ಈಗಿನ ಸುದ್ದಿ

ಮುಸ್ಲಿಂರನ್ನು ವಿಶ್ವಾಸಕ್ಕೆ ತೆಗೆದುಕೊಂಡಾಗ ಅಭಿವೃದ್ಧಿ ಸಾಧ್ಯ: ಸಿಎಂ

ಮುಸ್ಲಿಂರನ್ನು ವಿಶ್ವಾಸಕ್ಕೆ ತೆಗೆದುಕೊಂಡಾಗ ಅಭಿವೃದ್ಧಿ ಸಾಧ್ಯ: ಸಿಎಂ
Published On :

ಬೆಂಗಳೂರು: ಹಿಂದುಗಳು ಮುಸ್ಲಿಂರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಆಗ ಮಾತ್ರ ದೇಶದ ಅಭಿವೃದ್ದಿ ಸಾಧ್ಯ ಎಂಬುದು ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಅವರ ಆಶಯವಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಹೇಳಿದ್ದಾರೆ.

ಮಹಾತ್ಮಾ ಗಾಂಧಿ ಅವರ 144ನೇ ಜನ್ಮ ದಿನಾಚರಣೆಯ ಅಂಗವಾಗಿ ಇಂದು ಕೆಪಿಸಿಸಿ ಕಚೇರಿಯಲ್ಲಿ ರಾಷ್ಟ್ರಪಿತನಿಗೆ ನಮನ ಸಲ್ಲಿಸಿ ಮಾತನಾಡಿದ ಅವರು, ಹಿಂದು-ಮುಸ್ಲಿಂರು ಒಟ್ಟಾಗಿ ಬಾಳಬೇಕು ಎಂದರು. ಹಿಂದುಗಳು ಮುಸ್ಲಿಂರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಆಗ ಮಾತ್ರ ದೇಶದ ಅಭಿವೃದ್ದಿ ಸಾಧ್ಯ ಎಂದು ಗಾಂಧಿಜಿಯವರ ಹೇಳಿದ್ದಾರೆ. ಆದರೆ ಇಂದು ನಾವೇನು ಮಾಡುತ್ತಿದ್ದೇವೆ? ಜಾತಿಯ ಹೆಸರಲ್ಲಿ ಮುಸ್ಲಿಂರನ್ನು ಕಂಡರೆ ಹಿಂದುಗಳಿಗೆ ಆಗಲ್ಲ. ಹಿಂದುಗಳನ್ನು ಕಂಡರೆ ಮುಸ್ಲಿಂರಿಗೆ ಆಗಲ್ಲ ಅಂತಹ ಪರಿಸ್ಥಿತಿ ಉಧ್ಬವವಾಗಿದೆ ಎಂದರು.

ರಾಷ್ಟ್ರಪಿತನ ಆದರ್ಶಗಳು ಇಂದು ಗಾಳಿಗೋಪುರಗಳಾಗುತ್ತಿವೆ. ಅವರ ಆದರ್ಶಗಳನ್ನು ನಾವುಗಳು ಪಾಲಿಸುತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಮತಾಂಧಕಾರದಲ್ಲಿ ಮುಳುಗಿ ಹಿಂದು-ಮುಸ್ಲಿಂರು ಬಡಿದಾಡಿಕೊಳ್ಳುತ್ತಿದ್ದಾರೆ. ಜಾತಿ ಹೆಸರಲ್ಲಿ ದೇಶದಲ್ಲಿ ಕೋಮುಗಲಭೆಗಳನ್ನು ಸೃಷ್ಠಿಸುತ್ತಿರುವ ಕೆಲವು ಕೋಮುವಾದಿಗಳು ಇಂದು ಗಾಂಧಿ ಹೆಸರನ್ನು ಹೇಳುವಂತಾಗಿದೆ ಇದು ದೇಶಕ್ಕೆ ಒದಗಿರುವ ದುಃಸ್ಥಿತಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಷ್ಟ್ರಪತಿನ ಆಶಯದಂತೆ ನಾವು ಬಾಳಬೇಕು ಆಗ ಮಾತ್ರ ಅವರ ಆದರ್ಶಗಳಿಗೆ ನಾವು ಗೌರವ ಕೊಟ್ಟಂತಾಗುತ್ತದೆ. ಹೀಗಾಗಿ ದೇಶದಲ್ಲಿ ಹಿಂದು-ಮುಸ್ಲಿಂರು ಒಟ್ಟಾಗಿ ಸಹ ಜೀವನ ನಡೆಸಬೇಕು. ಆಗ ದೇಶದ ಅಭಿವೃದ್ಧಿ ಜತೆಗೆ ದೇಶದಲ್ಲಿ ಸಮಗ್ರತೆ ಕಾಪಾಡಲು ಸಾಧ್ಯ ಎಂದು ಸಿದ್ದರಾಮಯ್ಯ ತಿಳಿಸಿದರು.

ಇಂದು ಕೆಪಿಸಿಸಿ ಕಚೇರಿಯಲ್ಲಿ ಗಾಂಧಿ ಜಯಂತಿ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಜಿ. ಪರಮೇಶ್ವರ್. ರಾಜ್ಯ ಗೃಹ ಸಚಿವ ಕೆ.ಜೆ ಜಾರ್ಜ್ ಸೇರಿದಂತೆ ಕಾಂಗ್ರೆಸ್ ಸಚಿವರು ಶಾಸಕರು ಭಾಗವಹಿಸಿದ್ದರು.

ಅಕ್ಟೋಬರ್ 2ರಂದು ಗಾಂಧಿ ಜನ್ಮದಿನವಾಗಿದ್ದು, ದೇಶಾದ್ಯಂತ ಇಂದು ಗಾಂಧಿ ಜಯಂತಿಯಾಗಿ ಆಚರಿಸಲಾಗುತ್ತದೆ. ಅಂತೆಯೇ ಮಹಾತ್ಮ ಗಾಂಧಿಜಿ ಅವರ ಅಹಿಂಸಾ ಚಳುವಳಿಗೆ ಪ್ರತೀಕವಾಗಿ ಇಂದು ವಿಶ್ವಾಧ್ಯಂತ ಅಹಿಂಸಾ ದಿನವಾಗಿ ಅಚರಿಸಲಾಗುತ್ತದೆ.

ಅ.2ರಂದು ವಿಶ್ವ ಅಹಿಂಸಾ ದಿನವಾಗಿ ಆಚರಿಸಬೇಕು: ಸಿಎಂ
ಗಾಂಧಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಚಿಂತನೆ ನಡೆಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಅವರು ಅಹಿಂಸಾ ತತ್ವವನ್ನು ದೇಶಕ್ಕೆ ಸಾರಿದ್ದರು. ಹೀಗಾಗಿ ಅ.2 ರಂದು ವಿಶ್ವ ಅಹಿಂಸಾ ದಿನವಾಗಿ ಆಚರಿಸಬೇಕು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.