ಈಗಿನ ಸುದ್ದಿ

2ಜಿ, ಕಲ್ಲಿದ್ದಲು ಹಗರಣದ ವರದಿ ಸೋರಿಕೆ: ಸಿಎಜಿ ವಜಾ

Published On :

ನವದೆಹಲಿ: 2ಜಿ ಮತ್ತು ಕಲ್ಲಿದ್ದಲು ಹಂಚಿಕೆಯಲ್ಲಿ ನಡೆದ ಹಗರಣದ ಬಗ್ಗೆ ಮಹಾಲೇಖಪಾಲರು(ಸಿಎಜಿ) ನಡೆಸಿರುವ ಲೆಕ್ಕಪರಿಶೋಧನ ವರದಿ ಸೋರಿಕೆಯಾದ ಹಿನ್ನಲೆಯಲ್ಲಿ ಭಾರತದ ಮಹಾಲೇಖಪಾಲರಾಗಿದ್ದ ವಿನೋದ ರೈ ಅವರನ್ನು ಕೆಲಸದಿಂದ ಮಂಗಳವಾರ ವಜಾಗೊಳಿಸಲಾಗಿದೆ.

ಲೆಕ್ಕಪರಿಶೋಧನ ಮಾಹಿತಿ ಸೋರಿಕೆಯಲ್ಲಿ ವಿನೋದ್ ರೈ ಅವರ ಕೈವಾಡವಿದೆ ಎಂದು ಅವರನ್ನು ಕೆಲಸದಿಂದ ವಜಾಗೊಳಿಸಿರುವುದಕ್ಕೆ ರೈ ಅವರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಯಿಸಿರುವ ವಿನೋದ್ ರೈ, ಆರ್ಟಿಐ ಅಡಿ ಮಾಹಿತಿ ನೀಡಿ ಎಂದು ಅರ್ಜಿ ಸಲ್ಲಿಸಿದಾಗ ಅದಕ್ಕೆ ಪ್ರತಿಕ್ರಯಿಸಿದರೆ ಅದು ಮಾಹಿತಿ ಸೋರಿಕೆ ಮಾಡಿದಂತಲ್ಲ ಎಂದು ಹೇಳಿದ್ದಾರೆ.

ಲೆಕ್ಕಪರಿಶೋಧನ ಪ್ರಕ್ರಿಯೆ ಬಗ್ಗೆ ಆರ್ಟಿಐ ಅಡಿ ಮಾಹಿತಿ ನೀಡಿ ಎಂದು ಅರ್ಜಿ ಸಲ್ಲಿಸಿದರೆ ಅದಕ್ಕೆ ಪ್ರತಿಕ್ರಯಿಸುವಂತೆ ಕೇಂದ್ರ ಮಾಹಿತಿ ಆಯೋಗ ಸೂಚಿಸಿದೆ. ಆದ್ದರಿಂದ ಇಲ್ಲಿ ವರದಿ ಸೋರಿಕೆ ಮಾಡಿದಂತಲ್ಲ, ಮಾಹಿತಿ ನೀಡಿದಂತೆ ಎಂದು ರೈ ತಿಳಿಸಿದ್ದಾರೆ.

ಸಂಸತ್ತಿನಲ್ಲಿ ವರದಿ ಮಂಡನೆಯಾಗುವವರೆಗೆ ಬೇರೆ ಯಾರು ಈ ವರದಿ ನೋಡುವಂತಿಲ್ಲ. ಈ ಸಂಬಂಧ ಪ್ರಧಾನಮಂತ್ರಿ ಅವರಿಗೆ ಪತ್ರ ಬರೆಯಲಾಗಿತ್ತು ಎಂದು ಹೇಳಿರುವ ವಿನೋದ್ ರೈ, ತಾವು ಕರ್ತವ್ಯ ಉಲ್ಲಂಘನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆರ್ಟಿಐ ಅಡಿ ಮಾಹಿತಿ ನೀಡುವುದಕ್ಕೂ ಮುನ್ನ, ಹಣಕಾಸು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಹಾಗೂ ಲೋಕಸಭಾ ಸ್ಪೀಕರ್ ಅವರೊಡನೆ ಚರ್ಚಿಸಲಾಗಿದೆ. ಮಾಹಿತಿ ನೀಡುವುದರಲ್ಲಿ ಕರ್ತವ್ಯ ಉಲ್ಲಂಘನೆ ಆಗುವುದಿಲ್ಲ ಎಂದು ಸಚಿವರು ಹೇಳಿದ್ದರಿಂದ ಆರ್ಟಿಐ ಅಡಿ ಮಾಹಿತಿ ನೀಡಿದ್ದೇವೆ ಎಂದು ವಿನೋದ್ ರೈ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.