ಸ್ವಿಸ್ ಮಹಿಳೆ ಮೇಲೆ ಅತ್ಯಾಚಾರ: ಮತ್ತೆ ಮೂವರ ಬಂಧನ

ದತಿಯಾ: ಮಧ್ಯಪ್ರದೇಶದಲ್ಲಿ ಶನಿವಾರ ಮಧ್ಯರಾತ್ರಿ ನಡೆದ ಸ್ವಿಸ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾನುವಾರ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಧ್ಯಪ್ರದೇಶದ ದತಿಯಾ ಅರಣ್ಯ ಪ್ರದೇಶದಲ್ಲಿ ನಿನ್ನೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಧ್ಯಪ್ರದೇಶ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಧ್ಯಪ್ರದೇಶದ ವಿಷ್ಣು ಕಂಜರ್, ರಾಮ್ ಕಂಜರ್, ಗಾಝಾ ಕಡಂಜರ್ ಎಂದು ಗುರುತಿಸಲಾಗಿದೆ.
ನಿನ್ನೆ ಮಧ್ಯಪ್ರದೇಶದ ಓರ್ಚಾದಿಂದ ಉತ್ತರಪ್ರದೇಶದ ಆಗ್ರಾಕ್ಕೆ ಸೈಕಲ್ ಮೂಲಕ ತೆರಳಿದ್ದ ಸ್ವಿಸ್ ದಂಪತಿಗಳು, ರಾತ್ರಿಯಾದ್ದರಿಂದ ಮಧ್ಯಪ್ರದೇಶದ ದತಿಯಾ ಬಳಿ ಟೆಂಟ್ ಹಾಕಿ ವಿಶ್ರಾಂತಿ ಪಡೆಯುತ್ತಿದ್ದರು. ಈ ಸಮಯದಲ್ಲಿ ಟೆಂಟ್ಗೆ ನುಗ್ಗಿದ 6 ರಿಂದ 8 ಮಂದಿ ದುಷ್ಕರ್ಮಿಗಳು, ಪತಿಯನ್ನು ಥಳಸಿ ತೀವ್ರ ಹಲ್ಲೆ ಮಾಡಿದರು. ನಂತರ ಅವರನ್ನು ಹಗ್ಗದಿಂದ ಕಟ್ಟಿಹಾಕಿ ಅವರ ಎದುರೇ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.
ನಂತರ ಸ್ವಿಸ್ ಮಹಿಳೆ ಸಮೀಪದ ಹಳ್ಳಿಗೆ ತೆರಳಿ ಅಲ್ಲಿನ ಶಾಲಾ ಶಿಕ್ಷಕರ ನೆರವಿನಿಂದ ದತಿಯಾ ಪೊಲೀಸರ ಬಳಿ ತೆರಳಿ ಅತ್ಯಾಚಾರ ಮತ್ತು ಹಲ್ಲೆಯ ದೂರನ್ನು ದಾಖಸಿದ್ದಾರೆ. ಪ್ರಕರಣ ಸಂಬಂಧ ದತಿಯಾ ಪೊಲೀಸರು ನಿನ್ನೆಯೇ 15 ಆರೋಪಿಗಳನ್ನು ಬಂಧಿಸಿದ್ದು, ಇಂದು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸ್ವಿಸ್ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದ ವಿಷಯ ಈಗಾಗಲೇ ಸ್ವಿಸ್ ರಾಯಭಾರ ಕಚೇರಿಗೂ ತಲುಪಿದ್ದು, ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸಿ ತಮ್ಮ ಪ್ರಜೆಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಸ್ವಿಸ್ ರಾಯಭಾರ ಕಚೇರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


