ಈಗಿನ ಸುದ್ದಿ

ತೆಲುಗು ಚಿತ್ರ ನಟ ಶ್ರೀಹರಿ ನಿಧನ

ತೆಲುಗು ಚಿತ್ರ ನಟ ಶ್ರೀಹರಿ ನಿಧನ
Published On :

ಮುಂಬೈ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ತೆಲಗು ಚಿತ್ರ ನಟ ಶ್ರೀಹರಿ(49) ಅವರು ಬುಧವಾರ ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಹರಿ ಅವರು ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ವಿಲನ್ ಆಗಿ ಎಂಟ್ರಿ ಪಡೆದಿದ್ದ ಅವರು ಮುಂದೆ ಹಲವು ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದರು. ದೇಶ ವಿದ್ರೋಹಿ ಕೆಲಸಗಳಲ್ಲಿ ತೊಡಗಿಕೊಂಡಿದ್ದ ಖಳನಾಯಕರನ್ನು ಹತ್ತಿಕ್ಕುವ ಪೊಲೀಸ್ ಪಾತ್ರಗಳಲ್ಲಿ ನಟಿಸಿದ್ದರು.

ತೆಲುಗಿನ ಮಗಧೀರ, ಬೃಂದಾವನಂ, ನೇನು ವಸ್ತಾನಂಟೆ ನುವ್ವ ಒದ್ದಂಟವಾ, ಚಿತ್ರಗಳಲ್ಲಿ ನಟಿಸಿದ್ದ ಅವರು, ಕೊನೆಯದಾಗಿ ರಾಮ್ ಚರಣ್ ತೇಜಾ ನಟನೆಯ ತೂಫಾನ್  ಚಿತ್ರದಲ್ಲಿನ ನಟನೆಯು ಶ್ರೀಹರಿ ಅವರಿಗೆ ಹೆಚ್ಚು ಜನ ಮನ್ನಣೆಯನ್ನು ತಂದು ಕೊಟ್ಟಿತ್ತು. ತೆಲುಗಿನಲ್ಲಿ ಸುಮಾರು 90 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದರು. ಹೆಚ್ಚಾಗಿ ಆಕ್ಷನ್ ಪಾತ್ರಗಳನ್ನೇ ಮಾಡುತ್ತಾ ಬಂದಿದ್ದಾ ಅವರು ಎಲ್ಲಾ ರಂಗದ ಚಿತ್ರ ರಸಿಕರನ್ನು ಆಕರ್ಷಿಸಿದ್ದರು.

ಕನ್ನಡದ ಕೋಕೋ, ಓ ಪ್ರೇಮವೆ ಮತ್ತು ಒಂದಾಗೋಣ ಬಾ ಚಿತ್ರಗಳಲ್ಲಿ ನಟಿಸಿದ್ದ ಅವರು ಕನ್ನಡ ಚಿತ್ರರಸಿಕರಿಗು ಚಿರಪರಿಚಿತರಾಗಿದ್ದರು.

ಶ್ರೀಹರಿ ನಿಧನ ಸುದ್ದಿ ತಿಳಿಯುತ್ತಿದಂತೆ ತೆಲುಗು ಚಿತ್ರರಂಗ ಕಂಬನಿ ಮಿಡಿದಿದೆ. ಚಿತ್ರರಂಗ ಒಬ್ಬ ಪ್ರಖ್ಯಾತ ಚಿತ್ರ ನಟನನ್ನು ಕಳೆದುಕೊಂಡಿದೆ.

ನಟಿ ಡಿಸ್ಕೋ ಶಾಂತಿ ಅವರನ್ನು ಕೈಹಿಡಿದಿದ್ದ ಶ್ರೀಹರಿ, ಬಹುಭಾಷಾ ನಟ ಪ್ರಕಾಶ್ ರೈ ಅವರ ಸೋದರ ಸಂಬಂಧಿಯಾಗಿದ್ದರು. ಇವರು ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಮಗಳನ್ನು ಅಗಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.