ಆರುಷಿ ಕೊಲೆ ದಿನದಂದು ನಿದ್ರೆಗೆ ಜಾರಿದ್ದೆ: ರಾಜೇಶ್ ತಲ್ವಾರ್
ಗಾಜಿಯಾಬಾದ್: ಆರುಷಿ ಮತ್ತು ಹೇಮರಾಜ್ ಕೊಲೆಯಾದ ದಿನದಂದು ತಾನು ನಿದ್ರೆಗೆ ಜಾರಿದ್ದೆ ಎಂದು ಆರುಷಿ ತಂದೆ ಹಾಗೂ ಪ್ರಕರಣದ ಆರೋಪಿ ದಂತ ವೈದ್ಯ ರಾಜೇಶ್ ತಲ್ವಾರ್ ಅವರು ಸೋಮವಾರ ನ್ಯಾಯಾಲಯದಲ್ಲಿ ಹೇಳಿದ್ದಾರೆ.
ಆರುಷಿ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು. ಇಂದು ನ್ಯಾಯಾಲಯದ ಮೊರೆ ಹೋಗಿರುವ ರಾಜೇಶ್ ತಲ್ವಾರ್, ಮಗಳು ಆರುಷಿ ಮತ್ತು ಮನೆಕೆಲಸದವನಾದ ಹೇಮಾರಜ್ ಕೊಲೆ ನಡೆದ ಸಂದರ್ಭದಲ್ಲಿ ತಾವು ನಿದ್ರೆಗೆ ಜಾರಿದ್ದೆವು. ಸಿಬಿಐ ಸಂಗ್ರಹಿಸಿರುವ ಸಾಕ್ಷಿಗಳಲ್ಲಿ ಲೋಪವಿರಬಹುದು ಎಂದು ಹೇಳಿದ್ದಾರೆ.
ಇಂದು ವಿಶೇಷ ಸಿಬಿಐ ನ್ಯಾಯಾಧೀಶರು ರಾಜೇಶ್ ತಲ್ವಾರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಸುಮಾರು 200 ಪ್ರಶ್ನೆಗಳನ್ನು ರಾಜೇಶ್ ತಲ್ವಾರ್ಗೆ ನ್ಯಾಯಾಧೀಶರು ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆರುಷಿ ಹತ್ಯೆ ನಡೆದ ಸಮಯದಲ್ಲಿ ತಲ್ವಾರ್ ಎಚ್ಚರವಾಗಿದ್ದರು. ಇದ್ದಕ್ಕೆ ಸಾಕ್ಷಿ ತಲ್ವಾರ್ ಅವರು ಹತ್ಯೆ ನಡೆದ ರಾತ್ರಿ ಅಂತರ್ಜಾಲ ಬಳಸಿರುವುದು ಎಂದಿರುವ ಸಿಬಿಐ ಪೊಲೀಸರು, ದಾಖಲೆಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಇದಕ್ಕೆ ಪ್ರತಿಕ್ರಯಿಸಿರುವ ರಾಜೇಶ್ ತಲ್ವಾರ್ ಅದು ಸುಳ್ಳು ಎಂದು ವಾದಿಸಿದ್ದಾರೆ.
14 ವರ್ಷದ ಬಾಲಕಿ ಆರುಷಿ 2008ರಲ್ಲಿ ನೋಯ್ಡಾದಲ್ಲಿರುವ ತನ್ನ ಮನೆಯಲ್ಲಿನ ಮಲಗುವ ಕೊಠಡಿಯಲ್ಲಿ ಹತ್ಯೆಯಾಗಿದ್ದಳು. ಒಂದು ದಿನದ ನಂತರ ಮನೆ ಕೆಲಸಗಾರ ಹೇಮರಾಜ್ ಶವ ಕೂಡ ಮನೆಯ ಮಹಡಿ ಮೇಲೆ ಪತ್ತೆಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

