2011ನೇ ಸಾಲಿನ ಚಲನಚಿತ್ರ ಪ್ರಶಸ್ತಿ: 'ಪ್ರಸಾದ್' ಅತ್ಯುತ್ತಮ, 'ಸಾರಥಿ' ಜನಪ್ರಿಯ

ಬೆಂಗಳೂರು:2011ನೇ ಸಾಲಿನ ರಾಜ್ಯ ಚಲನ ಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, 'ಪ್ರಸಾದ್' ಮೊದಲನೆ ಅತ್ಯುತ್ತಮ ಚಿತ್ರ ಹಾಗೂ 'ಕೂರ್ಮಾವತಾರ' ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡರೆ, ದರ್ಶನ್ ಅಭಿನಯದ ಸಾರಥಿ ಚಿತ್ರಕ್ಕೆ ಅತ್ಯುತ್ತಮ ಮನರಂಜನಾ ಚಿತ್ರ ಪ್ರಶಸ್ತಿ ನೀಡಲಾಗಿದೆ.
ಇನ್ನು 'ಪ್ರಸಾದ್' ಚಿತ್ರದ ಅಭಿನಯಕ್ಕಾಗಿ ಅರ್ಜುನ್ ಸರ್ಜಾ ಅವರು ಅತ್ಯುತ್ತಮ ನಟ ಹಾಗೂ 'ಭಾಗೀರಥಿ' ಚಿತ್ರದಲ್ಲಿನ ಅಭಿನಯಕ್ಕಾಗಿ ಭಾವನಾ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇಂದು ರಾಜ್ಯ ಚಲನ ಚಿತ್ರ ಪ್ರಶಸ್ತಿ ಪಟ್ಟಿ ಪ್ರಕಟಿಸಿದ್ದು, ಪ್ರಶಸ್ತಿಯ ವಿವರ ಇಂತಿದೆ.
- ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ-3ನೇ ಅತ್ಯುತ್ತಮ ಚಿತ್ರ
- ಸರಸಮ್ಮನ ಸಮಾಧಿ- ಉತ್ತಮ ಸಾಮಾಜಿಕ ಕಾಳಜಿ ಚಿತ್ರ
- ತೀರ್ಪುಗಾರರ ವಿಶೇಷ ಪ್ರಶಸ್ತಿ- ಶ್ರೀರಾಜನ್
- ಅತ್ಯುತ್ತಮ ಹಿನ್ನೆಲೆ ಗಾಯಕ- ಆದಿತ್ಯ ರಾವ್
- ಅತ್ಯುತ್ತಮ ಹಿನ್ನೆಲೆ ಗಾಯಕಿ -ಅರ್ಚನಾ ಉಡುಪ
- ಅತ್ಯುತ್ತಮ ಪೋಷಕ ನಟ- ಶ್ರೀಧರ್
- ಅತ್ಯುತ್ತಮ ಪೋಷಕ ನಟಿ - ಗಿರಿಜಾ ಲೋಕೇಶ್
- ಅತ್ಯುತ್ತಮ ಗೀತರಚನೆ- ಬರಗೂರು ರಾಮಚಂದ್ರಪ್ಪ
- ಅತ್ಯುತ್ತಮ ಬಾಲನಟಿ - ಬೇಬಿ ಸುಹಾಸಿನಿ
- ಅತ್ಯುತ್ತಮ ಬಾಲ ನಟ - ಮಾಸ್ಟರ್ ಸಂಕಲ್ಪ (ಪ್ರಸಾದ್)
- ಅತ್ಯುತ್ತಮ ಛಾಯಾಗ್ರಹಣ- ಜಿ.ಎಸ್. ಭಾಸ್ಕರ್
- ಅತ್ಯುತ್ತಮ ಸಂಭಾಷಣೆ-ಗೋಪಿ ಪೀಣ್ಯ
- ಅತ್ಯುತ್ತಮ ಚಿತ್ರಕಥೆ - ರವೀಂದ್ರ ಎಚ್.ಪಿ.ದಾಸ್
- ಪ್ರಥಮ ನಿರ್ದೇಶಕರ ಅತ್ಯುತ್ತಮ ಚಿತ್ರ - ಸಿದ್ಲಿಂಗು
- ಅತ್ಯುತ್ತಮ ಸಾಹಿತ್ಯ - ಬರಗೂರು ರಾಮಚಂದ್ರಪ್ಪ
- ಅತ್ಯುತ್ತಮ ಸಂಗೀತ ನಿರ್ದೇಶಕ - ಅನೂಪ್ ಸೀಳಿನ್
- ಅನಂತ್ ನಾಗ್ ಗೆ ವಿಷ್ಣುವರ್ಧನ್ ಪ್ರಶಸ್ತಿ
- ಡಿ.ರಾಜೇಂದ್ರ ಬಾಬು ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ
- ಅತ್ಯುತ್ತಮ ಮಕ್ಕಳ ಚಿತ್ರ - ಕಂಸಾಳೆ ಕೈಸಾಳೆ
- ಅತ್ಯುತ್ತಮ ಕಥೆ - ಕುಂ.ವೀರಭದ್ರಪ್ಪ (ಕೂರ್ಮಾವತಾರ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


