ಕಾಪ್ಟರ್ ಖರೀದಿ: ದೂರವಾಣಿ ಸಂಭಾಷಣೆ ಮಾಹಿತಿ ಪಡೆದ ಸಿಬಿಐ

ನವದೆಹಲಿ: ಬಹುಕೋಟಿ ವಿವಿಐಪಿ ಕಾಪ್ಚರ್ ಖರೀದಿ ಹಗರಣ ಕುರಿತಂತೆ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ), ಇಟಲಿ ತನಿಖಾಧಿಕಾರಿಗಳಿಂದ ದೂರವಾಣಿ ಸಂಭಾಷಣೆಗಳ ಮಾಹಿತಿ ಪಡೆದುಕೊಂಡಿದೆ.
ಕಾಪ್ಟರ್ ಖರೀದಿ ಸಂಬಂಧ ಇಟಲಿ ವಿಮಾನ ತಯಾರಿಕಾ ಸಂಸ್ಥೆಯ ಮಧ್ಯವರ್ತಿಗಳು ನಡೆಸಿದ ದೂರವಾಣಿ ಸಂಭಾಷಣೆಗಳ ಪ್ರತಿಯನ್ನು ಸಿಬಿಐ ಪಡೆದುಕೊಂಡಿದ್ದು, ಈ ದೂರವಾಣಿ ಕರೆಗಳ ಸಂಭಾಷಣೆಯ ಪ್ರತಿ ಪ್ರಸ್ತುತ ರಕ್ಷಣಾ ಇಲಾಖೆಯ ಸುಪರ್ದಿಗೆ ನೀಡಲಾಗಿದೆ. ದೂರವಾಣಿ ಕರೆಗಳು ಇಟಲಿ ಭಾಷೆಯಲ್ಲಿದ್ದು, ಸಿಬಿಐ ಅಧಿಕಾರಿಗಳು ಆ ಕರೆಗಳಲ್ಲಿನ ಮಾಹಿತಿಯನ್ನು ಭಾಷಾಂತರ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.
ದೂರವಾಣಿಯಲ್ಲಿ ಹಗರಣದ ಮಧ್ಯವರ್ತಿಗಳಾದ ಇಟಲಿ ಮೂಲದ ಹ್ಯಾಷೆಕ್ ಗಿಡೋ ಮತ್ತು ಜೆರೊಸೋ ಕಾರ್ಲೋ ಅವರು ಖರೀದಿ ಒಪ್ಪಂದ ಕುರಿತಂತೆ ಹಲವು ಮಾಹಿತಿಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಅಲ್ಲದೆ ಇದೇ ಸಂಭಾಷಣೆಯಲ್ಲಿ ಭಾರತದ ಕೆಲ ಅಧಿಕಾರಗಳ ಹೆಸರುಗಳು ಪ್ರಸ್ತಾಪವಾಗಿವೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ಈ ಹಿಂದೆ ಮಾಹಿತಿ ವಿನಿಮಯಕ್ಕೆ ನಿರಾಕರಿಸಿದ್ದ ಇಟಲಿ ತನಿಖಾಧಿಕಾರಿಗಳು, ಭಾರತ ಮತ್ತು ಯೂರೋಪ್ ಒಕ್ಕೂಟದ ಒತ್ತಾಯದ ಮೇರೆಗೆ ಈಗ ಮಾಹಿತಿ ವಿನಿಮಯಕ್ಕೆ ಒಪ್ಪಿಗೆ ನೀಡಿದ್ದಾರೆ.
ಅಲ್ಲದೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮಾಹಿತಿ ವಿನಿಮಯ ಕುರಿತಂತೆ ಪ್ರತ್ಯೇಕ ಕಾನೂನು ಕೂಡ ಇದೆ. ಅದರ ಪ್ರಕಾರ ಪ್ರಕರಣವೊಂದರ ಮಾಹಿತಿಯನ್ನು ಆ ಪ್ರಕರಣದಿಂದ ಪರಿಣಾಮಕ್ಕೊಳಗಾಗುವ ರಾಷ್ಟ್ರದೊಂದಿಗೆ ತನಿಖಾ ಸಂಸ್ಥೆಗಳು ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು. ಇದೇ ಅಂಶವನ್ನು ಮುಂದಿಟ್ಟುಕೊಂಡು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತ ತನ್ನ ವಾದ ಮಂಡಿಸಿತ್ತು.
ಕಾಪ್ಟರ್ ಖರೀದಿ ಹಗರಣದಲ್ಲಿ ಇಟಲಿ ಮೂಲದ ಅಗಸ್ಟಾವೆಸ್ಟ್‌ಲ್ಯಾಂಡ್ ಸಂಸ್ಥೆ ಮತ್ತು ಯುಕೆ ಮೂಲದ ಫಿನ್‌ಮೆಕಾನಿಕಾ ಸಂಸ್ಥೆಗಳು ತಮ್ಮ ಕಾಪ್ಟರ್‌ಗಳನ್ನು ಭಾರತಕ್ಕೆ ಮಾರಲು ಮದ್ಯವರ್ತಿಗಳನ್ನು ಬಳಸಿಕೊಂಡ ಅಂಶವನ್ನು ಇಟಲಿ ತನಿಖಾ ಸಂಸ್ಥೆಗಳು ಬೆಳಕಿಗೆ ತಂದಿದ್ದವು. ಈ ಮಧ್ಯವರ್ತಿಗಳಿಗೆ ಭಾರಿ ಪ್ರಮಾಣದಲ್ಲಿ ಹಣದ ಆಮಿಷವೊಡ್ಡಿದ್ದ ಅಂಶಗಳನ್ನು ಅಧಿಕಾರಿಗಳು ಬಯಲಿಗೆಳೆದಿದ್ದರು. ಅಂತೆಯೇ ಹಗರಣದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಅಕ್ರಮದಲ್ಲಿ ಪಾಲ್ಗೊಂಡಿರುವುದು ಕಂಡುಬಂದಿತ್ತು. ಸ್ವತಃ ನಿವೃತ್ತ ನೌಕಾಪಡೆ ಮುಖ್ಯಸ್ಥ ತ್ಯಾಗಿ ಅವರು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆ ಎದುರಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


