24 ಸಚಿವರ ಪಟ್ಟಿ ಸಿದ್ಧ, ನಾಳೆ ಪ್ರಮಾಣ

ನವದೆಹಲಿ: ಮೊದಲ ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟಕ್ಕೆ ಸೇರಲಿರುವ 24 ಸಚಿವರ ಪಟ್ಟಿ ಅಂತಿಮವಾಗಿದ್ದು, ಇದಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಮ್ಮತಿ ಸೂಚಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
24 ಸಚಿವರ ಪಟ್ಟಿ ಸಿದ್ಧವಾಗಿದ್ದು, ಈ ಎಲ್ಲ ಶಾಸಕರು ನಾಳೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೊದಲ ಹಂತದಲ್ಲಿ ಯಾವುದೇ ವಿಧಾನ ಪರಿಷತ್ ಸದಸ್ಯರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿಲ್ಲ. ಹೀಗಾಗಿ ವಿಧಾನ ಪರಿಷತ್ ಸದಸ್ಯೆ ಮೊಟಮ್ಮ ಅವರ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಇನ್ನು ಕಳಂಕಿತ ಶಾಸಕರಿಗೂ ಕೊಕ್ ನೀಡಲಾಗಿದ್ದು, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ಅವರ ಹೆಸರು ಸಹ ಅಂತಿಮ ಪಟ್ಟಿಯಲ್ಲಿ ಇಲ್ಲ.
ಜಿಲ್ಲಾವಾರು ಪ್ರಾತಿನಿಧ್ಯದ ಮೇಲೆ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದ್ದು, ಮಾಧ್ಯಮಕ್ಕೆ ಲಭ್ಯವಾದ 24 ಸಂಚಿವರ ಅಂತಿಮ ಪಟ್ಟಿ ಈ ಕೆಳಗಿನಂತಿದೆ..
- ಮಂಡ್ಯ- ಅಂಬರೀಷ್
- ಬೆಳಗಾವಿ - ಪ್ರಕಾಶ್ ಹುಕ್ಕೇರಿ
- ಬೆಳಗಾವಿ -ಸತೀಶ್ ಜಾರಕಿಹೊಳಿ
- ಗದಗ- ಎಚ್.ಕೆ.ಪಾಟೀಲ್
- ಕಾರವಾರ-ಆರ್.ವಿ.ದೇಶಪಾಂಡೆ
- ಮಂಗಳೂರು- ರಮಾನಾಥ ರೈ
- ಬಳ್ಳಾರಿ- ಮರಮೇಶ್ವರ್ ನಾಯಕ್
- ಹಾಸನ - ಎ.ಮಂಜು
- ಬೆಂಗಳೂರು ನಗರ- ರಾಮಲಿಂಗಾರೆಡ್ಡಿ
- ಬೆಂಗಳೂರು ನಗರ- ಕೆ.ಜೆ.ಜಾರ್ಜ್
- ಬೆಂಗಳೂರು ನಗರ- ಕೃಷ್ಣ ಭೈರೆಗೌಡ, ದಿನೇಶ್ ಗುಂಡೂರಾವ್(ಇನ್ನು ಅಂತಿಮವಾಗಿಲ್ಲ)
- ಮೈಸೂರು- ಎಚ್.ಸಿ.ಮಹಾದೇವಪ್ಪ
- ಮೈಸೂರು- ಶ್ರೀನಿವಾಸ್ ಪ್ರಸಾದ್
- ಚಾಮರಾಜನಗರ- ಮಹದೇವ ಪ್ರಸಾದ್
- ಬೀದರ್ - ರಾಜಶೇಖರ್ ಪಾಟೀಲ್
- ರಾಯಚೂರು- ಎ.ವೆಂಕಟೇಶ್ ನಾಯಕ್
- ಯಾದಗಿರಿ - ಬಾಬುರಾವ್ ಚಿಂಚನಸೂರ್
- ಗುಲ್ಬರ್ಗಾ- ಖಮರುಲ್ ಇಸ್ಲಾಂ
- ಗುಲ್ಬಾರ್ಗ-ಶರಣಪ್ರಕಾಶ್ ಪಾಟೀಲ್
- ಚಿತ್ರದುರ್ಗ- ಆಂಜನೆಯ
- ದಾವಣಗೆರೆ - ಶಾಮನೂರು ಶಿವಶಂಕರಪ್ಪ
- ಬಾಗಲಕೋಟೆ- ಉಮಾಶ್ರೀ
- ಬಿಜಾಪುರ- ಎಂ.ಬಿ.ಪಾಟೀಲ್
- ತುಮಕೂರು- ಟಿ.ಬಿ.ಜಯಚಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


