ಈಗಿನ ಸುದ್ದಿ

ಪಾಕ್‌ನಲ್ಲಿ ಅವಳಿ ಬಾಂಬ್ ಸ್ಫೋಟ: 8 ಸಾವು

ಪಾಕ್‌ನಲ್ಲಿ ಅವಳಿ ಬಾಂಬ್ ಸ್ಫೋಟ: 8 ಸಾವು
Published On :

ಇಸ್ಲಾಮಾಬಾದ್: ಸಾರ್ವತ್ರಿಕ ಚುನಾವಣೆಯ ದಿನದಂದೇ ಪಾಕಿಸ್ತಾನದಲ್ಲಿ ಅವಳಿ ಬಾಂಬ್ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 8 ಜನ ಮೃತಪಟ್ಟಿದ್ದಾರೆ ಮತ್ತು 33ಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡಿದ್ದಾರೆ.

ಪಾಕ್ ಸಂಸತ್ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಕರಾಚಿಯ ಎಎನ್‌ಪಿ ಚುನಾವಣಾ ಕಚೇರಿ ಬಳಿ ತಾಲಿಬಾನಿ ಉಗ್ರರು ಈ ದುಷ್ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಪಾಕ್‌ನಲ್ಲಿ ಈವರೆಗೆ ಚುನಾವಣಾ ಸಂಬಂಧಿ ಗಲಭೆಗಳು ಮತ್ತು ಉಗ್ರರು ನಡೆಸಿದ ಹಿಂಸಾಕೃತ್ಯಗಳಿಂದಾಗಿ ಸುಮಾರು 130ಕ್ಕು ಹೆಚ್ಚು ಜನ ಅಸು ನೀಗಿದ್ದಾರೆ. ನಿನ್ನೆ ನಡೆದ ಚುನಾವಣಾ ಹಿಂಸಾಚಾರವೊಂದರಲ್ಲಿ 15 ಜನ ಮೃತಪಟ್ಟಿದ್ದರು.

ಪಾಕಿಸ್ತಾನದಲ್ಲಿ ಸುಮಾರು 8.6ಕೋಟಿ ಮತದಾರರಿದ್ದು, ವಿವಿಧ ಪಕ್ಷಗಳ 4,670 ಅಭ್ಯರ್ಥಿಗಳ ಭವಿಷ್ಯವನ್ನು ಇಂದು ಮತದಾರರು ಬರೆಯಲಿದ್ದಾರೆ. ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರ ತೆಹ್ರಿಕ್-ಇ-ಇನ್ಸಾಫ್, ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಹಾಗೂ ಪಾಕ್ ಮಾಜಿ ಪ್ರಧಾನಿ ನಾವಜ್ ಷರೀಫ್ ನೇತೃತ್ವದ ಪಾಕಿಸ್ತಾನ ಮುಸ್ಲಿಂ ಲೀಗ್-ಎನ್ ಪಕ್ಷಗಳು ಕಣದಲ್ಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.