ಈಗಿನ ಸುದ್ದಿ

ಸ್ಪಾಟ್ ಫಿಕ್ಸಿಂಗ್ ಪ್ರಕರಣ: ಬಂಧಿತ ಆಟಗಾರರ ವಿರುದ್ಧ ತನಿಖೆಗೆ ಮುಂದಾದ ಬಿಸಿಸಿಐ

ಸ್ಪಾಟ್ ಫಿಕ್ಸಿಂಗ್ ಪ್ರಕರಣ: ಬಂಧಿತ ಆಟಗಾರರ ವಿರುದ್ಧ ತನಿಖೆಗೆ ಮುಂದಾದ ಬಿಸಿಸಿಐ
Published On :

ಚೆನ್ನೈ: ಐಪಿಎಲ್‌ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಭಾನುವಾರ ಚೆನ್ನೈನಲ್ಲಿ ತುರ್ತು ಸಭೆ ನಡೆಸಿದ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆಗೆ ಆದೇಶಿಸಿದ್ದು, ಆರೋಪ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಬಿಸಿಸಿಐನ ಅಧ್ಯಕ್ಷ ಶ್ರೀನಿವಾಸನ್ ಹೇಳಿದ್ದಾರೆ.

ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಶ್ರೀನಿವಾಸನ್, ಪ್ರಕರಣದ ಬಗ್ಗೆ ಸೂಕ್ತ ತನಿಖೆಗೆ ಆದೇಶಿಸಲಾಗಿದ್ದು, ಆರೋಪ ಸಾಬೀತಾದರೆ ಆಟಗಾರರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಪ್ರಕರಣ ಸಂಬಂಧ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳ ತನ್ನ ಮಿತಿ ಹೊಂದಿದ್ದು, ಅದನ್ನು ಮೀರಿ ಕೆಲಸ ಮಾಡಲು ನಿಗ್ರಹ ದಳಕ್ಕೆ ಸಾಧ್ಯವಿಲ್ಲ. ಹೀಗಾಗಿ ಸ್ಪಾಟ್ ಫಿಕ್ಸಿಂಗ್ ನಡೆಸಿದ ಬುಕ್ಕಿಗಳ ವಿರುದ್ದ ಬಿಸಿಸಿಐ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದರು.  

ಬಿಸಿಸಿಐ ಆಂತರಿಕ ತನಿಖೆಗೆ ಮುಂದಾಗಿದ್ದು, ಪ್ರಕರಣದ ತನಿಖೆ ನಡೆಸಲು ಪೊಲೀಸ್ ತನಿಖೆಯ ವರದಿಯ ಅವಶ್ಯಕತೆ ಇರುವುದರಿಂದ. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಆಯುಕ್ತರಿಗೆ ಪ್ರಕರಣದ ಸಂಪೂರ್ಣ ತನಿಖಾ ವರದಿ ನೀಡುವಂತೆ ಮನವಿ ಮಾಡಲಾಗಿದೆ ಎಂದು ಶ್ರೀನಿವಾಸನ್ ಹೇಳಿದ್ದಾರೆ.

ಪ್ರಕರಣದ ಸೂಕ್ತ ತನಿಖೆ ನಡೆದು ತಪ್ಪು ಸಾಬೀತಾದ ನಂತರವಷ್ಟೇ ಆಟಗಾರರ ಮೇಲೆ ಅಜೀವ ನಿಷೇದ ಹೇರುವ ಸಾಧ್ಯತೇ ಇದೆ. ಆದ್ದರಿಂದ ಸೂಕ್ತ ತನಿಖೆ ನಡೆಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಆದೇಶಿಸಲಾಗಿದ್ದು, ತನಿಖೆ ನಡೆದು ಆರೋಪ ಸಾಭೀತಾದ ನಂತರವಷ್ಟೇ ಆಟಗಾರರ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಟಗಾರರು ಮಾಡಿದ ತಪ್ಪಿಗೆ ಮಾಲೀಕರೇನು ಮಾಡುತ್ತಾರೆ, ಹೀಗಾಗಿ ಆರೋಪ ಸಾಬೀತಾಗುವವರೆಗೂ ಎಲ್ಲರು ಮುಗ್ಧರೇ ಎಂದು ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್ ಆರನೇ ಆವೃತ್ತಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣಗಳೆ ಹೆಚ್ಚು ಸುದ್ದಿಯಾಗಿದ್ದು, ಭಾರತದಲ್ಲಿ ಸ್ಪಾಟ್ ಫಿಕ್ಸಿಂಗ್ ಭೂತವನ್ನು ಸಂಪೂರ್ಣವಾಗಿ ತೊಡೆದು ಹಾಕಲು ನಿರ್ಧರಿಸಿರುವ ಬಿಸಿಸಿಐ ಇಂದು ತುರ್ತು ಸಭೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಂಡಿದೆ.

ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವ ಆಟಗಾರರಾದ ರಾಜಸ್ಥಾನ ರಾಯಲ್ಸ್ ತಂಡದ ಶ್ರೀಶಾಂತ್, ಅಜಿತ್ ಚಾಂಡೀಲಾ ಹಾಗೂ ಅಂಕಿತ್ ಚೌವ್ಹಣ್ ವಿರುದ್ಧ ದೂರು ದಾಖಲಿಸಲು ಬಿಸಿಸಿಐಗೆ ಸಾಧ್ಯವಿಲ್ಲ. ಹೀಗಾಗಿ ತಂಡದ ಮಾಲೀಕರೆ ಆಟಗಾರರ ವಿರುದ್ದ ದೂರು ನೀಡಬೇಕಿದೆ ಎಂದರು.

ಆಟಗಾರರ ವಿರುದ್ದ ದೂರು ನೀಡಲು ಸಿದ್ಧ  
ಪ್ರರಣಕ್ಕೆ ಸಂಬಂಧಿಸಿದಂತೆ, ಸಭೆಯಲ್ಲಿ ರಾಜಸ್ಥಾನ ರಾಯಲ್ಸ್ ಆಡಳಿತ ಮಂಡಳಿ ಭಾಗವಹಿಸಿದ್ದು, ತಮ್ಮ ತಂಡದವರಾದ ಶ್ರೀಶಾಂತ್, ಅಜಿತ್ ಚಾಂಡೀಲಾ ಹಾಗೂ ಅಂಕಿತ್ ಚೌವ್ಹಣ್ ವಿರುದ್ದ ಐಪಿಎಲ್ ನಿರ್ವಾಹಕ ಮಂಡಳಿಗೆ ದೂರು ನೀಡುತ್ತೇವೆ ಎಂದು ರಾಜಸ್ಥಾನ ರಾಯಲ್ಸ್‌ನ ಸಿಇಒ ರಘು ಅಯ್ಯರ್ ಹೇಳಿದ್ದಾರೆ. ಆಟಗಾರರ ಹರಾಜು ಸಮಯದಲ್ಲಿ ಆಟಗಾರರಿಗೆ ಇಂತಿಷ್ಟು ಮೊತ್ತವನ್ನು ನೀಡಿ ಖರೀದಿಸಲಾಗಿರುತ್ತದೆ. ಅದೇ ವೇಳೆ ಆಟಗಾರರು ಸಂಸ್ಥೆಯ ಕೆಲವೊಂದು ಒಪ್ಪಂದಗಳಿಗೆ ಒಳಪಟ್ಟಿರಬೇಕಾಗಿರುತ್ತದೆ. ಅಂತಹ ಒಪ್ಪಂದಗಳನ್ನು ಈ ಮೂರು ಆಟಗಾರರು ಮುರಿದಿರುವುದರಿಂದ ಮಂಡಳಿ ಇವರುಗಳ ವಿರುದ್ದ ದೂರು ನೀಡಲು ಮುಂದಾಗಿದೆ ಎಂದು ರಘು ಅಯ್ಯರ್ ಹೇಳಿದ್ದಾರೆ.

ಪ್ರತಿ ತಂಡಗಳು ವಿಚಕ್ಷಣ ದಳ ಹೊಂದಬೇಕು
ಸ್ಪಾಟ್ ಫಿಕ್ಸಿಂಗ್‌ನಂತಹ ಪ್ರಕರಣಗಳನ್ನು ತಡೆಗಟ್ಟಬೇಕಾದರೆ ಐಪಿಎಲ್‌ನ ಎಲ್ಲಾ ತಂಡಗಳು ವಿಚಕ್ಷಣ ದಳ ಹೊಂದಬೇಕಾಗಿದ್ದು. ಆಟಗಾರರ ಮೇಲೆ ನಿಗಾವಹಿಸುವ ಅಗತ್ಯ ಇದೆ.
ಹಾಗು ಪಾರ್ಟಿಗಳಲ್ಲಿ ಆಟಗಾರರು ಪಾಲ್ಗೊಳ್ಳುವ ಸಂದರ್ಭಗಳಲ್ಲಿ ಅವರ ನಡುವಳಿಕೆಯ ಮೇಲೆ ನಿಗಾ ಇಟ್ಟಾಗ ಮಾತ್ರ ಇಂತಹ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.