ಭಾರತ-ಚೀನಾ ವಿವಾದ ಇತ್ಯರ್ಥಕ್ಕೆ ಪವಾಡ ನಡೆಯಬೇಕಿಲ್ಲ: ಆಂಟನಿ

ಎಜ್ಜಿಮಲ: ಭಾರತ-ಚೀನಾ ನಡುವಿನ ವಿವಾದವನ್ನು ಬಗೆಹರಿಸಲು ಉಭಯ ರಾಷ್ಟ್ರಗಳ ನಡುವಣ ಸಹಕಾರದ ಅವಶ್ಯಕತೆ ಇದ್ದು, ಅದಕ್ಕಾಗಿ ಪವಾಡ ನಡೆಯಬೇಕಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ ಹೇಳಿದ್ದಾರೆ.
ಉಭಯ ರಾಷ್ಟ್ರಗಳ ನಡವೆ ಇರುವ ಸಮಸ್ಯೆಗಳು ಒಂದೇ ಬಾರಿಗೆ ಪರಿಹರಿಸಲು ಸಾಧ್ಯವಿಲ್ಲ. ಸಮಸ್ಯೆ ನಿವಾರಣೆಗಾಗಿ ರಾಷ್ಟ್ರಗಳ ನಡುವಣ ಸಹಕಾರ ಅತೀ ಮುಖ್ಯ. ಅದಕ್ಕಾಗಿ ಕಾಲಾವಕಾಶದ ಅವಶ್ಯಕತೆ ಇದೆ. ಸದ್ಯ ಭಾರತ ಹಾಗೂ ಚೀನಾ ನಡುವಣ ಉತ್ತಮ ಬಾಂಧವ್ಯ ವೃದ್ದಿಯಾಗುತ್ತಿದ್ದು, ಕ್ರಮೆಣ ಸಮಸ್ಯೆಗಳು ನಿವಾರಣೆಯಾಗುತ್ತದೆ. ಆ ಸಮಯಕ್ಕಾಗಿ ಕಾಯಬೇಕಿದೆ ಎಂದು ಆಂಟನಿ ಹೇಳಿದ್ದಾರೆ.
ಗಡಿ ವಿವಾದ ಸಂಬಂಧ ಭಾರತ ತೆಗೆದುಕೊಂಡ ದಿಟ್ಟ ನಿರ್ಧಾರ ಹಾಗೂ ಸಾಮರ್ಥ್ಯವನ್ನು ಚೀನಾ ಗಮನಿಸಿದೆ. ಹೀಗಾಗಿ ಮುಂದೆ ಗಡಿ ಸಮಸ್ಯೆಯಂತಹ ಪ್ರಕರಣಗಳು ಉಭಯ ರಾಷ್ಟ್ರಗಳ ನಡುವೆ ತಲೆ ದೋರುವುದಿಲ್ಲ. ದೇಶ ರಕ್ಷಣೆಗಾಗಿ ತನ್ನ ದೇಶದ ಗಡಿಗಳಲ್ಲಿ ಯೋಧರನ್ನು ನಿಯೋಜಿಸುವುದು ಸರ್ವೇ ಸಾಮಾನ್ಯ. ಹೀಗಾಗಿ ಅಭಿವೃದ್ದಿ ಪತದಲ್ಲಿರುವ ಚೀನಾ ಭದ್ರತೆಗಾಗಿ ಗಡಿಯಲ್ಲಿ ಸೇನಾ ನೆಲೆಗಳನ್ನು ಸ್ಥಾಪಿಸಿತ್ತು ಎಂದರು.
ಭಾರತ ಸಹ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರವಾಗಿದ್ದು, ದೇಶದ ಭದ್ರತೆಗಾಗಿ ಗಡಿಗಳಲ್ಲಿ ಯೋಧರನ್ನು ನಿಯೋಜಿಸಿದ್ದು, ಸೇನಾ ನೆಲೆಗಳನ್ನು ಸ್ಥಾಪಿಸಲಾಗಿದೆ. ಎಲ್ಲ ರೀತಿಯ ಸಮಸ್ಯೆಗಳನ್ನು ಎದುರಿಸಲು ನಮ್ಮ ಸೇನಾಪಡೆ, ವಾಯುಪಡೆ ಹಾಗೂ ನೌಕಾಪಡೆಗಳು ಸಮರ್ಥವಾಗಿವೆ ಎಂದು ಆಂಟನಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


