ಮುಂಬೈನಲ್ಲೇ ಸಚಿನ್ 200ನೇ ಟೆಸ್ಟ್ ಪಂದ್ಯ

ಮುಂಬೈ: ಭಾರತ-ವೆಸ್ಟ್ ಇಂಡೀಸ್ ನಡುವಿನ ಸರಣಿ ಕ್ರಿಕೆಟ್ ಪಂದ್ಯಗಳನ್ನು ಈಡನ್ ಗಾರ್ಡನ್ ಮತ್ತು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಅಂದಹಾಗೆ ಕ್ರಿಕೆಟ್ಗೆ ವಿದಾಯ ಹೇಳಲಿರುವ ಸಚಿನ್ ತೆಂಡೂಲ್ಕರ್ ತಮ್ಮ 200ನೇ ಟೆಸ್ಟ್ ಪಂದ್ಯವನ್ನು ಮುಂಬೈನಲ್ಲಿ ಆಡಲಿದ್ದಾರೆ.
ಮಂಗಳವಾರ ನಡೆದ ಸಭೆಯಲ್ಲಿ ಬಿಸಿಸಿಐ ಈ ತೀರ್ಮಾನ ಕೈಗೊಂಡಿದ್ದು, ವಾಂಖೆಡೆ ಸ್ಟೇಡಿಯಂ ಸಚಿನ್ ಅವರ ಕೊನೆಯ ಪಂದ್ಯಕ್ಕೆ ಸಾಕ್ಷಿಯಾಗಲಿದೆ.
ನವೆಂಬರ್ 6ನೇ ತಾರೀಖಿನಂದು ಆರಂಭವಾಗುವ ಈ ಪ್ರವಾಸ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 2 ಟೆಸ್ಟ್ ಹಾಗು 3 ಏಕದಿನ ಪಂದ್ಯಗಳನ್ನಾಡಲಿದೆ.
ತೆಂಡೂಲ್ಕರ್ ಕೊಲ್ಕತ್ತಾದಲ್ಲಿ 199ನೇ ಪಂದ್ಯವನ್ನಾಡಿದ ನಂತರ, 200ನೇ ಟೆಸ್ಟ್ ಮುಂಬೈನಲ್ಲಿ ಆಡಿ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ.
ಮೊದಲ ಎರಡು ಏಕದಿನ ಪಂದ್ಯಗಳು ಕೊಚ್ಚಿ ಮತ್ತು ವಿಶಾಖಪಟ್ಟಣಂನಲ್ಲಿ ನಡೆಯಲಿದ್ದು, ಮೂರನೇ ಏಕದಿನ ಪಂದ್ಯ ನಡೆಯುವ ಸ್ಥಳ ಇನ್ನೂ ನಿಕ್ಕಿಯಾಗಿಲ್ಲ.
ಆದಾಗ್ಯೂ, ಸಚಿನ್ ಅವರಿಗೆ ಅದ್ದೂರಿಯಾಗಿ ವಿದಾಯ ಹೇಳಲು ಬಿಸಿಸಿಐ ತೀರ್ಮಾನಿಸಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯಗಳು ನಡೆಯಲಿರುವ ದಿನಾಂಕ ಹಾಗು ಸ್ಥಳ
ಅಕ್ಟೋಬರ್ 28: ವೆಸ್ಟ್ ಇಂಡೀಸ್ ಕ್ರಿಕೆಟ್ ಟೀಂ ಭಾರತಕ್ಕೆ ಆಗಮನ
ಅಕ್ಟೋಬರ್ 31-ನವಂಬರ್ 2: ಮೂರು ದಿನಗಳ ಪಂದ್ಯ (ವೆಸ್ಟ್ ಇಂಡೀಸ್ v/s ಯುಪಿಸಿಎ , ಕಟಕ್)
ನವಂಬರ್ 6-10: ಮೊದಲ ಪಂದ್ಯ, ಕೊಲ್ಕತ್ತಾ
ನವಂಬರ್ 14-18: ದ್ವಿತೀಯ ಪಂದ್ಯ, ಮುಂಬೈ
ನವಂಬರ್ 21: ಮೊದಲ ಏಕದಿನ ಪಂದ್ಯ , ಕೊಚ್ಚಿ
ನವಂಬರ್ 24: ದ್ವಿತೀಯ ಏಕದಿನ ಪಂದ್ಯ, ವಿಶಾಖಪಟ್ಟಣಂ
ನವಂಬರ್ 27: ತೃತೀಯ ಏಕದಿನ ಪಂದ್ಯ, ಬರೋಡಾ /ಕಾನ್ಪುರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


