ಮುರಿದು ಬಿದ್ದ ವಾಲ್ಮಾರ್ಟ್-ಭಾರ್ತಿ ಒಪ್ಪಂದ
ನವದೆಹಲಿ: ಚಿಲ್ಲರೆ ಮಾರುಕಟ್ಟೆಯಲ್ಲಿ ಒಟ್ಟಾಗಿ ಸೇರಿ ವಹಿವಾಟು ನಡೆಸಲು ಮುಂದಾಗಿದ್ದ ಜಾಗತಿಕ ಚಿಲ್ಲರೆ ವ್ಯಾಪಾರ ಕ್ಷೇತ್ರದ ದೈತ್ಯ ವಾಲ್ಮಾರ್ಟ್ ಕಂಪನಿ, ತನ್ನ ಭಾರತೀಯ ಸಹಯೋಗದ ಭಾರ್ತಿ ಸಂಸ್ಥೆಯ ನಡುವಿನ ಒಪ್ಪಂದವನ್ನು ಬುಧವಾರ ಕಡಿದುಕೊಂಡಿದೆ.
ಚಿಲ್ಲರೆ ಮಾರುಕಟ್ಟೆ ಕ್ಷೇತ್ರದಲ್ಲಿ ಜಂಟಿಯಾಗಿ ಕಾರ್ಯಾನಿರ್ವಹಿಸಲು ಈ ಎರಡು ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿದ್ದವು. ಆದರೆ ಎರಡು ಕಂಪನಿಗಳು ನಡುವೆ ವ್ಯವಹಾರಿಕ ಸಂಬಂಧ ಕೂಡಿಬರದ ಹಿನ್ನೆಲೆಯಲ್ಲಿ ಎರಡು ಸಂಸ್ಥೆಗಳು ಸ್ವತಂತ್ರವಾಗಿ ವ್ಯವಹಾರ ನಡೆಸಲು ಮುಂದಾಗಿವೆ. ವಾಲ್ಮಾರ್ಟ್ ಸಂಸ್ಥೆ ಭಾರತದಲ್ಲಿ ಭಾರ್ತಿ ವಾಲ್ಮಾರ್ಟ್ ಪ್ರೈವೇಟ್ ಲಿಮಿಟೆಡ್ನಲ್ಲಿ ಶೇ 50:50 ರಷ್ಟು ಒಪ್ಪಂದ ಮಾಡಿಕೊಂಡಿತ್ತು. ಆದರೆ ಇದೀಗ ಆ ಒಪ್ಪಂದ ಅಂತ್ಯಗೊಂಡಿದೆ.
ಈ ಸಂಬಂಧ ಇಂದು ವರದಿಗಾರರಿಗೆ ಮಾಹಿತಿ ನೀಡಿದ ಎರಡು ಸಂಸ್ಥೆಗಳು ಇನ್ನು ಮುಂದೆ ವಾಲ್ಮಾರ್ಟ್ ಸಂಸ್ಥೆ ಹಾಗೂ ಭಾರ್ತಿ ವಾಲ್ಮಾರ್ಟ್ ಸಂಸ್ಧೆ ಪ್ರತ್ಯೇಕವಾಗಿ ವ್ಯವಹಾರ ನಡೆಸಲಿವೆ ಎಂಬ ಮಾಹಿತಿ ನೀಡಿವೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಭಾರ್ತಿ ವಾಲ್ಮಾರ್ಟ್ನ ಉಪಾಧ್ಯಕ್ಷ ಎಂ.ಡಿ ರಾಜನ್ ಭಾರ್ತಿ ಮಿತ್ತಲ್ ಅವರು, ಚಿಲ್ಲರೆ ಕ್ಷೇತ್ರದಲ್ಲಿ ಜಾಗತಿಕ ಚಿಲ್ಲರೆ ಕ್ಷೇತ್ರದ ದೈತ್ಯ ವಾಲ್ಮಾರ್ಟ್ ಸಂಸ್ಥೆಯೊಂದಿಗೆ ಶೇ.50 ರಷ್ಟು ಪಾಲುದಾರಿಕೆಯನ್ನು ಮಾಡಿಕೊಂಡಿತ್ತು. ಆದರೆ ಇಂದು ಈ ಎರಡು ಸಂಸ್ಥೆಗಳು ಸ್ವತಂತ್ರವಾಗಿ ವ್ಯವಹಾರ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಇದೇ ವೇಳೆ ಭಾರ್ತಿ ಸಂಸ್ಥೆಯು ಭಾರತದ ಚಿಲ್ಲರೆ ಕ್ಷೇತ್ರದಲ್ಲಿ ಉತ್ತಮ ದರ್ಜೆಯ ಉತ್ಪನ್ನಗಳನ್ನು ನೀಡುತ್ತಾ ಬಂದಿದೆ. ನಮ್ಮ ಸಂಸ್ಥೆಯ ಮೇಲೆ ಜನರು ಹೆಚ್ಚು ಭರವಸೆ ಇಟ್ಟಿದ್ದಾರೆ. ಭಾರತದಲ್ಲಿ ಸುಮಾರು 212 ಸಂಸ್ಥೆಗಳು ಹೊಂದಿರುವ ಭಾರ್ತಿ ಸಂಸ್ಥೆ ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಉತ್ತಮ ಮಟ್ಟದ ಉತ್ಪನ್ನಗಳನ್ನು ನೀಡಲಿದೆ ಎಂದರು.
ಭಾರತವನ್ನು ಪ್ರವೇಶಿಸಲು ವಾಲಾಮಾರ್ಟ್ ಸಂಸ್ಥೆ ಅಮೆರಿಕಾದಲ್ಲಿ ಲಾಬಿ ನಡೆಸಿದರು ಭಾರತದಲ್ಲಿ ಭದ್ರವಾಗಿ ನೆಲೆಯೂರಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಭಾರ್ತಿ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಈ ಎರಡು ಸಂಸ್ಥೆಗಳ ನಡುವಣ ಒಪ್ಪಂದ ಮುರಿದು ಬಿದ್ದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

