ಈಗಿನ ಸುದ್ದಿ

ಅಸಾರಾಂ ಮತ್ತು ಪುತ್ರ ಸಾಯಿ ವಿರುದ್ಧ ಅತ್ಯಾಚಾರ ದೂರು ದಾಖಲು

ಅಸಾರಾಂ ಮತ್ತು ಪುತ್ರ ಸಾಯಿ ವಿರುದ್ಧ ಅತ್ಯಾಚಾರ ದೂರು ದಾಖಲು
Published On :

ಸೂರತ್: ವಿವಾದಿತ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಮತ್ತು ಆತನ ಪುತ್ರ ನಾರಾಯಣ್ ಸಾಯಿ ವಿರುದ್ಧ ಭಾನುವಾರ ಅತ್ಯಾಚಾರ ದೂರು ದಾಖಲಾಗಿದೆ.

ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಈಗಾಗಲೇ ಜೋಧ್‌ಪುರ್ ಕೇಂದ್ರ ಕಾರಾಗೃಹ ಸೇರಿರುವ ವಿವಾದಿತ ಅಸಾರಾಂ ಬಾಪು ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. ಅಸಾರಾಂ ಬಾಪು ಮತ್ತು ನಾರಾಯಣ್ ಸಾಯಿ, ತಾವು ಅಪ್ರಾಪ್ತ ವಯಸ್ಕರಾಗಿದ್ದ ಸಂದರ್ಭ ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಅಕ್ಕಿತಂಗಿಯರಿಬ್ಬರು ದೂರು ನೀಡಿದ್ದಾರೆ ಎಂದು ಸೂರತ್‌ನ ಪೊಲೀಸ್ ಆಯುಕ್ತ ರಾಕೇಶ್ ಅಸ್ತಾನಾ ಹೇಳಿದ್ದಾರೆ.

2002ರಿಂದ 2004ರವರೆಗೆ ಅಹಮದಾಬಾದ್‌ನ ಆಶ್ರಮದಲ್ಲಿ ಆಯುರ್ವೇದ ಔಷದಿ ತಯಾರಿಸಲು ಸಹಾಯಕರಾಗಿ ಕೆಲಸ ಮಾಡುತ್ತಿದ್ದ ವೇಳೆ ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ನೊಂದ ಯುವತಿಯರು ದೂರು ನೀಡಿದ್ದಾರೆ. ದೂರಿನಲ್ಲಿ ಅಹಮದಾಬಾದ್‌ನ ಆಶ್ರಮದಲ್ಲಿ ಹಿರಿಯ ಯುವತಿಯ ಮೇಲೆ ಅಸಾರಾಂ ಬಾಪು ಅತ್ಯಾಚಾರ ನಡೆಸಿದ್ದು, ಸೂರತ್‌ನಲ್ಲಿ ಕಿರಿಯ ಯುವತಿಯ ಮೇಲೆ ನಾರಾಯಣ್ ಸಾಯಿ ಅತ್ಯಾಚಾರ ನಡೆಸಿದ್ದರು ಎಂದು ದೂರಿದ್ದಾರೆ.

ಪೊಲೀಸರ ಪ್ರಕಾರ, ದೂರಿಗೆ ಸಂಬಂಧಿಸಿದಂತೆ ಅಸಾರಾಂ ಮತ್ತು ಆತನ ಪುತ್ರ ನಾರಾಯಣ್ ಸಾಯಿ ವಿರುದ್ಧ ಪ್ರತ್ಯೇಕ ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ. ಅಹಮದಾಬಾದ್‌ನ ಆಶ್ರಮದಲ್ಲಿ ಹಿರಿಯ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದು, ಇದಕ್ಕೆ ಅಸಾರಾಂ ಪತ್ನಿ ಲಕ್ಷ್ಮಿ ಮತ್ತು ಪುತ್ರಿ ಭಾರ್ತಿ ಸಹಕರಿಸಿದ್ದಾಗಿ ಯುವತಿಯರು ದೂರಿನಲ್ಲಿ ತಿಳಿಸಿದ್ದರಿಂದ ಅವರ ವಿರುದ್ಧ ಸಹ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು. ಅಹಮದಾಬಾದ್‌ನ ಆಶ್ರಮದಲ್ಲಿ ಹಿರಿಯ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದರಿಂದ ಅಸಾರಾಂ ವಿರುದ್ಧದ ದೂರನ್ನು ಅಹಮದಾಬಾದ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ನಾರಾಯಣ್ ಸಾಯಿಯನ್ನು ಶೀಘ್ರದಲ್ಲೇ ಕರೆಸಿ ಪ್ರಶ್ನಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪವನ್ನು ತಳ್ಳಿಹಾಕಿರುವ ಅಸಾರಾಂ ಬಾಪು ವಕ್ತಾರ ನೀಲಂ ದುಬೆ ಅವರು, 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೈಲು ಸೇರಿರುವ ಅಸಾರಾಂ ಹಾಗೂ ಸಾಯಿ ವಿರುದ್ಧ ಸುಳ್ಳು ದೂರು ದಾಖಲಾಗಿದೆ. ಇದೊಂದು ಸುಳ್ಳು ಆರೋಪ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.