ಮೊಹಾಲಿ ಟೆಸ್ಟ್: ಮಳೆಯಲ್ಲಿ ತೊಯ್ದು ಹೋದ ಮೊದಲ ದಿನ

ಮೊಹಾಲಿ: ಮೊಹಾಲಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ತೃತೀಯ ಟೆಸ್ಟ್ನ ಮೊದಲ ದಿನ ಮಳೆಯಿಂದಾಗಿ ರದ್ದಾಗಿದೆ.
ಮೊಹಾಲಿಯಲ್ಲಿ ಸತತವಾಗಿ ಸುರಿದ ಮಳೆಯಿಂದ ಇಂದು ಬೆಳಗ್ಗೆ ಆರಂಭವಾಗಬೇಕಿದ್ದ ಮೊದಲ ದಿನದ ಆಟ ರದ್ದಾಗಿದೆ. ಮಳೆ ನಿಂತ ನಂತರ ಪಂದ್ಯ ಆರಂಭವಾಗಬಹುದು ಎಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಸತತವಾಗಿ ಸುರಿದ ಮಳೆ ನಿರಾಸೆ ಉಂಟುಮಾಡಿತು. ಮಳೆಯಿಂದಾಗಿ ಪಿಚ್ನ ಹೊರಾಂಗಣ ಆಟವಾಡದಷ್ಟು ಸಂಪೂರ್ಣವಾಗಿ ಒದ್ದೆಯಾಗಿತ್ತು. ಕ್ರೀಡಾಂಗಣದ ಸಿಬ್ಬಂದಿಗಳು ರೋಲರ್ಗಳ ಸಹಾಯದಿಂದಾಗಿ ಸಾಕಷ್ಟು ನೀರನ್ನು ಹೊರ ಹಾಕಿದರಾದರೂ, ನಿಗದಿತ ಸಮಯದಲ್ಲಿ ನೀರನ್ನು ಹೊರಹಾಕುವಲ್ಲಿ ವಿಫಲರಾದರು.
ಮಧ್ಯಾಹ್ನ 2:15ರಲ್ಲಿ ಮೈದಾನವನ್ನು ಪರೀಕ್ಷಿಸಿದ ಅಂಪೈರ್ಗಳು, ಕೊನೆಗೆ ಪಂದ್ಯದ ಮೊದಲ ದಿನವನ್ನು ರದ್ದುಪಡಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ನ ಜಂಟಿ ಕಾರ್ಯದರ್ಶಿ ಜಿ.ಎಸ್ ವಾಲಿಯಾ ಅವರು, ಮಳೆಯಿಂದಾಗಿ ಮೊದಲ ದಿನದಾಟ ರದ್ದುಗೊಂಡಿದೆ. ಇಂದು ಮೈದಾನದಲ್ಲಿ ತುಂಬಿರುವ ನೀರನ್ನು ಸಂಪೂರ್ಣವಾಗಿ ತೆರವುಗೊಳಿಸಿ, ನಾಳಿನ ಆಟಕ್ಕೆ ಅನುವು ಮಾಡಿಕೊಡುತ್ತೇವೆ ಎಂದು ತಿಳಿಸಿದರು. ಅಲ್ಲದೆ ಮಳೆ ಬಾರದೇ ಇದ್ದರೆ ನಾಳೆ ಸಂಪೂರ್ಣ ದಿನದಾಟ ನಡೆಯುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಭಾರತ 2 ಪಂದ್ಯಗಳನ್ನು ಗೆದ್ದು, ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


