ಈ ಬಾರಿ ಪಕ್ಷೇತರರಿಗೆ ಬೇಡಿಕೆಯೇ ಇಲ್ಲ!
ಕ.ಪ್ರ.ವಾರ್ತೆ ಬೆಂಗಳೂರು ಮೇ 8-
ಕಳೆದ ಬಾರಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಪಕ್ಷೇತರರು ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಈ ಬಾರಿ ಅವರಿಗೆ ಬೇಡಿಕೆಯೇ ಇಲ್ಲ. ಕಳೆದ ಚುನಾವಣೆಯಲ್ಲಿ ಬಿಜೆಪಿ ಸರಳ ಬಹುಮತವೂ ಇಲ್ಲದೆ ಒದ್ದಾಡುತ್ತಿದ್ದಾಗ 6 ಪಕ್ಷೇತರರು ಸರ್ಕಾರ ರಚಿಸುವಲ್ಲಿ ನೆರವು ನೀಡಿ ಗಮನ ಸೆಳೆದಿದ್ದರು. ಅವರಿಗೆ ಅಷ್ಟೇ ಬೇಡಿಕೆಯೂ ಬಂದಿದ್ದರಿಂದ ಅವರೆಲ್ಲರೂ ಸಚಿವರಾಗಿಯೂ ಮೆರೆದಿದ್ದರು
ಆದರೆ, ಈ ಬಾರಿ ಚಿತ್ರಣವೇ ಬೇರೆ. ಈ ಚುನಾವಣೆಯಲ್ಲಿ 12 ಪಕ್ಷೇತರರು ಆರಿಸಿ ಬಂದಿದ್ದಾರೆ. ಆದರೆ, ಕಾಂಗ್ರೆಸ್ಗೆ ಸ್ಪಷ್ಟ ಬಹುಮತವಿರುವುದರಿಂದ ಅವರರನ್ನು ಕೇಳುವವರೇ ಇಲ್ಲದಂತಾಗಿದೆ. ಈ ಬಾರಿ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಪಕ್ಷೇತರರು ಗೆಲ್ಲುವ ಬಗ್ಗೆ ಸ್ಥಳೀಯ ಸಂಸೆ ಚುನಾವಣೆ ಫಲಿತಾಂಶ ವೇಳೆ ಸೂಚನೆ ಸಿಕ್ಕಿತ್ತು.ಹೇಗೆಂದರೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 776 ಸ್ಥಾನಗಳಲ್ಲಿ ಪಕ್ಷೇತರರು ಜಯಸಾಧಿಸಿದ್ದರು. ಇದರಿಂದ ಪ್ರೇರಿತರಾದ ಹೆಚ್ಚಿನ ಅಭ್ಯರ್ಥಿಗಳು ಮತ್ತು ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್ ವಂಚನೆಯಾದವರು ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
ಯಾರೆಲ್ಲಾ ಆಯ್ಕೆಯಾಗಿದ್ದಾರೆ?: ಬಾಗೇಪಲ್ಲಿಯಲ್ಲಿ ಎಸ್.ಎನ್.ಸುಬ್ಬಾರಡ್ಡಿ ಜಯ ಸಾಧಿಸಿದ್ದಾರೆ. ಬೆಳಗಾವಿ ದಕ್ಷಿಣದಲ್ಲಿ ಸಾಂಬಾಜಿ ಲಕ್ಷ್ಮಣ್ ಪಾಟೀಲ್, ಬಿಜೆಪಿಯ ಅಭಯ್ ಪಾಟೀಲ್ ಅವರನ್ನು 6310 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ಭಟ್ಕಳದಲ್ಲಿ ಮಂಕಳ ಸುಬ್ಬ ವೈದ್ಯ ಜೆಡಿಎಸ್ನ ಇನಾಯತುಲ್ಲಾ ಶಬಂದ್ರಿ ವಿರುದ್ಧ 9884 ಮತಗಳ ಜಯ ಸಾಧಿಸಿದ್ದಾರೆ. ಕಾರವಾರದಲ್ಲಿ ಸಂತೀಶ್ ಸೈಲ್ ಕೃಷ್ಣ ಜಯಗಳಿಸಿದ್ದು, ಇವರ ಎದರು ಬಿಜೆಪಿಯ ಆನಂದ್ ಅಸ್ನೋಟಿಕರ್ 35880 ಮತಗಳ ಅಂತರದಲ್ಲಿ ಸೋತಿದ್ದಾರೆ. ಖಾನಾಪುರದಲ್ಲಿ ಅರವಿಂದ್ ಚಂದ್ರಕಾಂತ್ ಪಾಟೀಲ್ ಕಾಂಗ್ರೆಸ್ನ ರಫಿಕ್ ಖಾತಲ್ ಸಾಬ್ ಖಾನಾಪುರಿ ಅವರನ್ನು ಸೋಲಿಸಿದ್ದಾರೆ. ಕೋಲಾರದಲ್ಲಿ ಆರ್.ವರ್ತೂರು ಪ್ರಕಾಶ್ ಮತ್ತೆ ಗೆಲವು ಸಾಧಿಸಿದ್ದಾರೆ. ಇವರು ಮಾಜಿ ಸಚಿವ, ಜೆಡಿಎಸ್ ನಾಯಕ ಶ್ರೀನಿವಾಸಗೌಡರನ್ನು ಸೋಲಿಸಿದ್ದಾರೆ. ಕೂಡ್ಲಿಗಿಯಲ್ಲಿ ಬಿ.ನಾಗೇಂದ್ರ ಕಾಂಗ್ರೆಸ್ನ ಎಸ್.ವೆಂಕಟೇಶ್ ಅವರನ್ನು ಭಾರೀ ಅಂತರದಲ್ಲಿ ಸೋಲಿಸಿದ್ದಾರೆ. ಕುಂದಾಪುರದಲ್ಲಿ ಇತ್ತೀಚಿಗಷ್ಟೆ ಬಿಜೆಪಿ ತ್ಯಜಿಸಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲವು ಸಾಧಿಸಿದ್ದಾರೆ. ಇವರು ಕಾಂಗ್ರೆಸ್ನ ಮಲ್ಲಾಡಿ ಶ್ರೀನಿವಾಸ ಶೆಟ್ಟಿಯನ್ನು 40610 ಮತಗಳನ್ನು ಹೆಚ್ಚಾಗಿ ಪಡೆದು ಗೆದ್ದಿದ್ದಾರೆ. ಮುಳಬಾಗಿಲು ಕ್ಷೇತ್ರದಲ್ಲಿ ಜಿ.ಮಂಜುನಾಥ್ ಜೆಡಿಎಸ್ನ ಮುನಿನಂಜಪ್ಪ ವಿರುದ್ಧ ಗೆಲವು ಸಾಧಿಸಿದ್ದಾರೆ.
ಇತರರೂ ಆಯ್ಕೆಯಾಗಿದ್ದಾರೆ: ಚನ್ನಪಟ್ಟಣದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಜೆಡಿಎಸ್ನ ಅನಿತಾಕುಮಾರಸ್ವಾಮಿ ಅವರನ್ನು ಸೋಲಿಸಿದ್ದಾರೆ. ಮೇಲುಕೋಟೆಯಿಂದ ಸರ್ವೋದಯ ಕರ್ನಾಟಕ ಪಕ್ಷದ ಕೆ.ಎಸ್.ಪುಟ್ಟಣ್ಣಯ್ಯ ಗೆಲವು ಸಾಧಿಸಿದ್ದಾರೆ. ಇವರು ಜೆಡಿಎಸ್ನ ಸಿ.ಎಸ್.ಪುಟ್ಟರಾಜು ಅವರನ್ನು ಸೋಲಿಸುವ ಮೂಲಕ ಪ್ರಥಮ ಬಾರಿಗೆ ತಮ್ಮ ಪಕ್ಷದ ಖಾತೆ ತೆರೆದಿದ್ದಾರೆ.
ಇದೇರೀತಿ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಅಶೋಕ್ ಖೇಣಿ ಜಯ ಸಾಧಿಸಿದ್ದಾರೆ. ಅವರು ಕರ್ನಾಟಕ ಮಕ್ಕಳ ಪಕ್ಷ ಎಂಬ ತಮ್ಮದೇ ಹೊಸ ಪಕ್ಷ ಸ್ಥಾಪಿಸಿದ್ದಾರೆ.
ಲಕ್ಷಕ್ಕೂ ಅಧಿಕ ಮತ ಪಡೆದ ವಿಜೇತರು
ಎಸ್.ಟಿ. ಸೋಮಶೇಖರ್ (ಕಾಂಗ್ರೆಸ್)- ಯಶವಂತಪುರ- 1,20,380
ಅರವಿಂದ ಲಿಂಬಾವಳಿ (ಬಿಜೆಪಿ)- ಮಹದೇವಪುರ- 1,10,244
ಶಿವಣ್ಣ ಬಿ. (ಕಾಂಗ್ರೆಸ್)- ಆನೇಕಲ್- 1,05,464
ಪ್ರಕಾಶ್ ಹುಕ್ಕೇರಿ (ಕಾಂಗ್ರೆಸ್)- ಚಿಕ್ಕೋಡಿ ಸದಲಗ- 1,02,237
ಟ ಎಂ.ಕೃಷ್ಣಪ್ಪ (ಬಿಜೆಪಿ)- ಬೆಂಗಳೂರು ದಕ್ಷಿಣ- 1,02,207
ಡಿ.ಕೆ.ಶಿವಕುಮಾರ್ (ಕಾಂಗ್ರೆಸ್)- 1,00,007
ಅತಿ ಹೆಚ್ಚು ಅಂತರದ ಗೆಲವು
ಪ್ರಕಾಶ್ ಹುಕ್ಕೇರಿ (ಕಾಂಗ್ರೆಸ್)- ಚಿಕ್ಕೋಡಿ ಸದಲಗ- 76,588
ಬಾಲಚಂದ್ರ ಜಾರಕಿಹೊಳಿ (ಬಿಜೆಪಿ)- ಅರಭಾವಿ- 75,221
ಉಮೇಶ್ ಕತ್ತಿ (ಬಿಜೆಪಿ)- ಹುಕ್ಕೇರಿ- 57,326
ರಾಮಲಿಂಗಾ ರೆಡ್ಡಿ (ಕಾಂಗ್ರೆಸ್)- ಬಿಟಿಎಂ ಲೈಔಟ್- 49,048
ಪಿ. ರಾಜೀವ್ (ಬಿಎಸ್ಆರ್)- ಕುಡಚಿ- 46,234
ಸಾವಿರಕ್ಕೂ ಕಡಿಮೆ ಅಂತರದ ಗೆಲವು
ಭೀಮಾ ನಾಯಕ್ (ಜೆಡಿಎಸ್)- ಹಗರಿಬೊಮ್ಮನಹಳ್ಳಿ- 125
ಕೆ.ಬಿ. ಪ್ರಸನ್ನಕುಮಾರ್ (ಕಾಂಗ್ರೆಸ್)- ಶಿವಮೊಗ್ಗ- 278
ಎಸ್.ಆರ್. ದೊಡ್ಡಮನಿ (ಕಾಂಗ್ರೆಸ್)- ಶಿರಹಟ್ಟಿ- 315
ಎಚ್.ಸಿ. ಮಹದೇವಪ್ಪ (ಕಾಂಗ್ರೆಸ್)- ಟಿ.ನರಸೀಪುರ- 323
ಪಿ.ಎಂ. ನರೇಂದ್ರಸ್ವಾಮಿ (ಕಾಂಗ್ರೆಸ್)- ಮಳವಳ್ಳಿ- 538
ಬಿ.ಬಿ.ನಿಂಗಯ್ಯ (ಜೆಡಿಎಸ್)- ಮೂಡಗೆರೆ- 635
ರಾಜು ಅಲಗೂರ್ (ಕಾಂಗ್ರೆಸ್)- ನಾಗಠಾಣ- 667
ಕೆ.ಶಿವಮೂರ್ತಿ (ಕಾಂಗ್ರೆಸ್)- ಮಾಯಕೊಂಡ- 694
ದುರ್ಯೋಧನ ಐಹೊಳೆ (ಬಿಜೆಪಿ)- ರಾಯಭಾಗ್- 829
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

