ಯೋಗೇಶ್ವರ್ ಜತೆ ಭಿನ್ನಾಭಿಪ್ರಾಯ, ಎಸ್ಪಿಗೆ ಇಂದು ರಾಜಿನಾಮೆ: ಬಿದರಿ
ಬೆಂಗಳೂರು: ಮಾಜಿ ಸಚಿವ ಹಾಗೂ ರಾಜ್ಯದ ಏಕೈಕ ಸಮಾಜವಾದಿ ಪಕ್ಷ(ಎಸ್ಪಿ)ದ ಶಾಸಕ ಸಿ.ಪಿ.ಯೋಗೇಶ್ವರ್ ಅವರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ತಾವು ಪಕ್ಷ ತೊರೆಯುತ್ತಿರುವುದಾಗಿ ಮಾಜಿ ಎಸ್ಪಿ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಅವರು ಶನಿವಾರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿದರಿ, ಇಂದು ಸಂಜೆ ಎಸ್ಪಿ ನೂತನ ರಾಜ್ಯಾಧ್ಯಕ್ಷ ಬಾಬಾಗೌಡ ಪಾಟೀಲ್ ಅವರನ್ನು ಭೇಟಿ ಮಾಡಿ, ಪಕ್ಷಕ್ಕೆ ರಾಜಿನಾಮೆ ನೀಡುವುದಾಗಿ ಶಂಕರ್ ಬಿದರಿ ತಿಳಿಸಿದ್ದಾರೆ.
ಇದೇ ವೇಳೆ ತಮ್ಮ ಮುಂದಿನ ನಡೆ ಬಗ್ಗೆ ಉತ್ತರಿಸಿದ ಬಿದರಿ, ಅಕ್ಟೋಬರ್ 22ರ ಬಳಿಕ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದರು. ರಾಜಕೀಯಕ್ಕೆ ಬಂದು ಒಂದು ವರ್ಷದಲ್ಲೇ ಎರಡು ಪಕ್ಷದಿಂದ ನಾನು ಹೊರಬರಬೇಕಾಯಿತು. ಇದಕ್ಕೆ ಪಕ್ಷಗಳಲ್ಲಿನ ದೋಷಗಳೇ ಕಾರಣ ಎಂದರು. ಅಲ್ಲದೆ ಎಲ್ಲಾ ಪಕ್ಷಗಳಲ್ಲೂ ದೋಷಗಳಿವೆ. ಹೀಗಾಗಿ ಹೊಸ ಪಕ್ಷ ರಚನೆ ಮಾಡುವಂತೆ ನನ್ನ ಹಿತೈಷಿಗಳು ಹೇಳಿದ್ದಾರೆ ಮತ್ತು ಬೇರೆ ಪಕ್ಷ ಸೇರ್ಪಡೆ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಹೇಳಿದರು.
ನನಗೆ ತಾಳ್ಮೆ ಕಡಿಮೆ ಇದೆ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಫೈಲ್ ಬಂದರೆ ಎಸ್ ಅಥವಾ ನೋ ಆಗಬೇಕು. ವೇಯ್ಟಿಂಗ್ ಮೂಡ್ ನನಗೆ ಹೊತ್ತಿಲ್ಲ. ನಾನು ಬೆಳದಿದ್ದೇ ಹಾಗೆ ಎಂದು ನಿವೃತ್ತಿ ಐಪಿಎಸ್ ಅಧಿಕಾರಿ, ಪಕ್ಕಾ ತಮ್ಮ ಪೊಲೀಸ್ ಭಾಷೆಯಲ್ಲೇ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

