ಕಾಬುಲ್ನಲ್ಲಿ 8 ಸಾವಿರ ಕೆ.ಜಿ ತೂಕದ ಬಾಂಬ್ ಪತ್ತೆ

ಕಾಬುಲ್: ಕಾಬುಲ್ನಲ್ಲಿ 8 ಸಾವಿರ ಕೆ.ಜಿ ತೂಕದ ಪ್ರಬಲ ಬಾಂಬ್ವೊಂದು ಪತ್ತೆಯಾಗಿದ್ದು, ಬಾಂಬ್ ನಿಷ್ಕ್ರಿಯ ದಳ ಅದನ್ನು ಕೂಡಲೇ ನಿಷ್ಕ್ರಿಯಗೊಳಿಸಿದೆ.
ಗುಪ್ತಚರ ಇಲಾಖೆಯ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಸೈನಿಕರು, ಟ್ರಕ್ವೊಂದರಲ್ಲಿ ಸಾಗಿಸಲಾಗುತ್ತಿದ್ದ ಬೃಹತ್ ಬಾಂಬನ್ನು ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟ್ರಕ್ನ ಹಿಂಬದಿಯಲ್ಲಿ ಸಿಮೆಂಟ್ ಚೀಲಗಳನ್ನು ಜೋಡಿಸಿ ಬಾಂಬನ್ನು ಮುಚ್ಚಿಡಲಾಗಿತ್ತು. ಚೀಲಗಳ ಪರದೆಯನ್ನು ಸರಿಸಿ ನೋಡಿದಾಗ ಬೃಹತ್ ಗಾತ್ರದ ಬಾಂಬ್ ಕಂಡು ಸೈನಿಕರೇ ಬೆಚ್ಚಿ ಬಿದ್ದಿದ್ದಾರೆ.
ಬಾಂಬ್ ನಿಷ್ಕ್ರಿಯ ದಳ ಸಹಾಯದಿಂದ ಈ ಬೃಹತ್ ಬಾಂಬನ್ನು ಕೂಡಲೆ ನಿಷ್ಕ್ರಿಯಗೊಳಿಸಲಾಯಿತು. ಸುಮಾರು 7.8ರಿಂದ 8 ಸಾವಿರ ಕೆಜಿ ತೂಕವಿರುವ ಬಾಂಬ್ ಇದಾಗಿದ್ದು, ಇದನ್ನು ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಹಕ್ಕಾನಿ ಸಮೂಹದ ಉಗ್ರರು ಸಿದ್ಧಪಡಿಸಿರುವ ಶಂಕೆ ಇದೆ ಎಂದು ಆಫ್ಘಾನಿಸ್ತಾನದ ರಾಷ್ಟ್ರೀಯ ರಕ್ಷಣಾ ನಿರ್ದೇಶನಾಲಯ(ಎನ್ಡಿಎಸ್)ದ ಮುಖ್ಯಸ್ಥರು ತಿಳಿಸಿದ್ದಾರೆ.
'ಒಂದು ವೇಳೆ ಈ ಬೃಹತ್ ಬಾಂಬ್ ಸ್ಫೋಟಗೊಂಡಿದ್ದೆಯಾದರೆ, ಸುಮಾರು 1500 ಮೀಟರ್ ಪ್ರದೇಶದ ಎಲ್ಲ ವಸ್ತುಗಳು, ಮನುಷ್ಯರು ಸುಟ್ಟು ಬೂದಿಯಾಗುತ್ತಿದ್ದರು' ಎಂದು ಎನ್ಡಿಎಸ್ನ ಅಧಿಕಾರಿಗಳು ಹೇಳಿದ್ದಾರೆ.
ಒಟ್ಟಾರೆ ಆಫ್ಘನ್ ರಾಜಧಾನಿ ಕಾಬುಲ್ನ್ನು ಗುರಿಯಾಗಿಸಿಕೊಂಡು ಉಗ್ರರು ರೂಪಿಸಿದ್ದ ಸ್ಫೋಟ ಸಂಚು ಗುಪ್ತಚರ ಇಲಾಖೆಯ ಸಮಯ ಪ್ರಜ್ಞೆಯಿಂದಾಗಿ ವಿಫಲಗೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


