ಈಗಿನ ಸುದ್ದಿ

ನಕ್ಸಲ್ ದಾಳಿ: ಶುಕ್ಲ ಸ್ಥಿತಿ ಮತ್ತಷ್ಟು ಗಂಭೀರ

ನಕ್ಸಲ್ ದಾಳಿ: ಶುಕ್ಲ ಸ್ಥಿತಿ ಮತ್ತಷ್ಟು ಗಂಭೀರ
Published On :

ಗುರ್ಗಾವ್: ಛತ್ತೀಸ್‌ಗಡ್‌ದಲ್ಲಿ ನಡೆದ ಕಾಂಗ್ರೆಸ್ ಪರಿವರ್ತನ ರ್ಯಾಲಿ ಸಂದರ್ಭದಲ್ಲಿ ನಕ್ಸಲರ ದಾಳಿಗೆ ತುತ್ತಾಗಿದ್ದ ಕೇಂದ್ರದ ಮಾಜಿ ಗೃಹ ಸಚಿವ ವಿ.ಸಿ. ಶುಕ್ಲ ಅವರ ಆರೋಗ್ಯ ಪರಿಸ್ಥಿತಿ ಇಂದು ಮತ್ತಷ್ಟು ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಶುಕ್ಲ ಅವರಿಗೆ 84 ವರ್ಷ ವಯಸ್ಸಾಗಿದ್ದು, ಇಂತಹ ಸಂದರ್ಭದಲ್ಲಿ ಅವರ ದೇಹದೊಳಕ್ಕೆ 3 ಗುಂಡುಗಳು ಹೊಕ್ಕಿರುವುದರಿಂದ ಚಿಕಿತ್ಸೆಗೆ ಅವರ ದೇಹ ಸರಿಯಾಗಿ ಸ್ಪಂದಿಸುತ್ತಿಲ್ಲ್ಲ. ಇದರಿಂದಾಗಿ ಶುಕ್ಲ ಅವರ ಆರೋಗ್ಯ ಸ್ಥಿತಿ ದಿನೇ ದಿನೇ ಕ್ಷೀಣಿಸುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಶನಿವಾರ ಛತ್ತೀಸ್‌ಗಡದ ಜಗದಲ್‌ಪುರ ಜಿಲ್ಲೆಯ ದರ್ಬಗಾಟಿ ಕಣಿವೆಯಲ್ಲಿ ಕಾಂಗ್ರೆಸ್ ಪರಿವರ್ತನ್ ರ್ಯಾಲಿಯಲ್ಲಿ ಶುಕ್ಲ ಅವರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ನಕ್ಸಲರು ದಾಳಿ ನಡೆಸಿದ್ದು, ದಾಳಿಯಲ್ಲಿ ಶುಕ್ಲ ಅವರ ದೇಹದೊಳಕ್ಕೆ 3 ಗುಂಡುಗಳು ಹೊಕ್ಕಿವೆ.

ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಶುಕ್ಲರನ್ನು ಸ್ಥಳೀಯಾ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ, ಭಾನುವಾರ ಅವರನ್ನು ವಿಮಾನದ ಮೂಲಕ ದೆಹಲಿಯ ಗುರ್ಗಾವ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ತೀವ್ರ ನಿಗಾ ಘಟಕದಲ್ಲಿದ್ದು, ಆಸ್ಪತ್ರೆಯ ವೈದ್ಯರು ಅವರ ಆರೋಗ್ಯ ಪರಿಸ್ಥಿತಿ ಕ್ಷೀಣಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.