ಈಗಿನ ಸುದ್ದಿ

ನ್ಯಾಯ ದೊರೆತಿದೆ: ಇಟಲಿ ನೌಕಾಪಡೆ ಸಿಬ್ಬಂದಿ ತಾಯಿ

Published On :

ನವದೆಹಲಿ: ಈಗ ಎಲ್ಲವೂ ಸರಿ ಇದೆ. ನಮಗೆ ನ್ಯಾಯ ದೊರೆತಿದೆ. ನಮ್ಮ ಮಕ್ಕಳು ತಮ್ಮ ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಎಂದು ಮೀನುಗಾರರ ಹತ್ಯೆ ಪ್ರಕರಣದ ಆರೋಪಿ ಮಸ್ಸಿಮಿಲಿಯನೋ ತಾಯಿ ತಿಳಿಸಿದ್ದಾರೆ.

ಇಟಲಿಯ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ನನ್ನ ಮಗನನ್ನು ಬಂಧಿಸಿದ ವಿಷಯ ತಿಳಿಯುತ್ತಿದ್ದಂತೆ ನಾನು ಆಘಾತಕ್ಕೆ ಒಳಗಾಗಿದ್ದೆ. ಸತತ ಪರಿಶ್ರಮದ ನಂತರ ಇಟಲಿ ಸರ್ಕಾರದ ನೆರವಿನಿಂದಾಗಿ ನನ್ನ ಮಗ ಸ್ವದೇಶಕ್ಕೆ ವಾಪಸ್ಸಾಗಿದ್ದಾನೆ. ನನ್ನ ಮಗ ಓರ್ವ ಸೈನಿಕ ಮತ್ತು ಆತ ಭಾರತ ದೇಶದ ಸ್ನೇಹಿತ. ಇದೀಗ ಎಲ್ಲವೂ ಸರಿಯಾಗಿದೆ. ನಮಗೆ ನ್ಯಾಯ ದೊರೆತಿದೆ ಎಂದು ಹೇಳಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಕೇರಳದಲ್ಲಿ ನಡೆದ ಮೀನುಗಾರರ ಹತ್ಯೆ ಪ್ರಕರಣ ಸಂಬಂಧ ಭಾರತಕ್ಕೆ ಬೇಕಿರುವ ಆರೋಪಿಗಳನ್ನು ಇಟಲಿ ಸರ್ಕಾರ ತನ್ನಲ್ಲಿಯೇ ಇಟ್ಟುಕೊಂಡು ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಧಕ್ಕೆ ತಂದಿದೆ. ಈ ಮೂಲಕ ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ಬಗೆಹರಿಸುವಂತೆ ಕೇಳಿಕೊಂಡಿದೆ. ಆದರೆ ಇಟಲಿ ನಡೆಗೆ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಭಾರತದಲ್ಲಿರುವ ಇಟಲಿ ರಾಯಭಾರಿಯ ಆಶ್ವಾಸನೆ ಮೇಲೆ ಆರೋಪಿಗಳನ್ನು ತಮ್ಮ ಸ್ವದೇಶಕ್ಕೆ ಕಳುಹಿಸಲಾಯಿತು. ಆದರೆ ಈಗ ವಿಚಾರಣೆಗೆ ವಾಪಸಾಗದೇ ಇರುವುದು ಸುಪ್ರೀಂ ಕೋರ್ಟ್ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಇಟಲಿ ರಾಯಭಾರಿಗೆ ದೇಶ ಬಿಟ್ಟುಹೋಗದಂತೆ ನಿರ್ಭಂಧ ವಿಧಿಸಿ ವಿಮಾನ ನಿಲ್ದಾಣಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.