ಈಗಿನ ಸುದ್ದಿ

ಜೈಪುರದಲ್ಲಿ 5 ವಿಕಲಚೇತನರ ಮೇಲೆ ಅತ್ಯಾಚಾರ

Published On :

ಜೈಪುರ:  ಇಲ್ಲಿನ ಕನೋಟಾ ಎಂಬಲ್ಲಿ ಎನ್‌ಜಿಒ ನಡೆಸುತ್ತಿರುವ ವಸತಿ ಶಾಲೆಯೊಂದರಲ್ಲಿ ಐವರು ಮೂಕ ಹೆಣ್ಮಕ್ಕಳನ್ನು ಅತ್ಯಾಚಾರಗೈದು ಥಳಿಸಿದ ಘಟನೆ ವರದಿಯಾಗಿದೆ.

ಆವಾಜ್ ಫೌಂಡೇಷನ್ ಎಂಬ ಎನ್‌ಜಿಒ ನಡೆಸುತ್ತಿರುವ ವಸತಿಶಾಲೆಯಲ್ಲಿ ಈ ಘಟನೆ ನಡೆದಿದ್ದು, ಪ್ರಸ್ತುತ ಪ್ರಕರಣದಲ್ಲಿ ಎನ್‌ಜಿ ನಿರ್ದೇಶಕರು ಸೇರಿದಂತೆ ನಾಲ್ಕು ಜನರನ್ನು ಡಿಸಿಪಿ (ಪೂರ್ವ) ಶ್ವೇತಾ ಧಂಕಾರ್ ಶುಕ್ರವಾರ ಬಂಧಿಸಿದ್ದಾರೆ.

15ರಿಂದ 17ರೊಳಗೆ ವಯಸ್ಸಿ ಹುಡುಗಿಯರು ಈ ವಸತಿಶಾಲೆಯಲ್ಲಿ ಕಲಿಯುತ್ತಿದ್ದು, ಅಲ್ಲಿನ ನೌಕರರಾದ ಅಶೋಕ್ ಮತ್ತು ಸುರೇಶ್ ಎಂಬವರು ಈ ಹುಡುಗಿಯರನ್ನು ಕೆಲವು ಕಾಲದಿಂದ ಲೈಂಗಿಕ ದೌರ್ಜನ್ಯಕ್ಕೊಳಪಡಿಸುತ್ತಿದ್ದರು ಎನ್ನಲಾಗುತ್ತಿದೆ. ಈ ಹುಡುಗಿಯರನ್ನು ಅತ್ಯಾಚಾರಕ್ಕೊಳಪಡಿಸಿದ ನಂತರ ಚೆನ್ನಾಗಿ ಥಳಿಸಲಾಗಿದೆ. ಈ ಬಗ್ಗೆ ಎನ್‌ಜಿಒ ಅಧಿಕಾರಗಿಳಿಗೆ ದೂರು ನೀಡಲು ಹೋದರು, ಅವರು ಈ ಹುಡುಗಿಯರ ದೂರು ಕೇಳಿಲ್ಲ ಎಂದು ಶ್ವೇತಾ ಹೇಳಿದ್ದಾರೆ.

ಈ ಹುಡುಗಿಯರು ರಾಜ್ಯ ಸರ್ಕಾರ ನಡೆಸುತ್ತಿರುವ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದು, ಅಲ್ಲಿ ಈ ಹುಡುಗಿಯರು ತಮ್ಮ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾರೆ.

ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಜಿಒ ನಡೆಸುತ್ತಿರುವ ಅಲ್ಪನಾ ಶರ್ಮಾ, ನೌಕರರಾದ ಗೀತಾ, ಸುರೇಶ್ ಮತ್ತು ಅಶೋಕ್‌ರನ್ನು ಇದೀಗ ಬಂಧಿಸಲಾಗಿದೆ.  ಏತನ್ಮಧ್ಯೆ, ಇನ್ನೂ ಕೆಲವರ ಬಂಧನ ಸಾಧ್ಯತೆ ಇದೆ ಎಂದು ಡಿಸಿಪಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.