ಒಪಿಸಿಡಬ್ಲೂಗೆ ನೊಬಲ್ 'ಶಾಂತಿ' ಪ್ರಶಸ್ತಿ

ಓಸ್ಲೋ: ರಾಸಾಯನಿಕಗಳಿಂದ ಯಾವುದೇ ಜೀವ ಸಂಕುಲಕ್ಕೆ ಹಾನಿಯಾಗದಂತೆ ಶ್ರಮಿಸುತ್ತಿರುವ ರಾಸಾಯನಿಕ ಶಸ್ತ್ರಾಸ್ತ್ರಗಳ ನಿಷೇಧ ಸಂಘಟನೆ(ಒಪಿಸಿಡಬ್ಲೂ)ಗೆ ಶುಕ್ರವಾರ 2013ರ ನೊಬಲ್ ಶಾಂತಿ ಪ್ರಶಸ್ತಿ ದೊರಕಿದೆ.
ರಾಸಾಯನಿಕಗಳಿಂದ ಯಾವುದೇ ಜೀವ ಸಂಕುಲಕ್ಕೆ ಹಾನಿಯಾಗದಂತೆ ಆ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ನಾಶಪಡಿಸಲು ಶ್ರಮಿಸುತ್ತಿರುವ ನೆದರ್‌ಲ್ಯಾಂಡ್ ಮೂಲದ ಒಪಿಸಿಡಬ್ಲೂಗೆ ನೊಬಲ್ ಶಾಂತಿ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯೊಂದಿಗೆ ಸುಮಾರು 1.25 ಮಿಲಿಯನ್ ಡಾಲರ್ ಮೊತ್ತ ಹೊಂದಿದೆ. ಓಸ್ಲೋದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಡಿಸೆಂಬರ್ 10 ರಂದು ಸ್ವೀಡಿಷ್ ಮೂಲದ ಉದ್ಯಮಿ ಆಲ್ಫ್ರೆಡ್ ನೊಬೆಲ್ ಅವರ ಪುಣ್ಯ ತಿಥಿಯ ಅಂಗವಾಗಿ ಈ ಕಾರ್ಯಕ್ರಮ ನಡೆಯಲಿದೆ.
ಕಳೆದ ಮೂರು ವರ್ಷಗಳಿಂದ ಸಿರಿಯಾದಲ್ಲಿ ತಲೆದೋರಿದ್ದ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದಂಗೆಯೆದ್ದಿದ್ದ ನಾಗರಿಕರನ್ನು ಹತ್ತಿಕ್ಕಲು ಅಲ್ಲಿನ ಸರ್ಕಾರ ರಾಸಾಯನಿಕ ಅಸ್ತ್ರ ಬಳಸಿ ಸುಮಾರು 1400 ಮಂದಿ ಹತ್ಯೆಗೆ ಕಾರಣವಾಗಿತ್ತು. ಸಿರಿಯಾ ಸರ್ಕಾರದ ಈ ಕ್ರಮವನ್ನು ಒಪಿಸಿಡಬ್ಲೂ ತೀವ್ರವಾಗಿ ಖಂಡಿಸಿ, ಈ ರಸಾಯನಿಕ ಅಸ್ತ್ರಗಳನ್ನು ನಾಶಪಡಿಸಬೇಕು ಎಂದು ಹೋರಾಡುತ್ತಾ ಬಂದಿತ್ತು. ಈ ಹಿನ್ನೆಲೆಯಲ್ಲಿ ಒಪಿಸಿಡಬ್ಲೂ ಪ್ರಸಕ್ತ ಸಾಲಿನ ನೊಬಲ್ ಶಾಂತಿ ಪುರಸ್ಕಾರಕ್ಕೆ ಪಾತ್ರವಾಗಿದೆ.
ಮಲಾಲ ಕೈ ತಪ್ಪಿದ ನೊಬಲ್ ಶಾಂತಿ
ಪಾಕಿಸ್ತಾನದ ಮಾವನ ಹಕ್ಕುಗಳು ಹೋರಾಟಗಾರ್ತಿ ಮಲಾಲ ಯೂಸುಫ್‌ಜಾಯಿ ಅವರಿಗೆ ಪ್ರಸಕ್ತ ಸಾಲಿನ ನೊಬಲ್ ಶಾಂತಿ ಪ್ರಶಸ್ತಿ ಕೈತಪ್ಪಿದೆ. ಪಾಕಿಸ್ತಾನದ ದಿವಂಗತ ಪ್ರಧಾನಿ ಬೆನಜೀರ್ ಭುಟ್ಟೋ ಅವರಂತೆ ಪಾಕಿಸ್ತಾನದ ಪ್ರಧಾನಿಯಾಗಬೇಕು ಎಂಬ ಹಂಬಲ ವ್ಯಕ್ತಪಡಿಸಿದ್ದ ಮಲಾಲಗೆ ಈ ಬಾರಿಯ ನೊಬಲ್ ಶಾಂತಿ ಪ್ರಶಸ್ತಿ ಲಭಿಸಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ಹೆಣ್ಣು ಮಕ್ಕಳ ಶಿಕ್ಷಣದ ಕುರಿತಾಗಿ ಮಾತನಾಡಿದ ಮಲಾಲ ಮೇಲೆ ತಾಲಿಬಾನ್ ಉಗ್ರರು, ಆಕೆ ಶಾಲೆಗೆ ಹೋಗುತ್ತಿದ್ದ ಬಸ್ ಮೇಲೆ ದಾಳಿ ಮಾಡಿ ಅತ್ಯಂತ ಸಮೀಪದಿಂದ ಮಾಲಾಲ ಮೇಲೆ ಗುಂಡು ಹಾರಿಸಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಲಾಲಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಇಂಗ್ಲೆಂಡ್‌ನಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದು ಗುಣಮುಖರಾಗಿದ್ದ ಮಲಾಲ ಅಂದಿನಿಂದ ಬಹಿರಂಗವಾಗಿ ಹೆಣ್ಣು ಮಕ್ಕಳ ಶಿಕ್ಷಣದ ಕುರಿತಾಗಿ ಘಂಟಾ ಘೋಷವಾಗಿ ಮಾಡನಾಡಲು ಪ್ರಾರಂಭಿಸಿದ್ದಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


