ಜನಪ್ರತಿನಿಧಿಗಳ ನಡೆ ಬಗ್ಗೆ ಪ್ರಣಬ್ ಖೇದ
ಶಿಮ್ಲಾ: ಜನಪ್ರತಿನಿಧಿಗಳು ಜನರಲ್ಲಿ ಮತ ಯಾಚನೆ ಮಾಡಿ, ಗೆದ್ದು ಬಂದ ನಂತರ ಲೋಕಸಭೆಯಲ್ಲಿ ನಡೆಯುವ ಕಲಾಪಗಳಿಗೆ ಪದೇ ಪದೇ ಅಡ್ಡಿ ಪಡಿಸುತ್ತಿರುವ ಬಗ್ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಖೇದ ವ್ಯಕ್ತ ಪಡಿಸಿದ್ದಾರೆ.
ಶಾಸಕರು ಅಥವಾ ಸಂಸದರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವುದನ್ನು ನಾನು ಸಹಿಸುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯಗಳು ಬಂದೇ ಬರುತ್ತವೆ.
ಸಂಸದೀಯ ವ್ಯವಸ್ಥೆಯಲ್ಲಿ ಬಹುಮತವುಳ್ಳವರು ಅಧಿಕಾರ ಚಲಾಯಿಸುತ್ತಾರೆ, ಇಲ್ಲದೇ ಇದ್ದವರು ಅದನ್ನು ವಿರೋಧಿಸುತ್ತಾರೆ.
ಆದರೆ ವಿರೋಧಾಭಿಪ್ರಾಯಗಳನ್ನು ಮಂಡಿಸುವುದಕ್ಕೆ ಅದರದ್ದೇ ಆದ ಚೌಕಟ್ಟಿದೆ, ನಿಯಮಗಳಿವೆ. ಜನಪ್ರತಿನಿಧಿಗಳು ಇದಕ್ಕೆ ಬದ್ಧರಾಗಿರಬೇಕು.
ಹಿಮಾಚಲ ಪ್ರದೇಶದ ವಿಧಾನ ಸಭೆಯ ಸುವರ್ಣ ಮಹೋತ್ಸವ ಆಚರಣೆಯ ವೇಳೆ ಮಾತನಾಡಿದ ಪ್ರಣಬ್, ರಾಜಕೀಯ ಪಕ್ಷಗಳು ಸಂಸತ್ತಿನ ಮೂರು D-debate, (ವಾದ ಮಂಡಿಸು), discuss (ಚರ್ಚಿಸು) ಮತ್ತು dissent(ನಿರಾಕರಿಸು) - ಇದನ್ನು ಗೌರವಿಸಬೇಕು. ಇಲ್ಲಿ ನಾಲ್ಕನೇ D-disrupt.' (ತಡೆಯೊಡ್ಡು) ಸಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

