ಈಗಿನ ಸುದ್ದಿ

ನಿರಶನ ಸ್ಥಳದಿಂದ ಚಂದ್ರಬಾಬು ಎತ್ತಂಗಡಿ

ನಿರಶನ ಸ್ಥಳದಿಂದ ಚಂದ್ರಬಾಬು ಎತ್ತಂಗಡಿ
Published On :

ನವದೆಹಲಿ: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ತೆಲುಗುದೇಶಂ ಪಕ್ಷದ ಮುಖಂಡ ಚಂದ್ರಬಾಬು ನಾಯ್ಡು ಅವರನ್ನು ದೆಹಲಿ ಪೊಲೀಸರು ಶುಕ್ರವಾರ ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಖಂಡ ಆಂಧ್ರಕ್ಕಾಗಿ ಆಗ್ರಹಿಸಿ ಕಳೆದ 5 ದಿನಗಳಿಂದ ದೆಹಲಿಯ ಆಂಧ್ರಭವನದ ಮುಂದೆ ಚಂದ್ರ ಬಾಬು ಅವರು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಐದು ದಿನಗಳಿಂದ ನಿರಂತರವಾಗಿ ಉಪವಾಸ ಕೈಗೊಂಡಿದ್ದ ಹಿನ್ನೆಲೆಯಲ್ಲಿ ಅವರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿದ್ದರಿಂದ ದೆಹಲಿ ಪೊಲೀಸರು ಬಲವಂತವಾಗಿ ಅವರನ್ನು ದೆಹಲಿಯ ಆರ್‌ಎಂಎಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಂಧ್ರ ವಿಭಜನೆ ಹಿನ್ನೆಲೆಯಲ್ಲಿ ಸೀಮಾಂಧ್ರದಾದ್ಯಂತ ಹೋರಾಟದ ಕಾವು ತೀವ್ರಗೊಂಡಿದ್ದು, ಚಂದ್ರ ಬಾಬು ಇದಕ್ಕೆ ಪೂರಕವಾಗಿ ನವದೆಹಲಿಯಲ್ಲಿರುವ ಆಂಧ್ರಭವನದ ಮುಂದೆ ಸೋಮವಾರ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಇದೇ ವೇಳೆ, ಬಾಬು ಅವರ ಬೆಂಬಲಿಗರು ಸಹ ಭವನದ ಮುಂಭಾಗ ಜಮಾಹಿಸಿದ್ದು, ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು.

ಆಂಧ್ರಭವನದ ಮುಂದೆ ಸುದ್ದಿಗೋಷ್ಠಿ ನಡೆಸಲು ಅನುಮತಿ ನೀಡಲಾಗಿತ್ತೇ ಹೊರತು ನಿರಶನಕ್ಕಲ ಎಂದು ಆಂಧ್ರಭವನದ ಆಯುಕ್ತರು ಬಾಬು ಅವರಿಗೆ ನೋಟಿಸು ನೀಡಿದ್ದರು. ಇದನ್ನು ಧಿಕ್ಕರಿಸಿ ಚಂದ್ರ ಬಾಬು ಉಪವಾಸದಲ್ಲಿ ನಿರತರಾಗಿದ್ದರು. ದಿನ ಕಳೆದಂತೆ ಅವರ ಆರೋಗ್ಯದಲ್ಲಿ ವ್ಯತ್ಯಾಸಗಳು ಉಂಟಾದ ಹಿನ್ನೆಲೆಯಲ್ಲಿ ಉಪವಾಸ ಕೈಬಿಡುವಂತೆ ಪೊಲೀಸರು ಸಹ ಮನವಿ ಮಾಡಿದ್ದರು. ಆದರೆ ಇದನ್ನು ನಿರಾಕರಿಸಿ ಉಪವಾಸದಲ್ಲಿ ನಿರತರಾಗಿದ್ದ ಅವರನ್ನು ಇಂದು ಪೊಲೀಸರು ಬಲವಂತವಾಗಿ ಕರೆದೋಯ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.