ಶ್ರೀನಿ ಪಟ್ಟು ಇನ್ನೂ ಬಿಗಿ
ನವದೆಹಲಿ/ ಮುಂಬೈ: ಸ್ಪಾಟ್ಫಿಕ್ಸಿಂಗ್ ಸಂಬಂಧ ಅಳಿಯ, ಚೆನ್ನೈ ಸೂಪರ್ಕಿಂಗ್ಸ್ ಮಾಲೀಕ ಗುರುನಾಥ್ ಮೇಯಪ್ಪನ್ ಬಂಧನವಾಗದಿದ್ದರೂ,ಯಾವುದೇ ಕಾರಣಕ್ಕೂನಾನು ಬಿಸಿಸಿಐಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಲ್ಲ ಎಂದುಎನ್. ಶ್ರೀನಿವಾಸನ್ಪಟ್ಟು ಹಿಡಿದಿದ್ದಾರೆ.
ಕಳೆದ ಕೆಲವು ದಿನಗಳಲ್ಲಿನಾನು ಅಪ್ಪಹಾಗು ಮಾವನಸ್ಥಾನದಲ್ಲಿ ನಿಂತು ಹಲವಾರು ಸಂಕಷ್ಟ ಎದುರಿಸಿದ್ದೇನೆಎಂದು ಶ್ರೀನಿವಾಸನ್ಹೇಳಿದ್ದಾರೆ.
ಅದೇ ವೇಳೆ ನಾನುನನ್ನ ವೈಯಕ್ತಿಕಆಸಕ್ತಿಗಳನ್ನು ಪಕ್ಕಕ್ಕಿಟ್ಟು ಕ್ರೀಡೆಯಒಳಿತಿಗಾಗಿ ದುಡಿಯುತ್ತೇನೆ ಎಂದು ಶ್ರೀನಿವಾಸನ್ ಭರವಸೆನೀಡಿದ್ದಾರೆ. ಆದಾಗ್ಯೂ, ಪ್ರಸ್ತುತ ಪ್ರಕರಣದಲ್ಲಿ ತಪ್ಪಿತಸ್ಥರುಯಾರೇ ಆಗಿದ್ದರೂಬಿಸಿಸಿಐ ಅವರಿಗೆ ಕಠಿಣ ಶಿಕ್ಷೆಯನ್ನು ವಿಧಿಸುವುದುಎಂದು ಅವರುಹೇಳಿದ್ದಾರೆ.
ಈ ನಡುವೆ ಹಗರಣದತನಿಖೆಗಾಗಿ ಬಿಸಿಸಿಐ ನಿಯಂತ್ರಣದಲ್ಲಿರುವಸ್ವತಂತ್ರ ತನಿಖಾ ತಂಡವೊಂದನ್ನು ರೂಪಿಸುವುದಾಗಿ ಶ್ರೀನಿವಾಸನ್ಹೇಳಿದ್ದಾರೆ.
ಸಿಎಸ್ಕೆ ತಂಡದ ಮಾಲೀಕಗುರುನಾಥ್ ಮೇಯಪ್ಪನ್ ಅವರ ಬಂಧನದ ಬಗ್ಗೆಮಾತನಾಡಿದ ಅವರು , ಸಮಿತಿಯು ಈಬಗ್ಗೆ ತನಿಖೆನಡೆಸಿ, ಮೇಯಪ್ಪನ್ದೋಷಿ ಎಂದಾದರೆಅವರಿಗೆ ಶಿಕ್ಷೆವಿಧಿಸಲಾಗವುದು ಎಂದಿದ್ದಾರೆ.
ಏತನ್ಮಧ್ಯೆ, ಬಿಸಿಸಿಐಯ ಸ್ವತಂತ್ರತನಿಖಾ ಸಮಿತಿಯಮೇಲೆ ನಿಮ್ಮಪ್ರಭಾವವಿರುವುದೇ? ಎಂಬ ಪ್ರಶ್ನೆಯನ್ನುಕೇಳಿದಾಗ, ನಾನು ಈ ಸಮಿತಿಯಲ್ಲಿರುವುದಿಲ್ಲ ಎಂದು ಬಿಸಿಸಿಐ ಅಧ್ಯಕ್ಷರು ಹೇಳಿದ್ದಾರೆ.
ತನಿಖೆ ಪೂರ್ಣಗೊಳ್ಳುವವರೆಗೆ ಗುರುನಾಥ್ ಅವರ ಎಲ್ಲ ಕೆಲಸಗಳಿಗೆನಿರ್ಬಂಧ ಹೇರಲಾಗುವುದು. ಅದೇ ವೇಳೆ ಗುರುನಾಥ್ದೋಷಿ ಎಂದುಸಾಬೀತಾಗುವವರೆಗೆ ಮಾಧ್ಯಮಗಳು ಅವರನ್ನುದೋಷಿ ಎಂದುಬಿಂಬಿಸುವುದನ್ನು ನಿಲ್ಲಿಸಬೇಕು ಎಂದುಹೇಳುವ ಮೂಲಕಶ್ರೀನಿವಾಸನ್ ಮಾಧ್ಯಮಗಳನ್ನು ಟೀಕಿಸಿದ್ದಾರೆ.
ಐಪಿಎಲ್ ಬಿಸಿಸಿಐಯ ಪ್ರಧಾನಭಾಗವಾಗಿದ್ದು, ಹಗರಣದ ಹೆಸರಲ್ಲಿ ಕ್ರೀಡೆಗೆ ಯಾವುದೇಸಮಸ್ಯೆಗಳು ಎದುರಾಗಲ್ಲ ಎಂದು ಹೇಳಿದ ಅವರು,ತಾನು ಬಿಸಿಸಿಐಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವ ಪ್ರಸಂಗಇಲ್ಲಿ ಉದ್ಭವಿಸುವುದೇಇಲ್ಲ ಎಂದುಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

