ಮೃತ ಮಂಜುನಾಥ್ ಐಎಎಸ್ ಪೂರ್ವಭಾವಿ ಪರೀಕ್ಷೆಯೇ ಪಾಸಾಗಿಲ್ಲ: ಯುಪಿಎಸ್ಸಿ
ನವದೆಹಲಿ: ಐಎಎಸ್ ಪರೀಕ್ಷೆಯ ಫಲಿತಾಂಶದ ಪಟ್ಟಿಯಲ್ಲಿ ತನ್ನ ಹೆಸರಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದ ರಾಜ್ಯದ ವಿ.ವೈ ಮಂಜುನಾಥ್ ಅವರು ಪೂರ್ವಭಾವಿ ಪರೀಕ್ಷೆಯೇ ಪಾಸಾಗಿಲ್ಲ ಎಂದು ಸೋಮವಾರ ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ಸ್ಪಷ್ಟಪಡಿಸಿದೆ.
ಯುಪಿಎಸ್ಸಿ ಪ್ರಕಟಿಸಿದ್ದ ಫಲಿತಾಂಶದ ಪಟ್ಟಿಯಲ್ಲಿ ತನ್ನ ಹೆಸರಿಲ್ಲ ಎಂಬ ಕಾರಣಕ್ಕೆ ಮಡಿಕೇರಿಯ ನಾಪೋಕ್ಲು ಬಳಿ ಶನಿವಾರ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದ. ಅಂತ್ಯಕ್ರಿಯೆ ನಂತರ ಮಾತನಾಡಿದ್ದ ಆತನ ತಾಯಿ ನಾಗರತ್ಮಮ್ಮ, ಮಗನ ಸಾವಿಗೆ ಕೇಂದ್ರ ಲೋಕಸೇವಾ ಆಯೋಗವೇ ಕಾರಣ ಎಂದು ಬೊಟ್ಟು ಮಾಡಿ ತೋರಿಸಿದ್ದರು. ನಮ್ಮ ಪುತ್ರ ರ್ಯಾಂಕ್ ವಿದ್ಯಾರ್ಥಿ. ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುತ್ತಾನೆ ಎಂಬ ನಿರೀಕ್ಷೆ ಇತ್ತು. ಆದರೆ ಆತನ ಹೆಸರಿನ ಜಾಗದಲ್ಲಿ ಬೇರೆ ಹೆಸರಿದೆ. ಆಯೋಗದ ಯಡವಟ್ಟಿನಿಂದ ಇಂದು ಇಂತಹ ಹಲವು ವಿದ್ಯಾರ್ಥಿಗಳು ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು.
ಮಂಜುನಾಥ್ ತಾಯಿ ಆರೋಪಕ್ಕೆ ಯುಪಿಎಸ್ಸಿ ಇಂದು ಸ್ಪಷ್ಟಿಕರಣ ನೀಡಿದ್ದು, ಮಂಜುನಾಥ್ ಐಎಎಸ್ ಪೂರ್ವಭಾವಿ ಪರೀಕ್ಷೆಯೇ ಪಾಸಾಗಿಲ್ಲ ಎಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

