ಸಿಎಜಿಯಾಗಿ ಶಶಿಕಾಂತ್ ಶರ್ಮಾ ಪ್ರಮಾಣವಚನ
ನವದೆಹಲಿ: ಶಶಿಕಾಂತ್ ಶರ್ಮಾ ಅವರು ನೂತನ ಮಹಾಲೇಖಪಾಲ(ಸಿಎಜಿ)ರಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಶಶಿಕಾಂತ್ ಶರ್ಮಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಬಿಹಾರ್ ಮೂಲದ ಐಎಎಸ್ ಅಧಿಕಾರಿಯಾಗಿದ್ದ 61 ವರ್ಷದ ಶಶಿಕಾಂತ್ ಶರ್ಮಾ ಅವರು ಭಾರತದ ಮಹಲೇಖಪಾಲರಾಗಿದ್ದಾರೆ.
ಶಶಿಕಾಂತ್ ಅವರ ಅಧಿಕಾರವಧಿ ಇಂದಿನಿಂದ ಸೆಪ್ಟೆಂಬರ್ 24, 2017ರವರೆಗೆ ಮುಂದುವರೆಯಲಿದೆ ಎಂದು ಅಧಿಕೃತ ಪ್ರಕಟನೆ ತಿಳಿಸಿದೆ.
2ಜಿ ಮತ್ತು ಕಲ್ಲಿದ್ದಲು ಹಂಚಿಕೆಯಲ್ಲಿ ನಡೆದ ಹಗರಣದ ಬಗ್ಗೆ ಮಹಾಲೇಖಪಾಲರು (ಸಿಎಜಿ) ನಡೆಸಿರುವ ಲೆಕ್ಕಪರಿಶೋಧನ ವರದಿ ಸೋರಿಕೆಯಾದ ಹಿನ್ನಲೆಯಲ್ಲಿ ಭಾರತದ ಮಹಾಲೇಖಪಾಲರಾಗಿದ್ದ ವಿನೋದ ರೈ ಅವರನ್ನು ಕೆಲಸದಿಂದ ಮಂಗಳವಾರ ವಜಾಗೊಳಿಸಲಾಗಿತ್ತು.
ಆರ್ಟಿಐ ಅಡಿ ಮಾಹಿತಿ ನೀಡುವುದಕ್ಕೂ ಮುನ್ನ, ಹಣಕಾಸು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಹಾಗೂ ಲೋಕಸಭಾ ಸ್ಪೀಕರ್ ಅವರೊಡನೆ ಚರ್ಚಿಸಲಾಗಿದೆ. ಮಾಹಿತಿ ನೀಡುವುದರಲ್ಲಿ ಕರ್ತವ್ಯ ಉಲ್ಲಂಘನೆ ಆಗುವುದಿಲ್ಲ ಎಂದು ಸಚಿವರು ಹೇಳಿದ್ದರಿಂದ ಆರ್ಟಿಐ ಅಡಿ ಮಾಹಿತಿ ನೀಡಿದ್ದೇವೆ ಎಂದು ಮಾಜಿ ಸಿಎಜಿ ವಿನೋದ್ ರೈ ಎಂದು ಸ್ಫಷ್ಟನೆ ನೀಡಿದ್ದರು.
ಇದರ ನಡುವೆಯೂ ನೂತನ ಮಹಾಲೇಖಪಾಲರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದ್ದು, ಶಶಿಕಾಂತ್ 2ಜಿ ಹಗರಣ ಸಂಬಂಧ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

