ಈಗಿನ ಸುದ್ದಿ

ಸಿಎಸ್‌ಕೆ ಮಾಲೀಕರ ಸಂಬಂಧಿ ಜತೆ ಸಂಪರ್ಕವಿತ್ತು: ವಿಂದು

ಸಿಎಸ್‌ಕೆ ಮಾಲೀಕರ ಸಂಬಂಧಿ ಜತೆ ಸಂಪರ್ಕವಿತ್ತು: ವಿಂದು
Published On :

ನವದೆಹಲಿ: ಐಪಿಎಲ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಬಂಧನಕ್ಕೊಳಗಾಗಿರುವ ಬಾಲಿವುಡ್ ನಟ ವಿಂದು ದಾರಾ ಸಿಂಗ್, ತನಗೆ ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕರ ಸಂಬಂಧಿಯೊಂದಿಗೆ ಸಂಪರ್ಕವಿತ್ತು ಎಂಬ ವಿಷಯವನ್ನು ಬುಧವಾರ ಒಪ್ಪಿಕೊಂಡಿದ್ದಾರೆ.

ಸಿಎಸ್‌ಕೆ ಮಾಲೀಕರ ಸಂಬಂಧಿಗೆ ವಿಂದು ಹಲವಾರು ಕರೆಗಳನ್ನು ಮಾಡಿದ್ದರ ಬಗ್ಗೆಯೂ ಅವರು ಒಪ್ಪಿಕೊಂಡಿದ್ದಾರೆ.

ಐಪಿಎಲ್ ಪಂದ್ಯಗಳ ವೇಳೆ ಸಿಎಸ್‌ಕೆ ವಿಐಪಿ ಬಾಕ್ಸ್‌ನಲ್ಲಿ ವಿಂದು ಕಾಣಿಸಿಕೊಂಡಿದ್ದು, ಸಿಎಸ್‌ಕೆ ಟೀಂ ಜತೆ ವಿಂದು ಹೇಗೆ ಆಪ್ತರಾದರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ಬಾಲಿವುಡ್ ನಟ ದಿವಂಗತ ದಾರಾ ಸಿಂಗ್‌ರ ಪುತ್ರನಾದ ವಿಂದು ದಾರಾ ಸಿಂಗ್ ಅವರನ್ನು ಮಂಗಳವಾರ ಬಂಧಿಸಲಾಗಿತ್ತು.

49ರ ಹರೆಯದ ವಿಂದು ರಿಯಾಲಿಟಿ ಶೋ ಬಿಗ್‌ಬಾಸ್ -3ಯ ವಿಜೇತರಾಗಿದ್ದು, ಹಲವಾರು ಬಾರಿ ಐಪಿಎಲ್ ಪಂದ್ಯ ವೀಕ್ಷಿಸಲು ಆಗಮಿಸಿದ್ದರು. ಇದು ಮಾತ್ರವ
ಲ್ಲದೆ ಪಂದ್ಯ ಮುಗಿದ ನಂತರ ನಡೆಯುವ ಪಾರ್ಟಿಗಳಲ್ಲೂ ವಿಂದು ಕಾಣಿಸಿಕೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.