ಬಿಎಸ್ಪಿ ಮಾಜಿ ಸಚಿವರ ವಿರುದ್ಧ ಎಫ್ಐಆರ್ ದಾಖಲೆಗೆ ಶಿಫಾರಸ್ಸು
ಲಕ್ನೋ: ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಸರ್ಕಾರದಲ್ಲಿದ್ದ ಸಚಿವರು, ದಲಿತ ಸ್ಮಾರಕ ನಿರ್ಮಾಣ ಸಂದರ್ಭದಲ್ಲಿ ಹಣ ಲೂಟಿ ಮಾಡಿದ್ದು, ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಉತ್ತರಪ್ರದೇಶದ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್ಕೆ ಮೆಹ್ರೋತ್ರಾ ಶಿಫಾರಸು ಮಾಡಿದ್ದಾರೆ.
ಮಾಯಾವತಿ ಸರ್ಕಾರದಲ್ಲಿದ್ದ ಇಬ್ಬರು ಸಚಿವರು ದಲಿತ ಸ್ಮಾರಕ ನಿರ್ಮಾಣಕ್ಕೆ ಬಿಡುಗಡೆ ಮಾಡಿದ್ದ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಹೇಳಿರುವ ಲೋಕಾಯುಕ್ತರು, 1,410 ಕೋಟಿ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಮಾಜಿ ಬಿಎಸ್ಪಿ ಸಚಿವರಾದ ನಸೀಮುದ್ದಿನ್ ಸಿದ್ದಿಖ್ ಮತ್ತು ಬಾಬು ಸಿಂಗ್ ಖುಶ್ವಾ, ಶಾಸಕರಾದ ಶಾರದ ಪ್ರಸಾದ್, ಅನಿಲ್ ಕುಮಾರ್ ಮೌರ್ಯ, ರಮೇಶ್ ಚಂದ್ರ ದುಬೆ ಸೇರಿದಂತೆ ವಿವಿಧ ಇಲಾಖೆಯ 199 ಅಧಿಕಾರಿಗಳು ಈ ಯೋಜನೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಲಿತ ಸ್ಮಾರಕ ನಿರ್ಮಾಣ ಯೋಜನೆಯಲ್ಲಿ ನಡೆದಂತ ಹಗರಣದ ಬಗ್ಗೆ ಸೋಮವಾರ ಲೋಕಾಯುಕ್ತರು 88 ಪುಟಗಳ ವರದಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ಸಲ್ಲಿಸಿದ್ದಾರೆ.
ದಲಿತ ಸ್ಮಾರಕ ನಿರ್ಮಾಣಕ್ಕಾಗಿ ಸರ್ಕಾರದಿಂದ 4,148 ಕೋಟಿ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ಶೇ 34 ರಷ್ಟು ಅಂದರೆ 1,140 ಕೋಟಿ ಹಣ ಸಚಿವರು ಹಾಗೂ ಅಧಿಕಾರಿಗಳ ಜೇಬಿಗೆ ಹೋಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಮಾಯಾವತಿ ಅಧಿಕಾರವಧಿಯಲ್ಲಿ ಸಿದ್ದಿಖ್ ಅವರು ಲೋಕಪಯೋಗಿ ಸಚಿವ ಹಾಗೂ ಖುಶ್ವಾ ಗಣಿ ಇಲಾಖಾ ಸಚಿವರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

