ಐಪಿಎಲ್ನಿಂದ ಪುಣೆ ವಾರಿಯರ್ಸ್ ಹೊರಕ್ಕೆ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಿಂದ ಸಹರ ಒಡೆತನದ ಪುಣೆ ವಾರಿಯರ್ಸ್ ಮಂಗಳವಾರ ಹೊರ ಹೋಗಿದ್ದಾರೆ.
ಪ್ರಸ್ತುತ ವರ್ಷದಲ್ಲಿ ಫ್ರಾಂಚೈಸಿಗಳ ಶುಲ್ಕ ಪಾವತಿಸುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ಪುಣೆ ವಾರಿಯರ್ಸ್ ಐಪಿಎಲ್ನಿಂದ ಹಿಂದೆ ಸರಿದಿದೆ.
ಪುಣೆ ವಾರಿಯರ್ಸ್ ಫ್ರಾಂಚೈಸಿಗಳ ಶುಲ್ಕವನ್ನು ಬ್ಯಾಂಕ್ನಲ್ಲಿ ಹೂಡಿಕೆ ಮಾಡಲು ವಿಫಲವಾಗಿದೆ. ಪ್ರಸಕ್ತ ವರ್ಷದಲ್ಲಿ ಶೇ.20ರಷ್ಟು ಅಂದರೆ 170ಕೋಟಿಯಷ್ಟು ಮಾತ್ರ ಹೂಡಿಕೆ ಮಾಡಿದ್ದು, ಇನ್ನುಳಿದ ಮೊತ್ತವನ್ನು ಪಾವತಿಸುವಂತೆ ಬಿಸಿಸಿಐ ಮೇ 19ರವರೆಗೆ ಕಾಲವಕಾಶ ನೀಡಿತ್ತು.
ಪುಣೆ ಐಪಿಎಲ್ನಲ್ಲಿ ಲೀಗ್ನಲ್ಲಿ ಭಾಗವಹಿಸಲು 10 ವರ್ಷಗಳ ಗುತ್ತಿಗೆಯಲ್ಲಿ 1702 ಕೋಟಿ ಹಣ ಪಾವತಿಸಬೇಕು. ಆದರೆ ಪುಣೆ ವಾರಿಯರ್ಸ್ ಪ್ರಸಕ್ತ ವರ್ಷ ಸಲ್ಲಿಸಬೇಕಾದ ಶುಲ್ಕವನ್ನು ಸಲ್ಲಿಸದಿರುವುದರಿಂದ ಲೀಗ್ನಿಂದ ಹಿಂದೆ ಸರಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


