'ನಿರ್ಭಯ' ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ವಿಫಲ

ಬಲಾಸೂರ್: ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ)ಯ ಬಹುನಿರೀಕ್ಷಿತ 'ನಿರ್ಭಯ' ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ವಿಫಲವಾಗಿದೆ.
ಒಡಿಶಾದ ಚಾಂಡಿಪುರದಲ್ಲಿ ಇಂದು ನಡೆದ ನಿರ್ಭಯ ಕ್ಷಿಪಣಿಯ ಪ್ರಯೋಗ ವಿಫಲವಾಗಿದ್ದು, ವಿಮಾನದಿಂದ ಕಳಚಿದ ನಿರ್ಭಯ ಕ್ಷಿಪಣಿ ನಿಗದಿತ ದೂರದ ಗುರಿ ತಲುಪುವ ಮುನ್ನವೇ ತನ್ನ ಶಕ್ತಿಕಳೆದುಕೊಂಡು ಕೆಳಗುರುಳಿದೆ.
ಇಂದು ಬೆಳ್ಳಗ್ಗೆ ಸುಮಾರು 11:50ರ ಸಮಯದಲ್ಲಿ ಕ್ಷಿಪಣಿಯನ್ನು ಒಡಿಶಾದ ಚಾಂಡಿಪುರದಲ್ಲಿ ಪ್ರಯೋಗಿಸಲಾಯಿತು. 1000 ಕಿ.ಮೀ ದೂರ ಕ್ರಮಿಸಬಲ್ಲ ಸಾಮರ್ಥ್ಯ ಹೊಂದಿರುವ ನಿರ್ಭಯ ಕ್ಷಿಪಣಿ, ನಿರ್ಧಿಷ್ಟ ಗುರಿ ತಲುಪುವ ಮುನ್ನವೇ ವಿಫಲವಾಗಿದೆ. ಕ್ಷಿಪಣಿಯ ವಿಫಲತೆಗೆ ವಿಜ್ಞಾನಿಗಳು ಕಾರಣ ಹುಡುಕುತ್ತಿದ್ದಾರೆ.
ಅಮೆರಿಕದ ಪ್ರಮುಖ ಕ್ಷಿಪಣಿ ತೋಮಾಹಕ್ಗೆ ಹೋಲಿಸಲಾಗುತ್ತಿದ್ದ ನಿರ್ಭಯ ಕ್ಷಿಪಣಿಯನ್ನು, ಬೆಂಗಳೂರು ಮೂಲದ ರಕ್ಷಣಾ ಸಂಶೋಧನಾ ಸಂಸ್ಥೆ ಸಿದ್ಧಪಡಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


