ಅಜ್ಲಾನ್ ಷಾ ಕಪ್: ಭಾರತಕ್ಕೆ ಭರ್ಜರಿ ಜಯ

ಕೌಲಾಲಂಪುರ: ಅಜ್ಲಾನ್ ಷಾ ಹಾಕಿ ಕಪ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ ತಂಡದ ವಿರುದ್ಧ ಭಾರಿ ಜಯ ಸಾಧಿಸಿದೆ.
ಮಲೇಷ್ಯಾದಲ್ಲಿ ನಡೆಯುತ್ತಿರುವ ಅಜ್ಲಾನ್ ಷಾ ಹಾಕಿ ಟೂರ್ನಿಯಲ್ಲಿ ಭಾರತ ಹಾಕಿ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 3-1 ಅಂತರದಿಂದ ಸೋಲಿಸುವ ಮೂಲುಕ ಭಾರಿ ಅಂತರದ ಜಯ ಸಾಧಿಸಿದೆ.
ಪಂದ್ಯದ ಆರಂಭದಿಂದಲೂ ಪಾಕ್ ಮೇಲೆ ಸವಾರಿ ಮಾಡಿದ ಭಾರತದ ಆಟಗಾರರು ನಿರೀಕ್ಷೆಯಂತೆ ಪಾಕ್ ವಿರುದ್ಧ ಜಯ ಸಾಧಿಸಿದ್ದಾರೆ. ಈ ಮೂಲಕ ಟೂರ್ನಿಯ ಆರಂಭದಲ್ಲಿ ಎದುರಿಸಿದ ಆಘಾತವನ್ನು ಮರೆಮಾಚಲು ಭಾರತ ಹಾಕಿ ತಂಡ ಪ್ರಯತ್ನಿಸಿದೆ. ಪಂದ್ಯದ 5ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಭಾರತದ ರೂಪಿಂದರ್ ಪಾಲ್ ಸಿಂಗ್ ಅವರು ಪಾಕ್ನ ಗೋಲಿ ಇಮ್ರಾನ್ ಭಟ್ ಅವರನ್ನು ವಂಚಿಸಿ ಗೋಲ್ ಗಳಿಸು ಮೂಲಕ ಭಾರತಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು.
ನಂತರ ಕೇವಲ 4 ನಿಮಿಷಗಳ ಅಂತರದಲ್ಲಿ ಭಾರತದ ಆಕಾಶ್ದೀಪ್ ಸಿಂಗ್ ಅವರು ಮತ್ತೊಂದು ಗೋಲ್ ಗಳಿಸಿ ಪಂದ್ಯದಲ್ಲಿ ಭಾರತದ ಕೈ ಮೇಲಾಗುವಂತೆ ಮಾಡಿದರು. ಪಂದ್ಯದ ಕೊನೆಯ ಭಾಗದಲ್ಲಿ ಅಂದರೆ 56ನೇ ನಿಮಿಷದಲ್ಲಿ ಮನ್ದೀಪ್ ಸಿಂಗ್ ಅವರು ಮತ್ತೊಂದು ಗೋಲ್ ಗಳಿಸುವ ಮೂಲಕ ಭಾರತದ ಜಯವನ್ನು ಖಾತರಿಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


