಷೇತ್ರವನ್ನೇ ಬೆಚ್ಚಿ ಬೀಳಿಸಿರುವ ಅಪಾರ ಪ್ರಮಾಣದ ಹೆರಾಯಿನ್ ಪತ್ತೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪ್ರಕರಣ ಸಂಬಂಧ ಪ್ರಕರಣದ ಮತ್ತೋರ್ವ ಆರೋಪಿ ಕೂಡ ಆಗಿರುವ ವಿಜೇಂದರ್ ಸ್ನೇಹಿತ ಮತ್ತು ಬಾಕ್ಸರ್ ರಾಮ್ ಸಿಂಗ್, ತಾವು ಮತ್ತು ವಿಜೇಂದರ್ ಅಲ್ಪ ಪ್ರಮಾಣದಲ್ಲಿ ಸೇವಿಸಿದ್ದೆವು ಎಂದು ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲಿಯೇ ಹರಿಯಾಣ ಮುಖ್ಯಮಂತ್ರಿಗಳ ಹೇಳಿಕೆ ಪ್ರಕರಣದ ಕುರಿತು ಉಂಟಾಗಿರುವ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಒಟ್ಟಾರೆ ಪೊಲೀಸರ ತನಿಖೆಯಲ್ಲಿರುವ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹೊರಬರಲು ತನಿಖೆ ಪೂರ್ಣಗೊಳ್ಳಬೇಕು. ಅನಂತರವಷ್ಟೇ ನಿಜವಾದ ಸತ್ಯಾಂಶಗಳು ಹೊರಬರಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.