ಪಾಕ್ ಉದ್ಧಟತನಕ್ಕೆ ಭಾರತದ ತೀಕ್ಷ್ಣ ಉತ್ತರ

ನವದೆಹಲಿ: ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ಕುರಿತ ನಿರ್ಧಾರವನ್ನು ಖಂಡಿಸಿ ನಿರ್ಣಯ ಮಂಡಿಸಿದ್ದ ಪಾಕಿಸ್ತಾನದ ನಡೆಗೆ ಲೋಕಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದನ್ನು ಖಂಡಿಸಿ ನಿನ್ನೆ ಪಾಕಿಸ್ತಾನ ಸಂಸತ್ತು ಭಾರತದ ವಿರುದ್ಧ ಖಂಡನಾ ನಿರ್ಣಯ ಮಂಡಿಸಿತ್ತು. ಪಾಕಿಸ್ತಾನ ನಡೆಗೆ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಇಂದು ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸ್ಪೀಕರ್ ಮೀರಾಕುಮಾರ್ ಅವರು ಪಾಕಿಸ್ತಾನದ ವಿರುದ್ಧ ಖಂಡನಾ ನಿರ್ಣಯ ಮಂಡಿಸಿದರು. ಖಂಡನಾ ನಿರ್ಣಯಕ್ಕೆ ಲೋಕಸಭೆಯ ಎಲ್ಲ ಸದಸ್ಯರು ಬೆಂಬಲ ವ್ಯಕ್ತಪಡಿಸಿ, ನಿರ್ಣಯವನ್ನು ಅಂಗೀಕರಿಸಿದರು.
ಇದಕ್ಕೂ ಮೊದಲು ಸ್ಪೀಕರ್ ಮೀರಾ ಕುಮಾರ್ ಅವರು ಪಾಕಿಸ್ತಾನದ ಉದ್ಧಟತನವನ್ನು ಖಂಡಿಸಿದರು. ಪಾಕ್ ಆಕ್ರಮಿತ ಕಾಶ್ಮೀರ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಭಾರತದ ಆಂತರಿಕ ವಿಚಾರಗಳಲ್ಲಿ ಪಾಕಿಸ್ತಾನ ತಲೆಹಾಕಬಾರದು. ಇಲ್ಲವಾದಲ್ಲಿ ಭಾರತ ಅದಕ್ಕೆ ತಕ್ಕ ಉತ್ತರ ನೀಡುತ್ತದೆ ಎಂದು ಎಚ್ಚರಿಕೆ ನೀಡಿದರು.
ಇಂಡೋ-ಪಾಕ್ ಹಾಕಿ ಸರಣಿ ರದ್ದು
ಪಾಕಿಸ್ತಾನ ತೋರಿದ ಆಕ್ಷೇಪಿತ ನಡೆಯ ಪರಿಣಾಮ ಪಾಕ್ ಹಾಕಿ ತಂಡಕ್ಕೆ ಹಿನ್ನಡೆಯಾಗುವಂತೆ ಮಾಡಿದೆ. ಏಪ್ರಿಲ್ನಲ್ಲಿ ಆಯೋಜಿಸಲಾಗಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಹಾಕಿ ಪಂದ್ಯಾವಳಿ ರದ್ದಾಗಿದೆ. ಪಾಕಿಸ್ತಾನ ಹಾಕಿ ತಂಡಕ್ಕೆ ಭಾರತಕ್ಕೆ ಬರಲು ನೀಡಿದ್ದ ಅನುಮತಿಯನ್ನು ಭಾರತ ವಿದೇಶಾಂಗ ಇಲಾಖೆ ಶುಕ್ರವಾರ ರದ್ದು ಮಾಡಿದೆ. ಏಪ್ರಿಲ್ 5ರಿಂದ 15 ರವರಗೆ ಭಾರತದ ರಾಂಚಿ, ಲಕ್ನೋ, ದೆಹಲಿ, ಮೊಹಾಲಿ ಮತ್ತು ಜಲಂಧರ್ನಲ್ಲಿ ಆಯೋಜನೆಗೊಂಡಿದ್ದ 5 ಪಂದ್ಯಗಳ ಹಾಕಿ ಸರಣಿ ರದ್ದಾಗಿವೆ. ಅಲ್ಲದೆ ಈ ಸರಣಿಯ ನಂತರ ಏಪ್ರಿಲ್ 23ರಂದು ಭಾರತ ಪಾಕಿಸ್ತಾನ ಪ್ರವಾಸದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಈ ಸರಣಿಯನ್ನೂ ಸಹ ಭಾರತ ರದ್ದುಗೊಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


