ಈಗಿನ ಸುದ್ದಿ

ಬಿಹಾರಕ್ಕೆ ವಿಶೇಷ ಹಕ್ಕು: ದೆಹಲಿಯಲ್ಲಿ "ಅಧಿಕಾರ್ ರ್ಯಾಲಿ"

ಬಿಹಾರಕ್ಕೆ ವಿಶೇಷ ಹಕ್ಕು: ದೆಹಲಿಯಲ್ಲಿ "ಅಧಿಕಾರ್ ರ್ಯಾಲಿ"
Published On :

ನವದೆಹಲಿ: ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ "ಅಧಿಕಾರ್ ರ್ಯಾಲಿ" ನಡೆಸಲಾಗುತ್ತಿದೆ.

ದೇಶದ ಅತ್ಯಂತ ಹಿಂದುಳಿದ ರಾಜ್ಯವೆಂಬ ಕುಖ್ಯಾತಿಗಳಿಸಿರುವ ಬಿಹಾರ ರಾಜ್ಯದ ಜನರಿಗೆ ವಿಶೇಶ ಹಕ್ಕುಗಳನ್ನು ನೀಡಬೇಕು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಗ್ರಹಿಸಿದ್ದಾರೆ. ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಬೃಹತ್ "ಅಧಿಕಾರ್ ರ್ಯಾಲಿ"ಯನ್ನು ಉದ್ದೇಶಿಸಿ ಮಾತನಾಡಿದ ನಿತೀಶ್ ಕುಮಾರ್ ಅವರು, ಬಿಹಾರಕ್ಕೆ ವಿಶೇಷ ಮಾನ್ಯತೆ ನೀಡುವಂತೆ ನಾವು ಕೇಂದ್ರದ ಬಳಿ ಬಿಕ್ಷೆ ಬೇಡಲು ಇಲ್ಲಿಗೆ ಬಂದಿಲ್ಲ. ನಮ್ಮ ಹಕ್ಕನ್ನು ಪಡೆಯಲು ಬಂದಿದ್ದೇವೆ. ನಮಗೆ ಅಭಿವೃದ್ಧಿ ಸಾಧಿಸುವ ಹಕ್ಕಿಲ್ಲವೆ..? ಎಂದು ಪ್ರಶ್ನಿಸಿದರು.

ನಾವು ಬೇರೆ ರಾಜ್ಯಗಳನ್ನು ದೂಷಿಸುತ್ತಿಲ್ಲ. ಬದಲಿಗೆ ಬೇರೆ ರಾಜ್ಯಗಳಂತೆ ನಾವು ಅಭಿವೃದ್ಧಿ ಸಾಧಿಸಲು ಸ್ವಲ್ಪ ಸಹಾಯ ಮಾಡಿ ಎಂದಷ್ಟೇ ಕೇಂದ್ರವನ್ನು ಕೇಳುತ್ತಿದ್ದೇವೆ ಎಂದು ನಿತೀಶ್ ಹೇಳಿದರು. ಅಲ್ಲದೆ ದೇಶದ ಆರ್ಥಿಕ ನೀತಿಯನ್ನು ಮತ್ತು ದೇಶದ ಬೃಹತ್ ಕೈಗಾರಿಕೆಗಳ ನಡವಳಿಕೆಗಳನ್ನು ಖಂಡಿಸಿದರು. ದೇಶದ ಅತ್ಯಂತ ಯಶಸ್ವಿ ಉದ್ಯಮಿಗಳೆಲ್ಲರೂ ಬಿಹಾರಿಗಳೇ. ಆದರೆ ಅವರಾರು ಬಿಹಾರದಲ್ಲಿ ಉಳಿದಿಲ್ಲ. ನಾನಾ ಕಾರಣಗಳಿಗಾಗಿ ನಾನಾ ರಾಜ್ಯಗಳಿಗೆ ವಲಸೆ ಹೋಗಿ ನೆಲೆಸಿದ್ದಾರೆ.

"ಕೇಂದ್ರ ಸರ್ಕಾರ ಬಿಹಾರದ ಕುರಿತು ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ. ಇಂದು ಕೇಂದ್ರ ಸರ್ಕಾರಕ್ಕೆ ನಾವು ನಮ್ಮ ಬಿಹಾರದ ಶಕ್ತಿ ಏನೆಂದು ತೋರಿಸೋಣ" ಎಂದು ನಿತೀಶ್ ಘರ್ಜಿಸಿದರು.

ಒಟ್ಟಾರೆ ನವದೆಹಲಿಯ ರಾಮಲೀಲಾ ಮೈದಾನ ಇಂದು ಬಿಹಾರಿಗಳಿಂದ ತುಂಬಿ ತುಳುಕುತ್ತಿತ್ತು. ದೇಶದ ಹಿಂದುಳಿದ ರಾಜ್ಯ ಬಿಹಾರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವುದು ಅವರ ಒಕ್ಕೋರಲಿನ ಘೋಷಣೆಯಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.