ಈಗಿನ ಸುದ್ದಿ

ಗಡ್ಕರಿ ಅವರ ಪುರ್ತಿ ಸಂಸ್ಥೆಯಿಂದ ತೆರಿಗೆ ವಂಚನೆ

ಗಡ್ಕರಿ ಅವರ ಪುರ್ತಿ ಸಂಸ್ಥೆಯಿಂದ ತೆರಿಗೆ ವಂಚನೆ
Published On :

ನವದೆಹಲಿ: ಬಿಜೆಪಿ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಕುಟುಂಬ ಮಾಲೀಕತ್ವದ ಪುರ್ತಿ ಗ್ರೂಪ್ ಸಂಸ್ಥೆಯು 7 ಕೋಟಿ ರು. ಆದಾಯಕ್ಕೆ ತೆರಿಗೆ ವಂಚಿಸಿರುವುದಾಗಿ ಆದಾಯ ತೆರಿಗೆ ಅಧಿಕಾರಿಗಳು ಆರೋಪಿಸಿದ್ದಾರೆ.

ಆದಾಯ ತೆರಿಗೆ ಅಧಿಕಾರಿಗಳು ಪುರ್ತಿ ಪವರ್ ಮತ್ತು ಶುಗರ್(ಪಿಪಿಎಸ್‌ಎಲ್)ಸಂಸ್ಥೆಯ ವಹಿವಾಟಿನ ಮೇಲೆ ಕಳೆದ ಎರಡು ವರ್ಷಗಳಿಂದ ನಿಗಾ ವಹಿಸಿದ್ದು, ಎರಡು ವರ್ಷದ ಆರ್ಥಿಕ ವಹಿವಾಟು ನಡೆಸಿರುವ ಸಂಸ್ಥೆ ಸುಮಾರು 7 ಕೋಟಿ ರು. ಆದಾಯಕ್ಕೆ ತೆರಿಗೆ ವಂಚಿಸಿರುವುದಾಗಿ ಮಾಹಿತಿ ಕಲೆ ಹಾಕಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.

ತೆರಿಗೆ ಅಧಿಕಾರಿಗಳ ಆರೋಪವನ್ನು ತಳ್ಳಿಹಾಕಿರುವ ಪುರ್ತಿ ಸಂಸ್ಥೆಯ ಅಧಿಕಾರಿಗಳು, ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ಇಲ್ಲಿಯವರೆಗೂ ಸಂಸ್ಥೆಗೆ ಯಾವುದೇ ನೋಟಿಸ್ ನೀಡಿಲ್ಲ. ಕಳೆದ ಎರಡು ಆರ್ಥಿಕ ಸಂವತ್ಸರದ ಅವಧಿಯಲ್ಲಿ ಸಂಸ್ಥೆಯು ಯಾವುದೇ ಲೋಪ ಎಸಗಿಲ್ಲ. ಹೀಗಾಗಿ ಇಲಾಖೆಯಿಂದ ಮೊದಲು ನೋಟಿಸ್ ಬರಲಿ ಆನಂತರ ಈ ಆರೋಪದ ಕುರಿತಾಗಿ ಆಲೋಚಿಸಲಾಗುವುದು ಎಂದು ಹೇಳಿದ್ದಾರೆ.

ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಂಸ್ಥೆಯ ಪಿಆರ್‌ಒ ನಿತೀನ್ ಕುಲಕರ್ಣಿ ಅವರು, ಕಳೆದ ಎರಡು ವರ್ಷಗಳಿಂದ ಗಡ್ಕರಿ ಅವರು ಸಂಸ್ಥೆಯ ಜೊತೆ ಯಾವುದೇ ರೀತಿಯ ಒಡನಾಟ ಇಟ್ಟುಕೊಂಡಿಲ್ಲ. ಹೀಗಾಗಿ ಕೆಲವರು ಅವರ ಮೇಲೆ ಗೂಬೆ ಕೂರಿಸುವ ಹಾಗು ವಿನಾಕಾರಣ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.